ಕೋಲಾರ: ನಗರದ ಕ್ಲಾಕ್ ಟವರ್ ಸಮೀಪದ ಶಾಹೀ ಮಸೀದಿ ಬಳಿ ಜಿಲ್ಲೆಯಲ್ಲಿ ರಂಜಾನ್ ಪ್ರಯುಕ್ತ ಮೊದಲ ಬಾರಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರನ್ನು ಒಳಗೊಂಡು ಆಯೋಜಿಸಿದ್ದ ಇಫ್ತಿಯಾರ್ ಕೂಟ ಸೌಹಾರ್ದಕ್ಕೆ ಸಾಕ್ಷಿಯಾಯಿತು.

ಭಾನುವಾರ ಸಂಜೆ ಸಮಿತಿಯಿಂದ ಶಾಹೀ ಮಸೀದಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮುಖಂಡರು ಭಾಗಿಯಾದ್ದರು. ಸಮುದಾಯ ಕೇವಲ ಒಂದು ಪಕ್ಷಕ್ಕೆ ಸೀಮಿತ ಎಂಬ ಭಾವನೆ ಹೋಗಲಾಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಕರು ಎಲ್ಲಾ ಪಕ್ಷದವರನ್ನು ಆಹ್ವಾನಿಸಿದ್ದರು.

ಜೆಡಿಎಸ್ ಪಕ್ಷದಿಂದ ಸಂಸದ ಎಂ.ಮಲ್ಲೇಶ್ ಬಾಬು, ಸಿಎಂಆರ್ ಶ್ರೀನಾಥ್, ತೂಪಲ್ಲಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಕಾಂಗ್ರೆಸ್ ಪಕ್ಷದಿಂದ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹಾಗೂ ವಿವಿಧ ಸಂಘಟನೆ ಮುಖಂಡರು ಭಾಗಿಯಾಗಿದ್ದರು.

ಇದಕ್ಕೂ ಮೊದಲು ಮುಸ್ಲಿಂ ಸಮುದಾಯದ ಮೌಲ್ವಿಗಳಿಂದ ಹಾಗೂ ಮೆಥೋಡಿಸ್ಟ್ ದೇವಾಲಯದ ಪಾದ್ರಿಯಿಂದ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಕೋಲಾರ ವಿಶೇಷ ನಗರ, ಇಲ್ಲಿ ಎಲ್ಲಾ ಸಮುದಾಯದವರು ಒಟ್ಟಿಗೆ ಇದ್ದೇವೆ, ಇರುತ್ತೇವೆ, ಎಲ್ಲಾ ಸಮುದಾಯಗಳಲ್ಲಿ ಒಂದಷ್ಟು ಯುವಕರು ದಾರಿ ತಪ್ಪುತ್ತಿರುತ್ತಾರೆ. ಅಂತಹವರನ್ನು ಹಿರಿಯರು ಸರಿದಾರಿಗೆ ತರುವ ಕೆಲಸ ಆಗಲಿ’ ಎಂದು ಆಶಿಸಿದರು.

ಓಂಶಕ್ತಿ ಚಲಪತಿ ಮಾತನಾಡಿ, ‘ಎಲ್ಲರೂ ಸೌಹಾರ್ದದಿಂದ ಒಗ್ಗಟ್ಟಾಗಿರಬೇಕೆಂಬ ಉದ್ದೇಶದಿಂದ ಆಯೋಜಿಸಿರುವ ಕಾರ್ಯಕ್ರಮ ನಿಜಕ್ಕೂ ಮೆಚ್ಚುವಂತದ್ದು. ನಾನು ಇದೇ ಮೊದಲ ಬಾರಿ ಇಫ್ತಿಯಾರ್ ಕೂಟದಲ್ಲಿ ಬಾಗಿ ಆಗಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.