ಕೋಲಾರ: ತಾಲ್ಲೂಕಿನ ಕಿತ್ತಂಡೂರು ಗ್ರಾಮದಲ್ಲಿ ಗುರುವಾರ ಆನಂದ ಮಾರ್ಗ ಶಾಲೆ ಹಾಗೂ ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜಿನಿಂದ ಆರೋಗ್ಯ ತಪಾಸಣಾ ಉಚಿತ ಶಿಬಿರ ನಡೆಯಿತು.

ಶಿಬಿರದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ, ಮಕ್ಕಳ ರೋಗ, ಕಣ್ಣು, ಚರ್ಮ, ಕಿವಿ, ಗಂಟಲು ಮಧುಮೇಹ, ರಕ್ತದೊತ್ತಡ , ಇಸಿಜಿ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆಗಳು ನಡೆದವು.

ಆನಂದ ಮಾರ್ಗ ಶಾಲೆಯ ಆಚಾರ್ಯ ಆತ್ಮಬೋದಾನಂದ ಅವದೂತ ಸ್ವಾಮೀಜಿ ಮಾತನಾಡಿ, ‘ಕಾಯಿಲೆ ಬರುವ ಮುನ್ನವೇ ಎಚ್ಚರ ವಹಿಸಿದರೆ ಆಸ್ಪತ್ರೆ, ಮಾತ್ರೆ ಮುಂತಾದ ಕಷ್ಟಗಳಿಂದ ಪಾರಾಗಬಹುದು. ಹಳ್ಳಿಗಳಲ್ಲೂ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದ ಅಗತ್ಯವಿದೆ’ ಎಂದರು.

ಆನಂದ ಮಾರ್ಗ ಶಾಲೆಯ ಆಚಾರ್ಯ ಪುಣ್ಯಾನಂದ ಅವದೂತ ಸ್ವಾಮೀಜಿ, ಆಚಾರ್ಯ ದೀರಜಾನಂದ ಅವದೂತ ಸ್ವಾಮೀಜಿ, ಶಾಲೆಯ ಅಧ್ಯಕ್ಷ ರಾಮೇಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ಕೆಡಿಪಿ ಸದಸ್ಯ ತುರಾಂಡಹಳ್ಳಿ ಟಿ.ಎನ್ ರವಿ, ಕಿತ್ತಂಡೂರು ಅಂಬೇಡ್ಕರ್ ಸಂಘದ ಅಧ್ಯಕ್ಷ ನಾಗರಾಜ್, ಸಚಿನ್, ಗುಟ್ಟಹಳ್ಳಿ ರಮೇಶ್, ತುರಾಂಡಹಳ್ಳಿ ಎನ್ ಶ್ರೀನಿವಾಸ್, ಸೊಣ್ಣಪ್ಪ ಸೇರಿದಂತೆ ವೈದ್ಯರು, ಶಿಕ್ಷಕರು ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-18-972606622

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.