ಕೆಜಿಎಫ್: ಬೀದಿನಾಯಿಗಳ ಉಪಟಳದಿಂದ ಮುಕ್ತವಾಗಲು ಸರ್ಕಾರದಿಂದ ಬಂದ ಮಾರ್ಗಸೂಚಿಗಳು ಸಮರ್ಪಕವಾಗಿ ಜಾರಿಯಾಗದ ಹಿನ್ನೆಲೆ, ಜನತೆ ಬೀದಿ ನಾಯಿಗಳ ಕಾಟದಿಂದ ತತ್ತರಿಸಿ ಹೋಗಿದ್ದಾರೆ.

ಬೀದಿ ನಾಯಿಗಳ ದಾಳಿಯಿಂದ ಈಚೆಗೆ ಮೈನಿಂಗ್ ಪ್ರದೇಶದಲ್ಲಿ ತ್ಯಾಗರಾಜನ್ ಎಂಬುವರು ಮೃತಪಟ್ಟ ಮೇಲೆ ಕೂಡ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಇರುವುದು ಕಂಡು ಬರುತ್ತಿದೆ. ಕೇವಲ ದಾಖಲೆಗೋಸ್ಕರ ನಗರಸಭೆ ಸಿಬ್ಬಂದಿ ಬೀದಿ ನಾಯಿಗಳ ನಿಗ್ರಹದಲ್ಲಿ ತೊಡಗಿದ್ದಾರೆಂಬ ದೂರುಗಳು ಕೇಳಿಬರುತ್ತಿವೆ.

ನಾಯಿಗಳು ಹೆಚ್ಚಾಗಿ ವಾಸ ಮಾಡುವ ಸ್ಥಳದಲ್ಲಿ ಫೀಡಿಂಗ್ ಕೇಂದ್ರ ಸ್ಥಾಪನೆ ಮಾಡಬೇಕೆಂಬ ಸೂಚನೆಯಂತೆ 34 ವಾರ್ಡ್ಗಳಲ್ಲಿ ಫೀಡಿಂಗ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ನಗರಸಭೆ ಸಿಬ್ಬಂದಿ ಮಾಹಿತಿ ನೀಡುತ್ತಾರೆ. ಆದರೆ, ಹಲವಾರು ವಾರ್ಡ್ಗಳಲ್ಲಿ ಕೇವಲ ಗೋಡೆ ಬರಹಗಳು ಕಂಡು ಬರುತ್ತಿವೆ. ನಾಯಿಗಳೇ ಇಲ್ಲದ ಸ್ಥಳದಲ್ಲಿ, ಸಾರ್ವಜನಿಕ ಶೌಚಾಲಯದ ಬಾಗಿಲಿನಲ್ಲಿ ಫೀಡಿಂಗ್ ಕೇಂದ್ರಗಳೆಂದು ಬರಹ ಬರೆಸಲಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ ಎಷ್ಟು ಬೀದಿ ನಾಯಿಗಳಿವೆ ಎಂಬ ಮಾಹಿತಿ ಕೂಡ ನಗರಸಭೆಯಲ್ಲಿ ಇಲ್ಲ. ನಗರಸಭೆ ವ್ಯಾಪ್ತಿಯಲ್ಲಿ 2,550 ಬೀದಿ ನಾಯಿಗಳಿವೆ ಎಂದು ಅಧಿಕಾರಿಗಳು ದಾಖಲಿಸಿದ್ದಾರೆ. ಈ ಅಂಕಿ ಅಂಶವನ್ನು ಅಂದಾಜಿನ ಮೇರೆಗೆ ಸಿದ್ಧಪಡಿಸಲಾಗಿದೆ. ಪಶು ಸಂಗೋಪನಾ ಇಲಾಖೆಯ ಪ್ರಕಾರ ನಗರದಲ್ಲಿ ಸುಮಾರು 3 ಸಾವಿರ ಮತ್ತು ಗ್ರಾಮೀಣ ಭಾಗದಲ್ಲಿ 6 ಸಾವಿರ ಬೀದಿ ನಾಯಿಗಳಿವೆ.

ಬೀದಿ ನಾಯಿಗಳನ್ನು ಹಿಡಿದು, ಅವುಗಳಿಗೆ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಿ, ರೇಬಿಸ್ ನಿರೋಧಕ ಚುಚ್ಚು ಮದ್ದನ್ನು ನೀಡಲು ಟೆಂಡರ್ ಕರೆಯಲಾಗಿದೆ. ಅದರಲ್ಲಿಯೂ ಹೆಣ್ಣು ನಾಯಿಗಳಿಗೆ ಮಾಡುವ ಶಸ್ತ್ರ ಚಿಕಿತ್ಸೆ ದುಬಾರಿಯಾಗಿದೆ. ಶಸ್ತ್ರ ಚಿಕಿತ್ಸೆ ಆದ ನಂತರ ನಾಲ್ಕು ದಿನಗಳ ಕಾಲ ಅದಕ್ಕೆ ಉಪಚಾರ ಮಾಡಬೇಕು. ನಂತರ, ಅದನ್ನು ಪುನಃ ಅದು ಇದ್ದ ಸ್ಥಳದಲ್ಲಿಯೇ ಬಿಡಬೇಕು. ಪ್ರತಿ ನಾಯಿಗೆ ₹1,650 ನಿಗದಿ ಮಾಡಲಾಗಿದೆ . ಇಷ್ಟು ಕಡಿಮೆ ಮೊತ್ತಕ್ಕೆ ಯಾರೂ ಟೆಂಡರ್ನಲ್ಲಿ ಭಾಗವಹಿಸುತ್ತಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ನಾಯಿ ಹಿಡಿಯುವವರಿಗೆ ಬೇಡಿಕೆ ಜಾಸ್ತಿಯಾಗಿದೆ ಎಂದು ನಗರಸಭೆ ಸಿಬ್ಬಂದಿ ಅಲವತ್ತುಗೊಳ್ಳುತ್ತಾರೆ.

ಆಸ್ಪತ್ರೆ ಮತ್ತು ಶಾಲಾ ಪ್ರದೇಶದಲ್ಲಿರುವ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಕೂಡ ಇನ್ನೂ ನಡೆದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಶಾಲೆಗಳು ಪ್ರಾರಂಭವಾಗಲಿದೆ. ಅಷ್ಟರೊಳಗೆ ನಗರಸಭೆ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-18-694612418

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.