ಕೋಲಾರ: ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ ಮಾಡಲಾಗಿದೆ ಎಂಬ ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದದು. ನಾನು ಯಾವುದೇ ಪ್ರಾಣಿಯ ರಕ್ತ ಪರೀಕ್ಷೆ ನಡೆಸಿಲ್ಲ ಎಂದು ಜಿಲ್ಲಾ ಆಸ್ಪತ್ರೆಯ ರಕ್ತ ಪರೀಕ್ಷೆ ಕೇಂದ್ರದ ಎನ್ಎಚ್ಎಂ ಮಾಜಿ ಗುತ್ತಿಗೆ ನೌಕರ ಬಿ.ರಾಘವೇಂದ್ರ ಹೇಳಿದ್ದಾರೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು, ‘ರಕ್ತ ಪರೀಕ್ಷಾ ಕೇಂದ್ರದಲ್ಲಿ ಮೂರು ತಿಂಗಳ ಹಿಂದೆ ಕೆಲಸ ನಿರ್ವಹಿಸುತ್ತಿದ್ದೆ. ಬಳಿಕ ಆಸ್ಪತ್ರೆ ಆವರಣದ ಟಿ.ಬಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಎಂಟು ವರ್ಷಗಳಿಂದ ನನ್ನ ವಿರುದ್ಧ ಯಾವುದೇ ಆರೋಪ ಇರಲಿಲ್ಲ. 2023ರ ಬಳಿಕ ಸ್ನೇಹಿತರ ಜೊತೆಗೂಡಿ ಖಾಸಗಿ ಲ್ಯಾಬ್ ಸಹಕಾರದೊಂದಿಗೆ ರಕ್ತ ಪರೀಕ್ಷಾ ಯಂತ್ರ ಖರೀದಿಸಿದ್ದೆವು. ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಆ ಖಾಸಗಿ ಲ್ಯಾಬ್ನಲ್ಲಿ ಪರೀಕ್ಷೆಗೆ ಒಳಪಡುವ ರಕ್ತದ ಪರೀಕ್ಷಾ ವರದಿಯನ್ನು ನನ್ನ ಸ್ನೇಹಿತರು ವಾಟ್ಸ್ಆ್ಯಪ್ ಮೂಲಕ ಕಳುಹಿಸುತ್ತಿದ್ದರು. ಅದನ್ನು ನಾನು ಆಸ್ಪತ್ರೆಯ ಕಂಪ್ಯೂಟರ್ನಲ್ಲಿ ವಿವರವಾಗಿ ವರದಿ ರೂಪದಲ್ಲಿ ತಯಾರಿಸಿ ಪುನಃ ವಾಟ್ಸ್ಆ್ಯಪ್ ಮೂಲಕ ಕಳುಹಿಸುತ್ತಿದ್ದೆ ಅಷ್ಟೆ’ ಎಂದಿದ್ದಾರೆ.

ಕರ್ತವ್ಯ ಹಾಗೂ ರಕ್ತ ಪರೀಕ್ಷಾ ಕೇಂದ್ರದ ಯಂತ್ರವನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಡಿಲ್ಲ. ಇದು ವಿಚಾರಣೆಯಲ್ಲೂ ಸ್ಪಷ್ಟವಾಗಿದೆ. ಆದರೂ ನನ್ನ ಮೇಲೆ ಗಂಭೀರ ಆರೋಪ ಮಾಡಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಕ್ತ ಪರೀಕ್ಷಾ ಕೇಂದ್ರದ ಯಂತ್ರದಲ್ಲಿ ರಕ್ತ ಪರೀಕ್ಷೆ ನಡೆಸಿರುವ ಇತಿಹಾಸವಿರುತ್ತದೆ. ಅದನ್ನು ಅಳಿಸಿ ಹಾಕಲು ಆಗಲ್ಲ. ತಂತ್ರಜ್ಞಾನದಿಂದ ಬೇಕಿದ್ದಲ್ಲಿ ತನಿಖೆಗೆ ಒಳಪಡಿಸಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಾಣಿಗಳು ಮತ್ತು ಮನುಷ್ಯರ ರಕ್ತ ಪರೀಕ್ಷೆ ಹಾಗೂ ಸ್ಕ್ಯಾನಿಂಗ್ಗಳಿಗೆ ಬೇರೆ ಬೇರೆ ರೀತಿಯ ಯಂತ್ರ ಬಳಸುವುದಿಲ್ಲ. ಎಲ್ಲಾದಕ್ಕೂ ಒಂದೇ ರೀತಿಯ ಯಂತ್ರವನ್ನು ಬೇರೆ ಬೇರೆ ಸಮಯದಲ್ಲಿ ಬಳಕೆ ಮಾಡಲಾಗುತ್ತದೆ. ಇದರಿಂದ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ತಿಳಿದ ಮೇಲೆಯೇ ಖಾಸಗಿ ಲ್ಯಾಬ್ನಲ್ಲಿ ನಡೆಸುತ್ತಿದ್ದ ಪರೀಕ್ಷೆಯ ವರದಿಯನ್ನು ನನಗೆ ಕಳಿಸಿದ ಮೇಲೆ ಅದರ ಸವಿಸ್ತಾರ ವಿವರವನ್ನು ಕಂಪ್ಯೂಟರ್ಲ್ಲಿ ತಯಾರಿಸಿ ಅದನ್ನು ವಾಟ್ಸ್ಆ್ಯಪ್ ಮೂಲಕ ನೀಡಲಾಗುತ್ತಿತ್ತು ಎಂದು ವಿವರಿಸಿದ್ದಾರೆ.

ನನ್ನ ವಿರುದ್ಧ ಆಸ್ಪತ್ರೆಯ ಕೆಲ ಕಾಯಂ ಸಿಬ್ಬಂದಿ ಉದ್ದೇಶಪೂರ್ವಕವಾಗಿ ದೂರು ನೀಡಿ ತೊಂದರೆ ಕೊಡುತ್ತಿದ್ದಾರೆ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-18-253762419

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.