ವೇಮಗಲ್: ಹೋಬಳಿಯ ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದರೀಪುರ ಗ್ರಾಮದಲ್ಲಿ ಗುರುವಾರ ಯೋಗ ನರಸಿಂಹಸ್ವಾಮಿ ಜಯಂತಿ ನಡೆಯಿತು.

ಜಯಂತಿ ಅಂಗವಾಗಿ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. 10.30ಕ್ಕೆ ಲಕ್ಷ್ಮಿ ನರಸಿಂಹಸ್ವಾಮಿಯ ತಿರುಕಲ್ಯಾಣೋತ್ಸವ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿತು.

ಜಯಂತಿಯ ಅಂಗವಾಗಿ ದಿ.ಕೆ.ಆರ್.ಲಕ್ಷ್ಮಿ ನರಸಿಂಹಚಾರ್ ಅವರ ಸ್ಮರಣಾರ್ಥ ಕದರೀಪುರ, ದೇವರಹಳ್ಳಿ ಮತ್ತು ಇರಗಸಂದ್ರ ಗ್ರಾಮಗಳ ಮಹಿಳೆಯರಿಗೆ ದೇವಾಲಯದ ಆವರಣದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ಆಕರ್ಷಕವಾಗಿ ರಂಗೋಲಿ ಬಿಡಿಸಿದ ಪಲ್ಲವಿ ಜಿ. ಮತ್ತು ಸಾರಿಕ ಜಿ. ಪ್ರಥಮ ಸ್ಥಾನ ಪಡೆದು ₹3 ನಗದು ಬಹುಮಾನ ಪಡೆದರು. ದ್ವಿತೀಯ ಸ್ಥಾನ ಪಡೆದ ಚಂದ್ರಿಕಾ ಮತ್ತು ಸುನಿತಾ ₹ 2 ಬಹುಮಾನ ತನ್ನದಾಗಿಸಿಕೊಂಡರು. ತೃತೀಯ ಸ್ಥಾನ ಗಳಿಸಿದ ಸ್ವಾತಿ ಮತ್ತು ಐಶ್ವರ್ಯ ಅವರಿಗೆ ₹1 ನಗದು ಬಹುಮಾನ ನೀಡಲಾಯಿತು. ನಾಲ್ಕನೇ ಸ್ಥಾನ ಪಡೆದ ಅನುಸೂಯ ಮತ್ತು ಕವಿತಾ ಅವರಿಗೆ ₹500 ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪ್ರಭಾವತಿ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-18-1645359168

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.