ಕೆಜಿಎಫ್: ಅಭಿವೃದ್ಧಿ ಕಾಮಗಾರಿಗಳಿಗೆ ಕಂದಾಯ ಇಲಾಖೆಯಿಂದ ನಿವೇಶನ ಮಂಜೂರು ಮಾಡುವ ಸಂಬಂಧ ಶಾಸಕಿ ಎಂ.ರೂಪಕಲಾ ಶುಕ್ರವಾರ ಕಂದಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಬೇತಮಂಗಲ ಗ್ರಾಮದಲ್ಲಿರುವ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಿ, ಹೊಸ ಜಾಗದಲ್ಲಿ ಠಾಣೆ ನಿರ್ಮಾಣ ಮಾಡಬೇಕಿದೆ. ಸರ್ಕಾರ ಅನುದಾನ ಕೂಡ ಮಂಜೂರು ಮಾಡುವ ಸ್ಥಿತಿಯಲ್ಲಿದೆ. ಕೊತ್ತೂರು ಗ್ರಾಮದ ಬಳಿ ಇರುವ ಜಾಗ ಸೂಕ್ತವಾಗಿದ್ದು, ಅದರ ಬಗ್ಗೆ ತಕರಾರು ಇದ್ದಲ್ಲಿ ಬಗೆಹರಿಸುವಂತೆ ಶಾಸಕಿ ಸೂಚನೆ ನೀಡಿದರು.

ಕಾರ್ಮಿಕ ಮಕ್ಕಳಿಗೆ ವಸತಿ ಶಾಲೆ ನಿರ್ಮಾಣ ಮಾಡಲು ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ತುರ್ತಾಗಿ 10 ಎಕರೆ ಸರ್ಕಾರಿ ಜಮೀನನ್ನು ಗುರುತಿಸಬೇಕು. ಕರ್ನಾಟಕ ಗೃಹ ಮಂಡಳಿ (ಕೆಎಚ್ಬಿ) ವತಿಯಿಂದ ಬಡಾವಣೆ ನಿರ್ಮಿಸಲು 100 ಎಕರೆ ಜಮೀನನ್ನು ಕೋರಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಿಂದ ಸಹ ಪತ್ರ ವ್ಯವಹಾರ ನಡೆದಿದೆ. ಬಂಗಾರದ ಗಣಿ ಗ್ರಾಮದಲ್ಲಿ ಸೂಕ್ತ ಸ್ಥಳ ನೋಡಿ ಗುರುತಿಸಲು ಅಧಿಕಾರಿಗಳಿಗೆ ತಿಳಿಸಿದರು.

ಈ ವೇಳೆ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಕುಂದು ಕೊರತೆಗಳನ್ನು ಆಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-18-1763653726

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.