ಕೋಲಾರ: ಕೋಲಾರ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಅವ್ಯವಹಾರ ಹಾಗೂ ಅಕ್ರಮ ನೇಮಕಾತಿ ಸಂಬಂಧ ಮತ್ತಷ್ಟು ದಾಖಲೆ ಕೋರಿದ್ದೇವೆ. ದಾಖಲೆ ನೀಡದಿದ್ದರೆ ಹೈಕೋರ್ಟ್ ಮೊರೆ ಹೋಗುತ್ತೇವೆ. ಒಕ್ಕೂಟದ ಅಧ್ಯಕ್ಷರು, ನಿರ್ದೇಶಕರು ಹಾಗೂ ಅಧಿಕಾರಿಗಳ ಅಕ್ರಮದ ಮುಖವಾಡ ಕಳಚದೆ ಬಿಡುವುದಿಲ್ಲ ಎಂದು ಸಾಮಾಜಿಕ ಹೋರಾಟಗಾರರಾದ ಗೂಳಿಗಾನಹಳ್ಳಿ ನಾಗರಾಜ ಹಾಗೂ ಕೆ.ಪಿ.ವೆಂಕಟಚಲಾಪತಿ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಕ್ಕೂಟದಲ್ಲಿನ ಅವ್ಯವಹಾರ ಸಾಬೀತುಪಡಿಸುವಂತೆ ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಸವಾಲು ಹಾಕಿದ್ದಾರೆ. ಅಲ್ಲಿ ನಡೆದಿರುವುದು ₹ 300 ಕೋಟಿ ಅಲ್ಲ; ಒಟ್ಟು ₹ 512 ಕೋಟಿ ಮೊತ್ತದ ಅವ್ಯವಹಾರ. ಪ್ರಕರಣದ ಸಂಪೂರ್ಣ ತನಿಖೆಗೆ ಸಹಕಾರ ನೀಡುವ ವಿಚಾರದಲ್ಲಿ ಸಕ್ಷಮ ಪ್ರಾಧಿಕಾರಗಳು ಕರ್ನಾಟಕ ಲೋಕಾಯುಕ್ತದ ಕೈಕಟ್ಟಿಹಾಕಿವೆ’ ಎಂದು ದೂರಿದರು.

ಧೈರ್ಯವಿದ್ದರೆ, ತಾಕತ್ತಿದ್ದರೆ ಕೋಮುಲ್ಗೆ ಸಂಬಂಧಿಸಿದ ಎಂಟು ವಿವಿಧ ದಾಖಲೆ ಕೊಡಲಿ. ಒಕ್ಕೂಟದ ನೌಕರರ ಸಾಮಾನ್ಯ ಕಲ್ಯಾಣ ಟ್ರಸ್ಟ್ನ ಬೈಲಾ, ಟ್ರಸ್ಟ್ನ ಬ್ಯಾಂಕ್ ಖಾತೆ, ಕಳೆದ 10 ವರ್ಷಗಳಲ್ಲಿನ ಬ್ಯಾಂಕ್ ಸ್ಟೇಟ್ಮೆಂಟ್ ಕೊಡಲಿ. ಅಕ್ರಮ ನಡೆದಿರುವುದನ್ನು ಸಾಬೀತುಪಡಿಸುತ್ತೇವೆ ಎಂದು ಸವಾಲು ಹಾಕಿದರು.

ಗೂಳಿಗಾನಹಳ್ಳಿ ನಾಗರಾಜ ಮಾತನಾಡಿ, ‘ಕೋಮುಲ್ ಅವ್ಯವಹಾರದ ವಿರುದ್ಧ ನಾವು ವರ್ಷದ ಹಿಂದೆ ನೀಡಿದ ದೂರಿಗೆ ಮನ್ನಣೆ ನೀಡಿ ಲೋಕಾಯುಕ್ತ ಅಧಿಕಾರಿಗಳು ಏ.22ರಿಂದ 24ವರೆಗೆ ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿ ಪರಿಶೀಲನೆ ನಡೆಸಿದ್ದಾರೆ. ವಿಶೇಷವೆಂದರೆ ದೂರುದಾರರಾದ ನಮ್ಮ ಸಮ್ಮುಖದಲ್ಲೇ ಈ ಪ್ರಕ್ರಿಯೆ ನಡೆಸಿದ್ದಾರೆ. ಈ ಹಿಂದೆ ಲೋಕಾಯುಕ್ತ ಅಲ್ಲದೇ; ಇ.ಡಿ, ಸಿಬಿಐಗೂ ದೂರು ಸಲ್ಲಿಸಿದ್ದೆವು’ ಎಂದರು.

