ಕೋಲಾರ: ಕುರುಬ ಸಮಾಜದ ದೊಡ್ಡದ್ಯಾವರ ಉತ್ಸವದ ಪ್ರಯುಕ್ತ ಸಂಪ್ರದಾಯದಂತೆ ನಗರದ ಕಠಾರಿಪಾಳ್ಯದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಭಂಡಾರಪೆಟ್ಟಿ ಪೂಜೆ ಮತ್ತು ಗೋಪೂಜೆ, ತೆಂಗಿನಕಾಯಿ ಪವಾಡ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಶ್ರೀನಿವಾಸಪುರ ತಾಲ್ಲೂಕಿನ ಕೆ.ಕುರಪಲ್ಲಿ ಗ್ರಾಮದ ಬೀರೇಶ್ವರ, ಭತ್ತೇಶ್ವರ, ಸಿದ್ದೇಶ್ವರ ಸ್ವಾಮಿ ದೇವಾಲಯದ ದ್ಯಾವರ ಉತ್ಸವದ ಪೂರ್ವಸಿದ್ಧತೆ ಹಿನ್ನೆಲೆ ಕಠಾರಿಪಾಳ್ಯದಲ್ಲಿ ಭಂಡಾರ ಪೂಜೆ ಆಚರಣೆ ಕಳೆಗಟ್ಟಿತು.

ಬಲಾಹರೇ, ಬಲಾಹರೇ ಎಂದು ತಲೆ ಮೇಲೆ ತೆಂಗಿನಕಾಯಿ ಒಡೆಯುವ ಪವಾಡ ಕಾರ್ಯಕ್ರಮ ಜನರ ಕಣ್ಮನ ಸೆಳೆಯಿತು. ತಲೆ ಮೇಲೆ ತೆಂಗಿನಕಾಯಿ ಒಡೆದ ತಕ್ಷಣ ತೆಂಗಿನಕಾಯಿ ಚೂರು, ಚೂರು ಆಗವುದನ್ನು ಗಮನಿಸಿದ ಸಾರ್ವಜನಿಕರು ಕೆಲಹೊತ್ತು ಆಶ್ಚರ್ಯಚಕಿತರಾದರು. ಬಸವನ ಎದರು ಮೈ ಮರೆತು ತೆಂಗಿನಕಾಯಿ ಒಡೆಸಿಕೊಳ್ಳುವ ವೀರಕುಮಾರರ ಪವಾಡ ನೋಡುಗರ ಗಮನ ಸೆಳೆಯಿತು.

ಏಪ್ರಿಲ್ 10 ರಿಂದ 13 ರವರೆಗೆ ದೇವರ ಉತ್ಸವ, ಕುರುಬರ ದೊಡ್ಡ ದ್ಯಾವರ ಇರುವ ಹಿನ್ನೆಲೆ ಭಂಡಾರ ಪೆಟ್ಟಿಗೆ ಮತ್ತು ಬಸವ ಪ್ರತಿ ಮನೆಗೂ ತೆರಳುವುದು ಸಂಪ್ರದಾಯವಾಗಿದೆ. ಬಸವನ ಜೊತೆಗೆ ಭಂಡಾರ ಪೂಜೆ ನೆರವೇರಿಸಿದ ನಂತರ ಕುರುಬ ಸಮಾಜದ ಗುರುಗಳು ತೆಂಗಿನಕಾಯಿ ಪವಾಡ ಮಾಡಿದರು. ಕಲಾಟಗಾರರು ನೃತ್ಯ ಪ್ರದರ್ಶಿಸಿದರು. ಶಿವಪೂಜೆ, ಗಂಗೆ ಪೂಜೆ ನೆರವೇರಿಸಿದ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಜರಗಿತು.

ಹಾಲುಮತಸ್ಥರಾದ ಕೈಲಾಸ್, ಅಂಚೆ ಅಶ್ವಥ್, ಅಂಚೆ ವಿಜಯ್, ಕೆ.ಮಂಜುನಾಥ್, ಶಿವಕುಮಾರ್, ರಾಜಣ್ಣ, ಪ್ರಭಾಕರ್, ಚಂದ್ರಪ್ಪ, ರಾಮಕೃಷ್ಣಪ್ಪ, ಗೋಪಾಲಪ್ಪ, ಶಿವಪ್ರಕಾಶ್, ವಿಶ್ವನಾಥ್, ಸೋಮಶೇಖರ್, ರಾಜಶೇಖರ್, ಶ್ರೀಧರ್, ಚಂದ್ರಶೇಖರ್, ಶಿವಪ್ರಕಾಶ್, ಈಶ್ವರ್ ದರ್ಶನ್, ಗಾಯತ್ರಿ, ಜಯಂತಿ, ರಾಕೇಶ್, ಚರಣ್, ರವಿಕುಮಾರ್, ವೇಣುಗೋಪಾಲ್, ನಾಗರಾಜು, ವೆಂಕಟಾಚಲಪತಿ, ದೇವರಾಜ್ ಹಾಗೂ ಸಮುದಾಯದವರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-18-1398174908

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.