ಕೆಜಿಎಫ್: ಬಿಜಿಎಂಎಲ್ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಗಣಿ ಖಾತೆ ಸಚಿವ ಕಿಶನ್ ರೆಡ್ಡಿ ಅವರ ಭೇಟಿಗೆ ಸಮಯಾವಕಾಶ ಕೇಳಲಾಗಿದೆ. ಮುಂದಿನ 72 ಗಂಟೆಗಳಲ್ಲಿ ಅವರಿಂದ ಉತ್ತರ ಬಾರದೆ ಇದ್ದಲ್ಲಿ ಬಿಜಿಎಂಎಲ್ ಆಡಳಿತ ಕಚೇರಿ ಸ್ವರ್ಣ ಭವನದ ಮುಂಭಾಗ ಮೇ.29 ರಂದು ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಬಿಜಿಎಂಎಲ್ ಮಾಜಿ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ರಾಜೇಂದ್ರನ್ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜಿಎಂಎಲ್ ಮುಚ್ಚಿ 26 ವರ್ಷಗಳಾಗುತ್ತಾ ಬಂದಿದೆ. ಸ್ವಯಂ ನಿವೃತ್ತಿ ಯೋಜನೆಯಡಿ ಆರ್ಥಿಕ ಲಾಭ ಪಡೆಯಬೇಕಾಗಿದ್ದ ಕಾರ್ಮಿಕರಿಗೆ ಬರಬೇಕಾದ ಹಣ ನೀಡುವಲ್ಲಿ ಗಣಿ ಇಲಾಖೆ ವಿಫಲವಾಗಿದೆ. ಹೈಕೋರ್ಟ್ ಕಾರ್ಮಿಕರ ಪರವಾಗಿ ತೀರ್ಪು ನೀಡಿದ್ದರೂ, ಅದಕ್ಕೆ ವ್ಯತಿರಿಕ್ತವಾಗಿ ಆಡಳಿತ ವರ್ಗ ನಡೆದುಕೊಳ್ಳುತ್ತಿದೆ. ಕಾರ್ಮಿಕರಿಗೆ ಬರಬೇಕಾಗಿದ್ದ ಬಾಕಿ ಹಣಕ್ಕೆ ಶೇ.6ರಷ್ಟು ಬಡ್ಡಿ ಸಮೇತ ಹಣ ನೀಡಬೇಕು ಎನ್ನುವ ನ್ಯಾಯಾಲಯದ ಆದೇಶವನ್ನು ಇದುವರೆವಿಗೂ ಪಾಲಿಸಿಲ್ಲ. ಬಿಜಿಎಂಎಲ್ ಕಾರ್ಮಿಕರು ಮತ್ತು ಅವರ ಕುಟುಂಬದವರು ವಾಸ ಮಾಡುತ್ತಿರುವ ಮನೆಗಳನ್ನು ಅವರಿಗೆ ಸ್ವಂತ ಮಾಡಲು ಮತ್ತು ನಿಯಮಾನುಸಾರ ದಾಖಲೆಗಳನ್ನು ನೀಡಲು ಸತಾಯಿಸಲಾಗುತ್ತಿದೆ. ಹೀಗೆ ಹಲವು ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ಆಡಳಿತ ವರ್ಗದ ಧೋರಣೆಯನ್ನು ಕಾರ್ಮಿಕ ಸಂಘವು ಖಂಡಿಸುತ್ತದೆ ಎಂದರು.

ಗಣಿ ಆಡಳಿತ ವರ್ಗ ಕಂಪನಿಯ ಆಸ್ತಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಬಿಡುವುದಿಲ್ಲ. ಮೊದಲು ಕಾರ್ಮಿಕರ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ಆಡಳಿತ ವರ್ಗದೊಂದಿಗೆ ಸಹಕಾರ ನೀಡುತ್ತೇವೆಂದು ಕಾರ್ಮಿಕ ಸಂಘದ ಕಾರ್ಯದರ್ಶಿ ವಿಜಯರಾಘವನ್ ಹೇಳಿದ್ದಾರೆ.

ಸಂಸದ ಮಲ್ಲೇಶಬಾಬು ಕೂಡ ಕಾರ್ಮಿಕರನ್ನು ಸಚಿವರ ಜೊತೆ ಮಾತನಾಡಿಸಲು ಸಮಯಾವಕಾಶ ಕೊಡಿಸುವುದಾಗಿ ಭರವಸೆ ನೀಡಿದ್ದರೂ, ಪ್ರಯೋಜನವಾಗಿಲ್ಲ. ಆದ್ದರಿಂದ, ಈಗ ಸಚಿವರಿಗೆ ಮನವಿ ಕಳಿಸಲಾಗಿದೆ. ಮುಂದಿನ 72 ಗಂಟೆಯೊಳಗೆ ಭೇಟಿಗೆ ಸಮಯಾವಕಾಶ ನೀಡದೆ ಇದ್ದಲ್ಲಿ ಪ್ರತಿಭಟನೆ ನಡೆಸಲು ಸಿದ್ಧವಾಗಿದ್ದೇವೆಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-18-2086378575

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.