ಕೋಲಾರ: ನಗರದಲ್ಲಿ ಇಸ್ಕಾನ್ ಆಶ್ರಯದಲ್ಲಿ ಶನಿವಾರ ಸಂಜೆ 5 ಗಂಟೆಗೆ ‘ಶ್ರೀ ಕೃಷ್ಣ ನಗರ ಸಂಕೀರ್ತನಾ ಯಾತ್ರೆ’ ಹಮ್ಮಿಕೊಳ್ಳಲಾಗಿದೆ.

ಈ ಯಾತ್ರೆಗೆ ನಗರದ ವಿವೇಕಾನಂದ ವೃತ್ತದಲ್ಲಿ (ಡೂಮ್ ಲೈಟ್ ಸರ್ಕಲ್) ಚಾಲನೆ ದೊರಕಲಿದ್ದು, ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ.

ಕಠಾರಿಪಾಳ್ಯ ಮುಖ್ಯರಸ್ತೆ, ದೊಡ್ಡಪೇಟೆ, ಶಾರದಾ ಟಾಕೀಸ್ ಮುಖ್ಯರಸ್ತೆ, ಫಾಲಾಮೃತ ಮುಂದೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸರ್ಕಲ್, ಕಾಳಮ್ಮ ಗುಡಿ ರಸ್ತೆ, ಎಂ.ಜಿ.ರಸ್ತೆ, ಪಟ್ಟಾಭಿರಾಮನ್ ರಸ್ತೆ, ಶಾಂತಲಾ ಸಿಲ್ಕ್ ರಸ್ತೆ, ವಿವೇಕಾನಂದ ವೃತ್ತದ ಮೂಲಕ ಹಾದು ಸಾಯಿಬಾಬಾ ಮಂದಿರದಲ್ಲಿ ಕೊನೆಗೊಳ್ಳಲಿದೆ. ಭಕ್ತರು ಬೀದಿಗಳಲ್ಲಿ ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸುತ್ತಾ, ಭಕ್ತಿಭಾವದಿಂದ ಸಾಗಲಿದ್ದಾರೆ. ಬಳಿಕ ಸಾಯಿ ಬಾಬಾ ದೇವಸ್ಥಾನದ ಬಳಿ ವೇದಿಕೆ ಕಾರ್ಯಕ್ರಮ ನಡೆಯಲಿದೆ, ಪ್ರವಚನ ಇರಲಿದೆ.

ಇಸ್ಕಾನ್ ಬೆಂಗಳೂರು ಸಂಪರ್ಕ ವಿಭಾಗದ ಮುಖ್ಯಸ್ಥ ಚೈತನ್ಯ ದಾಸ್, ಸಂಸದ ಎಂ.ಮಲ್ಲೇಶ್ ಬಾಬು, ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಮಾಜಿ ಸಂಸದ ಎಸ್.ಮುನಿಸ್ವಾಮಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-18-596506512

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.