ವೇಮಗಲ್: ಹೋಬಳಿಯ ಕ್ಯಾಲನೂರು ಗ್ರಾಮದಲ್ಲಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಕೋಲಾರ, ಪಶು ಚಿಕಿತ್ಸಾಲಯ ಕ್ಯಾಲನೂರು ಮತ್ತು ಸ್ನೇಹ ಭಾರತಿ ವಿವಿಧೋದ್ದೇಶ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ಪಶು ಆರೋಗ್ಯ ಶಿಬಿರ ಹಾಗೂ ಖೇತ್ ಬಚಾವೋ (ಕೃಷಿ ಉಳಿಸಿ) ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಕೋಲಾರದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಾನಂದ ಹೊಂಗಲ ಮಾತನಾಡಿ, ಜಾನುವಾರುಗಳ ಆರೋಗ್ಯ ರಕ್ಷಣೆ ಮತ್ತು ಕೃಷಿ ಭೂಮಿಯ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಕ್ಯಾಲನೂರು ಪಶು ಚಿಕಿತ್ಸಾಲಯದ ಪಶುವೈದ್ಯಾಧಿಕಾರಿ ಡಾ.ವಿನಯ್ ಬಿ.ಎ ಮತ್ತು ಡಾ.ವಿಶ್ವನಾಥ ಅವರು ಜಾನುವಾರುಗಳಿಗೆ ಉಚಿತವಾಗಿ ವಿವಿಧ ಚಿಕಿತ್ಸೆ ನೀಡಿದರು. ಶಿಬಿರದಲ್ಲಿ ಜಾನುವಾರುಗಳಿಗೆ ಗರ್ಭ ತಪಾಸಣೆ, ಬರಡು ರಾಸುಗಳ ಚಿಕಿತ್ಸೆ, ಪಡ್ಡೆಗಳ ಗರ್ಭಕೋಶದ ಬೆಳವಣಿಗೆಗೆ ಔಷಧಿ, ಹಾಲಿನಲ್ಲಿ ಜಿಡ್ಡಿನಾಂಶದ ಏರಿಳಿತ ತಪಾಸಣೆ, ಕೆಚ್ಚಲು ಬಾವು ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಜೊತೆಗೆ ರಕ್ತ ಹೀರುವ ಪರೋಪ ಜೀವಿಗಳಾದ ಉಣ್ಣೆ ಮತ್ತು ಹೇನುಗಳ ಬಾಧೆ ನಿವಾರಣೆಗೆ ಔಷಧಿ ಸಿಂಪಡಣೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ವಿತರಿಸಲಾಯಿತು.

ಜೂನ್ 1 ರಿಂದ 30 ರವರೆಗೆ ಜಿಲ್ಲೆಯಾದ್ಯಂತ ‘ಖೇತ್ ಬಚಾವೋ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಕೃಷಿ ಡಾ.ಮಂಜುನಾಥ ರೆಡ್ಡಿ ಟಿ.ಬಿ., ಡಾ.ಶಶಿಧರ್ ಕೆ.ಆರ್., ರಾಮಕೃಷ್ಣ ಬಾಬು, ಕ್ಯಾಲನೂರು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-18-1840819274

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.