ಕೋಲಾರ: ಅನಾರೋಗ್ಯದಿಂದ ಬಳಲುತ್ತಿರುವ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಆನೆ ‘ಲಕ್ಷ್ಮಿ’ ಜಿಲ್ಲೆಯ ಖಾಜಿಕಲ್ಲಹಳ್ಳಿ ಗ್ರಾಮದ ಬಳಿಯ ಲಕ್ಷ್ಮಿಪುರ ಅರಣ್ಯ ವಲಯದಲ್ಲಿರುವ ‘ಆನೆಗಳ ಆರೈಕೆ ಕೇಂದ್ರ’ಕ್ಕೆ ಬುಧವಾರ ಬಂದಿಳಿಯಿತು.

ಆನೆಯ ಮಾವುತ ರಾಜಣ್ಣ, ಅವರ ಮೊಮ್ಮಗ ಭುವನ್, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಮಂಜುನಾಥ್ ಸಹಿತ ನಾಲ್ಕಾರು ಮಂದಿ ಆನೆ ಜೊತೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಲುಪಿದರು. ಆನೆಯನ್ನು ಚಿಕಿತ್ಸೆಗಾಗಿ ಇಲ್ಲಿಗೆ ಕರೆತರಲಾಗಿದೆ. ಮೂರು ತಿಂಗಳು ಇಲ್ಲಿ ಇರಲಿದ್ದು, ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.

ಸುಮಾರು 12 ಗಂಟೆ ಪ್ರಯಾಣ ಮಾಡಿ ಬಸವಳಿದಿದ್ದ ಆನೆಗೆ ಸ್ನಾನ ಮಾಡಿಸಲಾಯಿತು. ಬಳಿಕ ದೇವರ ಪ್ರಸಾದ ಹಚ್ಚಿ, ಬಿಸಿಲಿನ ಝಳ ತಗ್ಗಿಸುವ ನಿಟ್ಟಿನಲ್ಲಿ ಕಲ್ಲಂಗಡಿ ಹಣ್ಣು ಸಹಿತ ಅದಕ್ಕೆ ಇಷ್ಟವಾದ ಆಹಾರ ನೀಡಲಾಯಿತು.

‘ಕೆಲವು ದಿನ ಆನೆಯ ಜತೆಗೆ ಇದ್ದು ಊರಿಗೆ ಹೋಗುತ್ತೇನೆ. ಈ ವಾತಾವರಣಕ್ಕೆ ಒಗ್ಗಿಕೊಳ್ಳುವ ತನಕ ಆನೆಯ ಜತೆ ಇರಬೇಕಾಗುತ್ತದೆ’ ಎಂದು ಮಾವುತ ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

36 ವರ್ಷದ ಈ ಹೆಣ್ಣಾನೆಯನ್ನು ನಸುಕಿನಲ್ಲೇ ಲಾರಿಗೆ ಹತ್ತಿಸಲಾಗಿತ್ತು. ಆ ಭಾಗದಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಇಲ್ಲದ ಕಾರಣ ಕೋಲಾರಕ್ಕೆ ಕರೆತರಲಾಗಿದೆ.

ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ವಸಂತ ವೈಭವ ಜಾನಪದ ಕಲಾಜಾಥಾದ ವೇಳೆ ಜಂಬೂಸವಾರಿ ನಡೆಯುತ್ತದೆ. ಲಕ್ಷ್ಮಿ ಆನೆಯು ಭುವನೇಶ್ವರಿಯನ್ನು ಒಳಗೊಂಡ ಅಂಬಾರಿ ಹೊತ್ತು ಸಾಗುತ್ತದೆ.

20 ಎಕರೆ ಪ್ರದೇಶ: ಖಾಜಿಕಲ್ಲಹಳ್ಳಿ ಗ್ರಾಮದ ಬಳಿಯ ಲಕ್ಷ್ಮಿಪುರ ಅರಣ್ಯ ವಲಯದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ‘ಆನೆಗಳ ಆರೈಕೆ ಕೇಂದ್ರ’ ಸ್ಥಾಪಿಸಲಾಗಿದೆ. ಸದ್ಯ ಇಲ್ಲಿ ಆರು ಆನೆಗಳು ಇವೆ. ವಯಸ್ಸಾದ, ಗಾಯಗೊಂಡ ಹಾಗೂ ಅನಾರೋಗ್ಯಪೀಡಿತ ಆನೆಗಳನ್ನೂ ಇಲ್ಲಿ ಆರೈಕೆ ಮಾಡಲಾಗುತ್ತದೆ.

ಅರಣ್ಯ ಇಲಾಖೆಯು ಜಾಗ ಹಾಗೂ ಮೂಲ ಸೌಲಭ್ಯ ಕಲ್ಪಿಸಿದೆ. ಆಧುನಿಕ ಅಡುಗೆ ಕೋಣೆ ಸೇರಿದಂತೆ ಆನೆಗಳ ಸಾಕಣೆಗೆ ಬೇಕಾದ ಸುಸಜ್ಜಿತ ಸೌಲಭ್ಯ ಇಲ್ಲಿದೆ. ಮಾವುತರು, ಪಶು ವೈದ್ಯರು ಹಾಗೂ ಸಿಬ್ಬಂದಿ ಇಲ್ಲಿದ್ದಾರೆ. ಸುತ್ತಲೂ ವಿದ್ಯುತ್ ಬೇಲಿ ಹಾಕಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.

ಅರಣ್ಯ ಇಲಾಖೆಯ ಸಹಯೋಗದಲ್ಲಿ ವೈಲ್ಡ್ಲೈಫ್ ರೆಸ್ಕ್ಯೂ ಅಂಡ್ ರಿಹ್ಯಾಬಿಲಿಟೇಷನ್ ಸೆಂಟರ್ (ಡಬ್ಲ್ಯುಆರ್ಆರ್ಸಿ–ವನ್ಯಪ್ರಾಣಿಗಳ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ) ಎಂಬ ಬೆಂಗಳೂರಿನ ಸ್ವಯಂಸೇವಾ ಸಂಸ್ಥೆಯು ಈ ಕೇಂದ್ರ ನಿರ್ವಹಿಸುತ್ತಿದೆ.

ಆನೆಗಳ ಆರೈಕೆ ಬಗ್ಗೆ ಕಂಪ್ಯಾಷನ್ ಅನ್ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯುಪಾ) ಹಲವು ವರ್ಷಗಳಿಂದ ಅಧ್ಯಯನ ಕೂಡ ನಡೆಸಿ ವರದಿ ನೀಡಿತ್ತು.

ರಾಜ್ಯದ ವಿವಿಧೆಡೆ ಆನೆ ಸಾಕಣೆ ಕೇಂದ್ರಗಳಿವೆ, ಮೈಸೂರಿನ ಕೂರ್ಗಳ್ಳಿಯಲ್ಲಿ ವಿವಿಧ ಪ್ರಾಣಿಗಳ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರವಿದೆ. ಆದರೆ, ಆನೆಗಳ ರಕ್ಷಣೆ, ಆರೈಕೆ ಹಾಗೂ ಪುನರ್ವಸತಿಗಾಗಿ ರಾಜ್ಯದಲ್ಲಿ ಇರುವುದು ಇದೊಂದೇ ಕೇಂದ್ರ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-25-108739122

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.