ರೈತರ ಶ್ರಮದ ಹಾಲಿನ ಹಣದಲ್ಲಿ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕೆ.ಪಿ.ವೆಂಕಟಚಲಾಪತಿ ಮಾತನಾಡಿ, ‘ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆ ವಿಚಾರದಲ್ಲಿ ಶಾಸಕರು ವಿಚಲಿತರಾದಂತೆ ಕಂಡಿಬಂದಿದ್ದು, ನಿರೀಕ್ಷಿತ ಉತ್ತರ ಕೊಡಲಿಲ್ಲ. ನೇಮಕಾತಿ ವಿಚಾರದಲ್ಲಿ ಇ.ಡಿ ಪ್ರಕ್ರಿಯೆ ನಡೆಯುತ್ತಿದೆ ಎಂಬುದಾಗಿ ಪತ್ರಿಕಾಗೋಷ್ಠಿಯಲ್ಲೂ ಹಾರಿಕೆ ಉತ್ತರ ನೀಡಿದ್ದಾರೆ’ ಎಂದು ದೂರಿದರು.

ಪ್ರಮುಖವಾಗಿ 2023ರ ಸೆಪ್ಟೆಂಬರ್ನಲ್ಲಿ ಒಕ್ಕೂಟದ ವಿವಿಧ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ಅನರ್ಹರನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಪರೀಕ್ಷಾ ನಿಯಮ ಉಲ್ಲಂಘಿಸಲಾಗಿದೆ. ಕೆಲ ಅಭ್ಯರ್ಥಿಗಳ ಒಂದೇ ಹೆಸರು, ಒಂದೇ ರೋಲ್ ನಂಬರ್ ಮತ್ತು ಒಂದೇ ಸಂಖ್ಯೆಯ ಓಎಂಆರ್ ಶೀಟ್ಗಳ ಸಮಾನಾಂತರ ಎರಡು ಓಎಂಆರ್ ಶೀಟ್ಗಳನ್ನು (ಒಂದು ಅಸಲಿ, ಒಂದು ನಕಲು) ಸೃಷ್ಟಿಸಿ ತಿದ್ದುಪಡಿ ಮಾಡಲಾಗಿದೆ. ಎರಡೂ ಶೀಟ್ಗಳಲ್ಲಿ ಬೇರೆ ಬೇರೆ ಅಂಕ ಬಂದಿದೆ, ಸಹಿ ಕೂಡ ವಿಭಿನ್ನವಾಗಿದೆ. ಅಪಾರ್ಟ್ಮೆಂಟ್ನಲ್ಲಿ ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದರು.

‘ನೀವು ಎಷ್ಟು ಅಂಕಕೊಟ್ಟಿದ್ದಿರಿ? ವಾಸ್ತವವಾಗಿ ಅವರು ಎಷ್ಟು ಅಂಕ ಪಡೆದಿದ್ದಾರೆ ಎಂಬುದನ್ನು ಅಧ್ಯಕ್ಷರು ಸ್ಪಷ್ಟಪಡಿಸಬೇಕು. ವಾಮಮಾರ್ಗದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹುದ್ದೆ ಪಡೆದವರ ವಿರುದ್ಧವೂ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ಇದಲ್ಲದೇ, ಒಕ್ಕೂಟದ ನೌಕರರ ಸಾಮಾನ್ಯ ಕಲ್ಯಾಣ ಟ್ರಸ್ಟ್ನಲ್ಲೂ ಅಕ್ರಮ ನಡೆದಿದೆ. ನಿರ್ದೇಶಕರು ₹ 13 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಪಡೆದುಕೊಂಡಿದ್ದಾರೆ. ಈ ಮೂಲಕ ದುರ್ಬಳಕೆ ಮಾಡಿಕೊಂಡಿದ್ದಾರೆ. ಸೊಸೈಟಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ₹ 3 ಕೋಟಿಗೆ ಬಿಲ್ ಇಲ್ಲ ಎಂದು ಆಪಾದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಶ್ರೀನಿವಾಸಪುರದ ರಮೇಶ್ ಬಾಬು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-18-1938754013

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.