ಕೋಲಾರ: ಕಮಿಷನ್ ಆಸೆಗಾಗಿ ಸಂಸ್ಕರಿಸದೆ ಕೆ.ಸಿ.ವ್ಯಾಲಿ ನೀರನ್ನು ಹರಿಸಿ ಜಿಲ್ಲೆಯ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಜಿಲ್ಲಾ ಅಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ಆರೋಪಿಸಿದ್ದಾರೆ.

ಜಿಲ್ಲೆಗೆ ಕಕ್ಕಸು, ಕೊಚ್ಚೆ ನೀರನ್ನಾದರೂ ಹರಿಸಿ ಎಂದು ಬಹಳ ಹಿಂದೆ ಹೇಳಿದ್ದ ಈ ಭಾಗದ ಹಿರಿಯ ರಾಜಕಾರಣಿ ಇಡೀ ಜಿಲ್ಲೆಯ ಜನರ ನಾಶ ಮಾಡಲು ಹೊರಟಿದ್ದಾರೆ. ತಮ್ಮ ಭಾವನಾತ್ಮಕ ಮಾತುಗಳ ಮೂಲಕ ಮೋಡಿ ಮಾಡುವ ಇವರು 50ಕ್ಕೂ ಹೆಚ್ಚು ವರ್ಷ ರಾಜಕೀಯ ಮಾಡಿದ್ದಾರೆ. ಕೊಚ್ಚೆ, ಚರಂಡಿ, ವಿಷಕಾರಿ ನೀರು ತಂದಿದ್ದು ಕೇವಲ ಅಧಿಕಾರಿಗಳ, ರಾಜಕಾರಣಿಗಳ ಕಮಿಷನ್ ಆಸೆಗಾಗಿ ಮಾತ್ರ ಎಂದಿದ್ದಾರೆ.

ಎತ್ತಿನಹೊಳೆ ಯೋಜನೆ ಶುರುವಾಗಿ 12 ವರ್ಷಗಳಾದರೂ ಕೋಲಾರಕ್ಕೆ ಒಂದು ಹನಿ ನೀರು ಕೂಡ ಬಂದಿಲ್ಲ. ಆದರೆ, ಈ ಯೋಜನೆ ಬಗ್ಗೆ ವಿಧಾನಸಭೆ ಮಾಜಿ ಅಧ್ಯಕ್ಷರ ಬಾಯಿಯಿಂದ ಯಾವುದೇ ಮಾತು ಬರುತ್ತಿಲ್ಲ. ಜಾರಿಯ ಬಗ್ಗೆ ಒತ್ತಾಯಿಸಲು ಇವರಿಗೆ ಸ್ಪಲ್ವವೂ ಆಸಕ್ತಿ ಇದ್ದಂತಿಲ್ಲ. ನಿಜವಾಗಲೂ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಜೀವನ ಮಟ್ಟವನ್ನು ಸುಧಾರಿಸುವ ಆಲೋಚನೆ ಇವರಿಗೆ ಇದ್ದಲ್ಲಿ ಎತ್ತಿನಹೊಳೆ ಅಥವಾ ಇತರೆ ಮೂಲಗಳಿಂದ ನೀರನ್ನು ತರಲು ಕ್ರಮವಹಿಸುತ್ತಿದ್ದರು. ಆದರೆ, ಅಂಥ ಯಾವುದೇ ಆಸಕ್ತಿ ಅಥವಾ ಕಾಳಜಿ ಇವರಿಗೆ ಇದ್ದಂತಿಲ್ಲ ಎಂದು ದೂರಿದ್ದಾರೆ.

ಕೆ.ಸಿ.ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡಿ ಹರಿಸಿ ಎಂದು ಜಿಲ್ಲೆಯ ಜನರು, ನೀರಾವರಿ ಹೋರಾಟಗಾರರು ಪದೇಪದೇ ಒತ್ತಾಯಿಸುತ್ತಿದ್ದಾರೆ. ಈ ವಿಚಾರ ಜಿಲ್ಲೆಯ ರಾಜಕಾರಣಿಗಳ ಕಿವಿಗೆ ಬೀಳುತ್ತಿಲ್ಲ. ಬದಲಾಗಿ ಎರಡನೇ ಹಂತದ ಶುದ್ಧೀಕರಣ ಮಾಡಿದ ನೀರು ಹರಿಸಿ ಜನರಿಗೆ ನಿಧಾನವಾಗಿ ವಿಷಯುಣಿಸುತ್ತಿದ್ದಾರೆ. ಜನರ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಸರ್ಕಾರವನ್ನು ಒತ್ತಾಯಿಸಿ ಮೂರನೇ ಹಂತದ ಶುದ್ಧೀಕರಣ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-18-2076259741

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.