ಕೋಲಾರ: ನಗರದ ಪಿ.ಸಿ ಬಡಾವಣೆಯಲ್ಲಿನ ಅಂಚೆ ಕಚೇರಿ ಎದುರಿರುವ ಕೋದಂಡರಾಮಸ್ವಾಮಿ ದೇವಾಲಯದ 44ನೇ ವರ್ಷದ ರಾಮೋತ್ಸವದ ಅಂಗವಾಗಿ ಮಾರ್ಚ್ 25 ರಿಂದ 31 ರವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಈ ಪ್ರಯುಕ್ತ ಭಾನುವಾರ ನೂತನ ಉತ್ಸವ ಮೂರ್ತಿಗಳ ಗ್ರಾಮ ಪ್ರದಕ್ಷಿಣೆ ನಡೆಸಿ ದೇವಾಲಯಕ್ಕೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಪುನರ್ ಜೀರ್ಣೋದ್ಧಾರ, ನೂತನ ನವಗ್ರಹಗಳು, ನೂತನ ಧ್ವಜಸ್ತಂಭ, ನೂತನ ಸೂರ್ಯಸ್ಥಂಭ, ಗರುಡವಾಹನ ಹಾಗೂ ಕೋದಂಡರಾಮಸ್ವಾಮಿಯ 21 ಅಡಿಗಳ ಭವ್ಯ ಮೂರ್ತಿಯ ಸಂಪ್ರೋಕ್ಷಣಾ ಮಹಾಕುಂಭಾಭಿಷೇಕ ನಡೆದು ವರ್ಷವಾದ ಹಿನ್ನೆಲೆಯಲ್ಲಿ ಈ ಬಾರಿ ರಾಮೋತ್ಸವವು ಮತ್ತಷ್ಟು ಅದ್ದೂರಿಯಾಗಿ ನಡೆಯಲಿದೆ.

25 ರಂದು ವಿವಿಧ ಪೂಜೆ, ಹೋಮ ನಡೆಯಲಿವೆ. ಪೂರ್ಣ ಕುಂಭಾಭಿಷೇಕ, ಹಂಸವಾಹನೋತ್ಸವ, ಧ್ವಜಾರೋಹಣ ನಡೆಯಲಿದೆ. 26 ರಂದು ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ. ಸಂಜೆ 6.30ಕ್ಕೆ ಕೋದಂಡರಾಮಸ್ವಾಮಿಯ ಉತ್ಸವ ನಡೆಯಲಿದೆ. 27 ರಂದು ಶ್ರೀರಾಮನವಮಿ ಅಂಗವಾಗಿ ಸ್ವಾಮಿಗೆ ವಿಶೇಷ ಪೂಜೆ ನಡೆಯಲಿದೆ. ಗರುಡವಾಹನೋತ್ಸವ, ಮುದ್ರ ನೃತ್ಯ ಕಲಾನಿಕೇತನ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

28 ರಂದು ಕೋದಂಡರಾಮಸ್ವಾಮಿ ಪಟ್ಟಾಭಿಷೇಕ ಮಹೋತ್ಸವ. ಭಜನೆ ಕಾರ್ಯಕ್ರಮ ಆಯೋಜಿಸಲಾಗಿದೆ. 29 ರಂದು ಶೇಷಶಯನ ಉತ್ಸವ ಹಾಗೂ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಲಿದೆ. 30 ರಂದು ವಸಂತೋತ್ಸವ ನಡೆಯಲಿದ್ದು, ಅಂದು ಸಂಜೆ ಜಯನಾಟ್ಯ ಕಲಾ ಅಕಾಡೆಮಿ ಮಕ್ಕಳಿಂದ ಭರತ ನಾಟ್ಯ ಮೂಡಿ ಬರಲಿದೆ. ಜತೆಗೆ ಸಂಜೆ ಸ್ವಾಮಿಯ ಸಿಂಹವಾಹನೋತ್ಸವ ನಡೆಯಲಿದೆ.

31 ರಂದು ನಡೆಯುವ ಕೋದಂಡರಾಮಸ್ವಾಮಿಯ ಪಲ್ಲಕ್ಕಿ ಉತ್ಸವ ಮತ್ತು ಶೋಭಾಯಾತ್ರೆಯಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಳ್ಳಲು ಕೋರಲಾಗಿದೆ.

ಇಡೀ ಉತ್ಸವ, ಪೂಜೆಯ ನೇತೃತ್ವವನ್ನು ಪ್ರಧಾನ ಆಗಮಿಕರಾದ ಶಿವಶ್ರೀ ವಿದ್ವಾನ್, ಪ್ರಧಾನ ಅರ್ಚಕರಾದ ಕೆ.ಎಸ್.ಮಂಜುನಾಥ ದೀಕ್ಷಿತರು, ಅರ್ಚಕರಾದ ಮೃತ್ಯುಂಜಯಶಂಕರ ದೀಕ್ಷಿತರು(ಬುಜ್ಜಿ) ವಹಿಸಲಿದ್ದಾರೆ.

ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಿದ್ದು, ಕೋದಂಡರಾಮಸ್ವಾಮಿ ದೇವಾಲಯ ಸೇವಾ ಸಮಿತಿಯವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-18-465114595

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.