ಕೋಲಾರ: ವಿಶ್ವದ ವಿವಿಧ ದೇಶಗಳ ಸಂವಿಧಾನವನ್ನು ಇಟ್ಟು ನೋಡಿದಾಗ ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನದ ತೂಕವೇ ಹೆಚ್ಚು. ಅದಕ್ಕೆ ನಮ್ಮ ಸಂವಿಧಾನದಲ್ಲಿರುವ ಬಹುತ್ವ ಹಾಗೂ ಬುದ್ಧತ್ವ ಕಾರಣ. ಹೀಗಾಗಿ, ಈ ಸಂವಿಧಾನದಡಿ ನಾವೆಲ್ಲಾ ಸುರಕ್ಷಿತವಾಗಿ, ಸಂತೋಷವಾಗಿದ್ದೇವೆ. ಸಂವಿಧಾನ ಇಲ್ಲದಿದ್ದರೆ ಕಳೆದ 75 ವರ್ಷಗಳಲ್ಲಿ ದೇಶದಲ್ಲಿ ಹತ್ತಾರು ಕ್ರಾಂತಿ ನಡೆದು ಹೋಗುತಿತ್ತು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಬರೀ ವ್ಯಕ್ತಿ ಅಲ್ಲ; ಮಹಾಶಕ್ತಿ. ದೇಶದ ಇತಿಹಾಸದಲ್ಲಿ ಅವರಷ್ಟು ಟೀಕೆ, ವಿಮರ್ಶೆ, ಪರಾಮರ್ಶೆಗೆ ಒಳಗಾದ ಮತ್ತೊಬ್ಬ ರಾಜಕೀಯ ವ್ಯಕ್ತಿ ಇಲ್ಲ. ಇಡೀ ದೇಶವನ್ನು ಒಳಗೊಳ್ಳುವ ಸಂವಿಧಾನ ರಚನೆ ಸುಲಭದ ವಿಷಯವಲ್ಲ. ಹೀಗಾಗಿ, ಅಂಬೇಡ್ಕರ್ ಅವರ ತತ್ವ, ಸಿದ್ಧಾಂತ, ಆಲೋಚನೆಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂದು ಬಣ್ಣಿಸಿದರು.

ಅಂಬೇಡ್ಕರ್ ತಮ್ಮ 65 ವರ್ಷಗಳ ವೈಯಕ್ತಿಕ ಜೀವನದಲ್ಲಿ ಹಲವಾರು ಕಷ್ಟ ಎದುರಿಸಿ, ಹೋರಾಟ ನಡೆಸುತ್ತಲೇ ಇಡೀ ವಿಶ್ವಕ್ಕೆ ಬೆಳಕಾದರು ಎಂದರು.

ನಾವೆಲ್ಲಾ ಬುದ್ಧ, ಬಸವಣ್ಣನ ಪರಂಪರೆಯಲ್ಲಿ ಬಂದವರು. ಬಸವಣ್ಣ ಆಗ ಕೇವಲ ಜಾತಿ ವಿರುದ್ಧ ಹೋರಾಟ ಮಾಡಿಲ್ಲ; ಜಾತಿ ನಿರ್ನಾಮ ಮಾಡುವತ್ತಲೂ ಚಿತ್ತ ಹರಿಸಿದರು. 2,500 ವರ್ಷಗಳ ಹಿಂದೆ ಬುದ್ಧ ಕೂಡ ಇದೇ ಸಮಸ್ಯೆ ಎದುರಿಸಿದ್ದರು. ಅಂಬೇಡ್ಕರ್ ಕೂಡ ಸಮಾಜಕ್ಕೆ ತಮ್ಮ ಜೀವನ ಸಮರ್ಪಿಸಿಕೊಂಡರು. ಒಬ್ಬ ಪ್ರತಿಭಾವಂತ, ಬುದ್ಧಿವಂತ ದಲಿತನನ್ನು ಸಮಾಜ ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳುವುದಿಲ್ಲ. ಅಂಬೇಡ್ಕರ್ ಕೂಡ ಇದನ್ನು ಎದುರಿಸಿಕೊಂಡು ಬಂದರು. ಈ ಜಾತಿ, ಅಸ್ಪೃಶ್ಯತೆಗೆ ಕೊನೆ ಎಂದು ಪ್ರಶ್ನಿಸಿದರು.

ಶಿಕ್ಷಣ ಒಂದು ವರ್ಗದ ಸ್ವತ್ತು ಆಗಿತ್ತು. ಆ ಕ್ಷೇತ್ರದಲ್ಲಿ ಅಂಬೇಡ್ಕರ್ ಪ್ರವೇಶಿಸಿ ಅದನ್ನು ತಮ್ಮದಾಗಿಸಿಕೊಂಡರು, ದೊಡ್ಡ ದೊಡ್ಡ ಪದವಿ ಪಡೆದರು, ಶ್ರೇಷ್ಠ ತತ್ವಜ್ಞಾನಿಯಾದರು. ದೇಶದಲ್ಲಿ ಕಾನೂನಿಗೆ ಅಡಿಪಾಯ ಹಾಕಿದ್ದೇ ಅಂಬೇಡ್ಕರ್ ಎಂದು ಹೇಳಿದರು.

