ಕೋಲಾರ: ಜಿಲ್ಲೆಯಲ್ಲಿ ಮತ್ತೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಸದ್ದು ಮಾಡುತ್ತಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರ ವಿರುದ್ಧ ನಗರ ಪೊಲೀಸ್ ಠಾಣೆ ಹಾಗೂ ಗಲ್ಪೇಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರದ ಸೈಯದ್ ಅಲಿ ಹಾಗೂ ಜಾವೇದ್ ವಿರುದ್ಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಗಲ್ಪೇಟೆ ಠಾಣೆ ಪೊಲೀಸರು ಕೋಲಾರದ ದೇವರಾಜ್, ಮುಳಬಾಗಿಲು ನಿವಾಸಿ ಸಯೀದ್ ನಯಾಜ್ ಹಾಗೂ ಕೋಲಾರದ ಜಾವೇದ್ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಎರಡು ದಿನಗಳ ಅಂತರದಲ್ಲಿ ಜಾವೇದ್ ವಿರುದ್ಧ ಈ ಎರಡೂ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ.

ನಗರ ಠಾಣೆಯಲ್ಲಿ ದಾಖಲಾದ ಮೊದಲ ಪ್ರಕರಣದಲ್ಲಿ ಏ.18ರಂದು ಷಹೀಂಷಾ ನಗರದಲ್ಲಿ ಮಟನ್ ಅಂಗಡಿಯೊಂದರ ಬಳಿ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಡುವಿನ ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಮೊಬೈಲ್ನಲ್ಲಿ ಆನ್ಲೈನ್ನಲ್ಲಿ ಬೆಟ್ಟಿಂಗ್ನಲ್ಲಿ ತೊಡಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಎಸ್ಪಿ, ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಠಾಣೆಯ ಪಿಎಸ್ಐ ಸಂಗಪ್ಪ ಮೇಟಿ, ಹೆಡ್ ಕಾನ್ಸ್ಟೆಬಲ್ ವಿಜಯಕುಮಾರ್ ನಡೆಸಿದ ಕಾರ್ಯಾಚರಣೆಯಲ್ಲಿ ಈ ವಿಚಾರ ಪತ್ತೆಯಾಗಿದೆ. ಆರೋಪಿಗಳು ವೆಬ್ಸೈಟ್ವೊಂದರಲ್ಲಿ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಬಳಸಿಕೊಂಡು ಹಣ ಪಣಕ್ಕಿಟ್ಟು ಬೆಟ್ಟಿಂಗ್ನಲ್ಲಿ ತೊಡಗಿದ್ದರು. ಫೋನ್ ಪೇ ಮೂಲಕ ಹಣ ಕಳಿಸುತ್ತಿದ್ದರು.

ಗಲ್ಪೇಟೆ ಠಾಣೆಯಲ್ಲಿ ದಾಖಲಾದ ಇನ್ನೊಂದು ಪ್ರಕರಣದಲ್ಲಿ ಕಾರಂಜಿಕಟ್ಟೆಯ ಭವಾನಿ ಟಾಕೀಸ್ ಬಳಿ ಪಂಜಾಬ್ ಕಿಂಗ್ಸ್ ಇಲೆವೆನ್ ಹಾಗೂ ಲಖನೌ ಸೂಪರ್ ಜಾಯಿಂಟ್ಸ್ ತಂಡಗಳ ನಡುವಿನ ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಮೊಬೈಲ್ನಲ್ಲಿ ಆನ್ಲೈನ್ನಲ್ಲಿ ಬೆಟ್ಟಿಂಗ್ನಲ್ಲಿ ತೊಡಗಿರುವುದನ್ನು ಪೊಲೀಸರು ಕಂಡು ಹಿಡಿದಿದ್ದಾರೆ.

ಎಸ್ಪಿ ಹಾಗೂ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪಿಎಸ್ಐ ವಿಠಲ್ ವೈ.ತಳವಾರ್, ಹೆಡ್ ಕಾನ್ಸ್ಟೆಬಲ್ ಷಫಿವುಲ್ಲಾ, ಕಾನ್ಸ್ಟೆಬಲ್ ಮಂಜುನಾಥ್ ಗಸ್ತು ತಿರುವಾಗ ಪತ್ತೆ ಹಚ್ಚಿದ್ದಾರೆ. ಈ ಪ್ರಕರಣದಲ್ಲೂ ಆನ್ಲೈನ್ನಲ್ಲಿ ಲಿಂಕ್ ಕಳಿಸಿ ಬೆಟ್ಟಿಂಗ್ ನಡೆಸಲಾಗುತಿತ್ತು. ಫೋನ್ ಪೇ ಮೂಲಕ ಹಣ ಕಳಿಸುತ್ತಿದ್ದರು. ನಗದು ವ್ಯವಹಾರವೂ ನಡೆಯುತ್ತಿರುವುದು ಗೊತ್ತಾಗಿದೆ. ಇವರಲ್ಲಿ ಕೆಲ ಆರೋಪಿಗಳು ರಾಜಕೀಯ ವ್ಯಕ್ತಿಗಳ ಜೊತೆ ಗುರುತಿಸಿಕೊಂಡವರೂ ಇದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-18-1911853667

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.