ಬೇತಮಂಗಲ: ಕೆಜಿಎಪ್ ತಾಲ್ಲೂಕಿನ ಟಿ. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಬಾರಹಳ್ಲಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಗಾಳಿ ಸಹಿತ ಧಾರಾಕಾರ ಮಳೆಗೆ ಬಾಳೆ ತೋಟಗಳು ಸಂಪೂರ್ಣವಾಗಿ ನೆಲಕಚ್ಚಿದೆ. ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಟಿ. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಬಾರಹಳ್ಳಿ ಗ್ರಾಮದ ರೈತ ಮಹಿಳೆ ಸುಧಾರಾಣಿ ಹಾಗೂ ಅದೇ ಗ್ರಾಮದ ರೈತ ಮುನೇಗೌಡ ಎಂಬುವರಿಗೆ ಸೇರಿದ ಬಾಳೆ ತೋಟಗಳು ಗಾಳಿ ಮಳೆ ಆರ್ಭಟಕ್ಕೆ ನೆಲಸಮವಾಗಿವೆ.

ರೈತ ಮಹಿಳೆ ಸುಧಾರಾಣಿ ಮಾತನಾಡಿ, ಮೂರು ಎಕರೆಯಲ್ಲಿ ಕಷ್ಟಪಟ್ಟು ಬಾಳೆ ಬೆಳೆದಿದ್ದೆ. ಫಸಲು ಕಟಾವಿಗೆ ಬಂದು ಇನ್ನೇನು ಆದಾಯ ಗಳಿಸುವ ಆಕಾಂಕ್ಷೆಯಲ್ಲಿದ್ದೆ. ಆದರೆ, ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರೈತರ ಶ್ರಮವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಅಲವತ್ತುಕೊಂಡರು. ಮುನೇಗೌಡ ಅವರೂ ಆಗಿರುವ ನಷ್ಟವನ್ನು ಸರ್ಕಾರ ಭರಿಸಿಕೊಡಬೇಕು ಎಂದು ಮನವಿ ಮಾಡಿದರು.

ಈ ವಿಷಯ ತಿಳಿಯುತ್ತಿದ್ದಂತೆ ಮಂಗಳವಾರ ಬೆಳಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿ ವಿಶ್ವನಾಥ್ ಅವರು ತಂಬಾರಹಳ್ಳಿ ಗ್ರಾಮದ ಸಂತ್ರಸ್ತ ರೈತರ ತೋಟಗಳಿಗೆ ಭೇಟಿ ನೀಡಿದರು. ಹಾನಿಯಾದ ಬಾಳೆ ತೋಟಗಳನ್ನು ವೀಕ್ಷಿಸಿ, ರೈತರಿಂದ ಸಂಪೂರ್ಣ ಮಾಹಿತಿ ಕಲೆ ಹಾಕಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-18-269459168

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.