ಕೋಲಾರ: ತಾಲ್ಲೂಕಿನ ಕ್ಯಾಲನೂರು ಭಾಗದಲ್ಲಿ ಯಾವುದೇ ನೀರಾವರಿ ಯೋಜನೆಗಳು ಜಾರಿಯಾಗಿಲ್ಲ. ಕೂಡಲೇ ರಾಜ್ಯ ಸರ್ಕಾರವು ಈ ಭಾಗದಲ್ಲಿ ನೀರಾವರಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೆ ಒತ್ತು ನೀಡುವಂತೆ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಆಗ್ರಹಿಸಿದರು.

ಚುನಾವಣಾ ಆಯೋಗದಿಂದ ನಡೆಯಲಿರುವ ಎಸ್ಐಆರ್ ಕುರಿತು ಜಾಗೃತಿ ಮತ್ತು ಪಕ್ಷದಿಂದ ಬೂತ್ ಮಟ್ಟದ ಏಜೆಂಟ್ ನೇಮಿಸುವ ಕುರಿತು ವೇಮಗಲ್ ಹೋಬಳಿಯ ಚನ್ನಸಂದ್ರ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್ನಿಂದ ನಡೆದ ಗ್ರಾಮ ಪಂಚಾಯತಿ ಮಟ್ಟದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಗೆ ಬೆಂಗಳೂರಿನಿಂದ ಕೆ.ಸಿ ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ಯೋಜನೆಗಳ ಮೂಲಕ ನೀರು ತರಲಾಗಿದೆ. ಆದರೆ ಕ್ಯಾಲನೂರು ಭಾಗದಲ್ಲಿ ಯಾವುದೇ ಯೋಜನೆ ಜಾರಿಯಾಗಿಲ್ಲ. ಕೂಡಲೇ ನೀರಾವರಿ ಯೋಜನೆ ಜಾರಿಗೆ ಮುಂದಾಗಲಿ ಎಂದು ಒತ್ತಾಯಿಸಿದರು.

ಎಸ್ಐಆರ್ ಪ್ರಕ್ರಿಯೆ ಕೇವಲ ಕಾಗದಕ್ಕೆ ಸೀಮಿತವಾಗದೆ ಗ್ರಾಮದ ಮೂಲಸೌಕರ್ಯಗಳ ಅಭಿವೃದ್ಧಿಗೆ ದಾರಿಯಾಗಬೇಕು. ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಸಮನ್ವಯವಿದ್ದಾಗ ಮಾತ್ರ ಪಾರದರ್ಶಕ ಆಡಳಿತ ಸಾಧ್ಯವಾಗುತ್ತದೆ. ಅನಿ ಟ್ಟಿನಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಜೆಡಿಎಸ್ನಿಂದ ಸಮಿತಿ ಮಾಡಿ ಅದರ ಮೂಲಕ ಎಚ್ಚರಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಗ್ರಾಮಸ್ಥರ ಅಹವಾಲು ಆಲಿಸಿದ ಅವರು, ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.

ಮುಖಂಡರಾದ ವಕ್ಕಲೇರಿ ರಾಮು, ಲೋಕೇಶ್ ಮರಿಯಪ್ಪ, ಕುರುಗಲ್ ರಮೇಶ, ಕುರುಗಲ್ ಗಿರೀಶ್, ಅಶೋಕ್, ಕ್ಯಾಲನೂರು ಸುರೇಶ್, ಅಮ್ಮನಲ್ಲೂರು ರಮೇಶ್, ಚಾಕರಸನಹಳ್ಳಿ ಅಂಜಿನಪ್ಪ, ಚೋಳಘಟ್ಟ ಬಸವರಾಜ್, ಚನ್ನಸಂದ್ರ ಲೋಕೇಶ್, ಚನ್ನಸಂದ್ರ ರಮೇಶ್, ನಾರಾಯಣಸ್ವಾಮಿ, ದಾಸಣ್ಣ, ಮುನಿಶಾಮರೆಡ್ಡಿ, ಅಂಜಿನಪ್ಪ, ರಾಮಣ್ಣ, ವೆಂಕಟೇಶ್ ಬೀಚಗೊಂಡಹಳ್ಳಿ ರಾಮೇಗೌಡ, ಸೀನಪ್ಪ, ರವಿರಾಜ್, ಸಂದೀಪ್, ಅಶೋಕ, ಶಶಿ, ಚನ್ನಪ್ಪ ಕಾಮಾಂಡಹಳ್ಳಿ ಸುರೇಶ್, ಕಡಗಟ್ಟೂರು ನಾರಾಯಣಸ್ವಾಮಿ, ಪ್ರಶಾಂತ್, ಸೊನ್ನೇಗೌಡ, ಉರಟ ಅಗ್ರಹಾರ ಸೋಮಣ್ಣ, ಚಂದ್ರಪ್ಪ ರಘುಪತಿ ಅಗ್ರಹಾರ ರೆಡ್ಡಿ, ಸುಧಾಕರ್, ಗೋಪಾಲಪ್ಪ, ಜಯರಾಮ, ವೆಂಕಟೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-18-953424559

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.