ಬೇತಮಂಗಲ: ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಅಖಾಡಕ್ಕಿಳಿಯುವ ಮುನ್ನ ಅಭ್ಯರ್ಥಿಗಳು ಸಂಪ್ರದಾಯದಂತೆ ದೇವ ಮೂಲೆ ಎಂದೇ ಬಿಂಬಿತವಾಗಿರುವ ಕದರೀಗಾನಕುಪ್ಪ ಗ್ರಾಮದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸುವುದು ದಶಕಗಳ ಪದ್ಧತಿ. ಆದರೆ, ರಾಜಕೀಯವಾಗಿ ಇಷ್ಟೊಂದು ಮಹತ್ವ ಪಡೆದಿರುವ ಗ್ರಾಮದ ರಸ್ತೆಯೂ ಅಭಿವೃದ್ಧಿ ಕಾಣದಂತಾಗಿದೆ.

ವಿ.ಕೋಟ ಮುಖ್ಯರಸ್ತೆಯಿಂದ ಕದರೀಗಾನಕುಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಒಂದು ಕಿ.ಮೀ ಇದ್ದು, ಈ ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಯು ಡಾಂಬರೀಕರಣ ಕಂಡು ವರ್ಷಗಳೇ ಕಳೆದಿದ್ದು, ರಸ್ತೆಯ ಡಾಂಬರು ಸಂಪೂರ್ಣ ಕಿತ್ತು ಹೋಗಿದೆ. ಹಾದಿಯುದ್ದಕ್ಕೂ ಚೂಪಾದ ಜೆಲ್ಲಿ ಕಲ್ಲುಗಳಿದ್ದು ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಸವಾಲಿನ ವಿಷಯವಾಗಿದೆ.

ರಾಜಕೀಯ ನಾಯಕರಿಗೆ ಕದರೀಗಾನಕುಪ್ಪ ಗ್ರಾಮವು ಕೇವಲ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಾತ್ರ ನೆನಪಿಗೆ ಬರುತ್ತದೆ. ಗೆದ್ದ ಮೇಲೆ ಗ್ರಾಮದತ್ತ ಸುಳಿಯದ ನಾಯಕರು, ಪ್ರಚಾರದ ಆರಂಭಕ್ಕೆ ಮಾತ್ರ ಈ ದೇವಮೂಲೆಯನ್ನು ಬಳಸಿಕೊಳ್ಳುತ್ತಾರೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-18-1772366838

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.