ಮುಳಬಾಗಿಲು: ಕೋಲಾರ ಹಾಲು ಒಕ್ಕೂಟದಲ್ಲಿ ₹500 ಕೋಟಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವು ಸತ್ಯಕ್ಕೆ ದೂರವಾದದ್ದು ಎಂದು ಪೂರ್ವ ವಿಭಾಗದ ಕೋಮುಲ್ ನಿರ್ದೇಶಕ ಕೆ.ಎನ್. ನಾಗರಾಜ್ ಶುಕ್ರವಾರ ತಿಳಿಸಿದರು.

ನಗರದ ಎಪಿಎಂಸಿ ಕಚೇರಿ ಬಳಿಯ ಕೋಮುಲ್ ಶಿಬಿರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

‘ಕೋಮುಲ್ ಹಾಲು ಒಕ್ಕೂಟದಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ₹500 ಕೋಟಿ ಭ್ರಷ್ಟಾಚಾರ ನಡೆದಿದೆ ಎಂಬುದಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಮಂಜುನಾಥ ಗೌಡ ಸೇರಿದಂತೆ ಇತರರು ಆರೋಪಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಆರೋಪ. ಒಂದು ವೇಳೆ ಈ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳು ಅವರ ಬಳಿ ಇದ್ದಲ್ಲಿ, ಅವುಗಳನ್ನು ಸಾರ್ವಜನಿಕಗೊಳಿಸಬೇಕು. ನಾವು ತಪ್ಪು ಮಾಡಿದ್ದಲ್ಲಿ, ನಮ್ಮನ್ನು ಗಲ್ಲಿಗೇರಿಸಲಿ’ ಎಂದು ಸವಾಲು ಹಾಕಿದರು.

ಒಕ್ಕೂಟದಲ್ಲಿ ಯಾವುದೇ ಟೆಂಡರ್ ಅಥವಾ ವ್ಯವಹಾರ ನಡೆಯಲು 20 ನಿರ್ದೇಶಕರು, ಸರ್ಕಾರದಿಂದ ನೇಮಕವಾದ ನಾಮನಿರ್ದೇಶಿತ ಸದಸ್ಯರು, ಒಬ್ಬ ಜೆ.ಆರ್, ಒಬ್ಬ ಎ.ಎಚ್, ಕೋಮುಲ್ ಒಕ್ಕೂಟದ ಒಬ್ಬ ವಿಶೇಷ ನಿರ್ದೇಶಕರ ಅನುಮತಿ ಪಡೆಯಬೇಕು. ಅದು ಹೇಗೆ ಭ್ರಷ್ಟಾಚಾರ ನಡೆಯಲು ಸಾಧ್ಯ ಎಂದರು.

ಈಗಾಗಲೇ ಇ.ಡಿ ಹಾಗೂ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದು, ವಿಚಾರಣೆಯು ನ್ಯಾಯಾಲಯದ ಹಂತದಲ್ಲಿದೆ. ಹೀಗಿದ್ದರೂ ಆರೋಪ ಮಾಡುತ್ತಾ ಒಕ್ಕೂಟದ ನಾಶಕ್ಕೆ ಮುಂದಾಗಿದ್ದಾರೆ ಎಂದರು.

ಪಶ್ಚಿಮ ಭಾಗದ ನಿರ್ದೇಶಕ ಬಿ.ವಿ.ಸಾಮೇಗೌಡ ಮಾತನಾಡಿ, 38 ವರ್ಷಗಳ ಹಿಂದೆ ಪ್ರಾರಂಭವಾದ ಒಕ್ಕೂಟದಲ್ಲಿ ₹500 ಕೋಟಿಗಳಲ್ಲಿ ಚಿಕ್ಕಬಳ್ಳಾಪುರದ ಮೆಗಾ ಡೇರಿ ಹಾಗೂ ಐಸ್ ಕ್ರೀಂ ಕಾರ್ಖಾನೆ ಹಾಗೂ ಕೋಲಾರದ ಸೋಲಾರ್ ಘಟಕ ಹಾಗೂ ನೂತನ ಕಾಮಗಾರಿ ಕಟ್ಟಡಗಳಿಗೆ ಅನುದಾನ ಹಂಚಿಕೆಯಾಗಿದೆ. ಆದರೆ, ಕೋಲಾರ ಒಕ್ಕೂಟದಲ್ಲಿ ₹500 ಕೋಟಿ ಭ್ರಷ್ಟಾಚಾರ ನಡೆಸಲು ಹೇಗೆ ಸಾಧ್ಯ ಎಂದು ಹೇಳಿದರು.

ಡೇರಿ ಅಧ್ಯಕ್ಷ ನಾಗಮಂಗಲ ಶಂಕರಪ್ಪ, ರಾಮಚಂದ್ರಪ್ಪ, ಪ್ರತಾಪ್, ವೆಂಕಟರಾಮಪ್ಪ, ಶ್ರೀನಿವಾಸ್, ಕೃಷ್ಣಪ್ಪ, ಮಂಜುನಾಥ, ಮುರಳಿ, ಜನಾರ್ಧಾನ್, ರವಿ, ಹರೀಶ್, ಅಮರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-18-1742182608

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.