ಕೆಜಿಎಫ್: ರಾಮಸಾಗರ ಕೆರೆಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಮಾಡಿದ್ದ ಪಹಣಿಯನ್ನು ರದ್ದು ಮಾಡಿರುವುದರಿಂದ ಕೂಡಲೇ ತಾಲ್ಲೂಕು ಆಡಳಿತ ಕೆರೆ ಸಂರಕ್ಷಣೆ ಮಾಡಬೇಕು ಎಂದು ರೈತ ಸಂಘದ ಮುಖಂಡ ನಳಿನಿಗೌಡ ಆಗ್ರಹಿಸಿದ್ದಾರೆ.

ಕಂಗಾಂಡ್ಲಹಳ್ಳಿ ಸರ್ವೆ ನಂಬರ್ 8 ಕೆರೆ ಜಮೀನಿನಲ್ಲಿ ಕೆಲವರು ಅಕ್ರಮವಾಗಿ ಭೂ ಕಬಳಿಕೆ ಮಾಡಿದ್ದಾರೆ. ಕೆರೆಯಲ್ಲಿ ಮಾಡಿರುವ ಪಹಣಿ ರದ್ದು ಮಾಡಬೇಕು ಎಂದು ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ನಳಿನಿಗೌಡ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಕೆರೆ ಸರ್ವೆ ನಂಬರ್ 8ರಲ್ಲಿ 14 ಎಕರೆ 24 ಗುಂಟೆ ಜಮೀನಿದ್ದು ಬಹುತೇಕ ಒತ್ತುವರಿಯಾಗಿದೆ. ಕೆರೆ ಜಮೀನಿನ ಪೈಕಿ 1.11 ಎಕರೆ ಜಮೀನು ಅನಧಿಕೃತವಾಗಿ ಕೆ.ಎಂ.ದೊರೆಸ್ವಾಮಿ ನಾಯ್ಡು ಅವರ ಕುಟುಂಬಕ್ಕೆ ಪಹಣಿ ಆಗಿರುತ್ತದೆ. ವಿಚಾರಣೆ ನಡೆಸಿದ್ದ ಲೋಕಾಯುಕ್ತರು, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ತಹಶೀಲ್ದಾರ್, ಕೆರೆಯಲ್ಲಿ ಮಾಡಿರುವ ಪಹಣಿಯನ್ನು ರದ್ದುಗೊಳಿಸಬಹುದು ಎಂದು ಶಿಫಾರಸು ಮಾಡಿ, ಕಡತವನ್ನು ಉಪ ವಿಭಾಗಾಧಿಕಾರಿಗೆ ಕಳಿಸಿದ್ದರು. ವಿಚಾರಣೆ ಮುಂದುವರಿಸಿದ್ದ ಉಪವಿಭಾಗಾಧಿಕಾರಿ, ಕೆರೆ ಜಮೀನಿನಲ್ಲಿ ಯಾರಿಗೂ ಹಕ್ಕುದಾರಿಕೆ ಇರುವುದಿಲ್ಲ. ಅದನ್ನು ಮಂಜೂರು ಮಾಡಲು ಭೂ ಕಂದಾಯ ಕಾಯ್ಡೆ ಅಥವಾ ನಿಯಮಗಳಲ್ಲಿ ಅವಕಾಶ ಇರುವುದಿಲ್ಲ ಎಂದು ನಮೂದಿಸಿ, ಪಹಣಿಯಲ್ಲಿರುವ ಹೆಸರು ರದ್ದುಗೊಳಿಸಿ, ಕೆರೆಯನ್ನು ಪುನರ್ ಸ್ಥಾಪಿಸಲು ಫೆಬ್ರವರಿಯಲ್ಲಿ ಆದೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಾರ್ಚ್ 13ರಂದು ಖಾಸಗಿ ವ್ಯಕ್ತಿಗಳ ಹೆಸರನ್ನು ರದ್ದುಪಡಿಸಿದ ಕಂದಾಯ ಇಲಾಖೆ, ಪಹಣಿಯಲ್ಲಿ ಸರ್ಕಾರಿ ಕೆರೆ ಎಂದು ನಮೂದು ಮಾಡಿತ್ತು.

ಉಪವಿಭಾಗಾಧಿಕಾರಿ ಆದೇಶದಂತೆ ಕೆರೆ ಅನಧಿಕೃತ ಒತ್ತುವರಿ ತೆರವುಗೊಳಿಸಬೇಕು. ಕೆರೆಗೆ ಬಯೋಫೆನ್ಸಿಂಗ್ ಹಾಕಬೇಕು ಎಂದು ನಳಿನಿಗೌಡ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-18-264908164

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.