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ‘ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನೀಡಿದ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದಂತಹ ಹಕ್ಕುಗಳು ನಮಗೆ ಸಿಗಬೇಕಾದರೆ ಶಿಕ್ಷಣ ಅತ್ಯಂತ ಅಗತ್ಯ. ಶಿಕ್ಷಣ ಇದ್ದರೆ ಉಳಿದಿದ್ದೆಲ್ಲಾ ಸಿಗುತ್ತದೆ. ಸಂವಿಧಾನದ ಕಾರಣ ನಾವೆಲ್ಲಾ ಈ ಸ್ಥಾನಮಾನದಲ್ಲಿ ಇದ್ದೇವೆ’ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, 'ಅಂಬೇಡ್ಕರ್ ಜಯಂತಿಯನ್ನು ನಾಡಹಬ್ಬದಂತೆ ಆಚರಿಸಲಾಗುತ್ತಿದೆ. ಇಡೀ ನಗರ ನೀಲಿಮಯವಾಗಿದೆ. ವಿಶ್ವದೆಲ್ಲೆಡೆ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ಪ್ರತಿಮೆ ಇರುವುದು ಅಂಬೇಡ್ಕರ್ ಅವರದ್ದು' ಎಂದು ನುಡಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿ 21 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕೋಲಾರ ತಾಲ್ಲೂಕಿನಲ್ಲಿ ಐದು ಎಕರೆ ಪ್ರದೇಶದಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರ ತೆರೆಯಲಾಗುವುದು. ನಚಿಕೇತ ನಿಲಯ ಹಾಗೂ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಚಾವಣಿ ನಿರ್ಮಿಸಲಾಗುತ್ತದೆ. ನಚಿಕೇತ ನಿಲಯಕ್ಕೆ ಹೊಸ ರೂಪ ಸಿಗಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಮಾತನಾಡಿ, 'ಶಿಕ್ಷಣ ಸಮಾನತೆ ಹಾದಿ ತೋರಿಸುತ್ತದೆ ಎಂಬುದಾಗಿ ಅಂಬೇಡ್ಕರ್ ನಂಬಿದ್ದರು, ಶಿಕ್ಷಣದ ಮಹತ್ವ ತೋರಿಸಿದರು. 32 ಪದವಿ ಪಡೆದ ದೇಶದ ಮೊದಲ ವ್ಯಕ್ತಿ. ಅವರು ಕೇವಲ ದಲಿತ ನಾಯಕ ಅಲ್ಲ; ದೇಶದ ನಾಯಕ. ನಾವೆಲ್ಲಾ ಸ್ವಾಭಿಮಾನದಿಂದ ಬದುಕಲು ಅಂಬೇಡ್ಕರ್ ಕಾರಣ' ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್, ‘ಕಾನೂನು ಸೇವಾ ಪ್ರಾಧಿಕಾರದ ಅಡಿ ಉಚಿತವಾಗಿ ಕಾನೂನಾತ್ಮಕ ಸಮಸ್ಯೆಗೆ ನೆರವು ಪಡೆಯಬಹುದು. ಕಾನೂನು ಅರಿವು ಕೂಡ ಮೂಡಿಸುತ್ತಿದ್ದೇವೆ’ ಎಂದು ಹೇಳಿದರು.

ದೂರವಾಣಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮಾತನಾಡಿ, 'ತಮಿಳುನಾಡು ಚುನಾವಣೆಗೆ ಹೋಗಿದ್ದೇನೆ. ಹೀಗಾಗಿ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ದೇಶದಲ್ಲಿ ನಾವೆಲ್ಲಾ ಸುಖವಾಗಿರಲು ಕಾರಣ ಸಂವಿಧಾನ ಶಿಲ್ಪಿ ಅಂಬೇಡ್ಕರ್' ಎಂದರು.

ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳು ಹಾಗೂ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ಪಲ್ಲಕ್ಕಿಗಳಿಗೆ ಮೊದಲ ಬಹುಮಾನ ₹ 1 ಲಕ್ಷ, 2ನೇ ಬಹುಮಾನ ₹ 50 ಸಾವಿರ ಹಾಗೂ ಮೂರನೇ ಬಹುಮಾನ ₹ 25 ಸಾವಿರವನ್ನು ಕೊತ್ತೂರು ಮಂಜುನಾಥ್ ನೀಡಿದರು.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಜಿಲ್ಲಾ ಪಂಚಾಯಿತಿ ಜಂಟಿ ಕಾರ್ಯದರ್ಶಿ ಟಿ.ಕೆ.ರಮೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್, ತಾಲ್ಲೂಕು ಸಹಾಯಕ ನಿರ್ದೇಶಕ ಗೋಪಿನಾಥ್, ರಾಜ್ಯ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ರಾಮಪ್ರಸಾದ್, ವೈ.ಶಿವಕುಮಾರ್, ಪಂಡಿತ್ ಮುನಿವೆಂಕಟಪ್ಪ, ಟಿ.ವಿಜಯಕುಮಾರ್, ಚಂದ್ರಶೇಖರ್, ಕೆ.ಜಯದೇವ್, ಮಾರ್ಜೇನಹಳ್ಳಿ ಬಾಬು ಹಾಗೂ ದಲಿತ ಮುಖಂಡರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-18-1329876140

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.