ಮಾಲೂರು: ನಗರದ ಮಾರುತಿ ಬಡಾವಣೆಯಲ್ಲಿ ಶುಕ್ರವಾರ ಸಿಐಯುಟಿ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.

ಈ ವೇಳೆ ಸಿಐಯುಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ ಮಾತನಾಡಿ, ಕಾರ್ಮಿಕರ ಪರಿಶ್ರಮದಿಂದ ಜಗತ್ತು ಬೆಳೆದು ನಿಂತಿದೆ. ಕಾರ್ಮಿಕರಿಲ್ಲದೆ ಸಮಾಜದ ಚಕ್ರ ತಿರುಗದು ಎಂದು ತಿಳಿಸಿದರು.

ಪ್ರಾರಂಭದಲ್ಲಿ ಕಾರ್ಮಿಕರು ದಿನಕ್ಕೆ 10 ರಿಂದ 14 ಗಂಟೆ ಕೆಲಸ ಮಾಡಬೇಕಿತ್ತು. ಇದಕ್ಕೆ ವಿರೋಧವಾಗಿ 8 ಗಂಟೆಗಳ ಕೆಲಸದ ಅವಧಿ ನಿಗದಿಪಡಿಸಬೇಕೆಂದು 1886ರ ಮೇ 1ರಂದು ಭಾರೀ ಮಟ್ಟದಲ್ಲಿ ಪ್ರತಿಭಟನೆಗಳು ನಡೆದವು. ವಿಶೇಷವಾಗಿ ಶಿಕಾಗೋ ನಗರದಲ್ಲಿ ನಡೆದ ಹೋರಾಟಗಳು ಇತಿಹಾಸ ಪ್ರಸಿದ್ಧವಾದವು. ಈ ಚಳವಳಿಯ ವೇಳೆ ಅನೇಕ ಕಾರ್ಮಿಕರು ತಮ್ಮ ಜೀವ ತ್ಯಾಗ ಮಾಡಿದರು. ಈ ಹೋರಾಟದ ಪರಿಣಾಮವಾಗಿ ನಂತರ ಹಲವು ದೇಶಗಳಲ್ಲಿ 8 ಗಂಟೆಗಳ ಕೆಲಸದ ನಿಯಮ ಜಾರಿಗೆ ಬಂತು. ಕಾರ್ಮಿಕರ ಜೀವನಮಟ್ಟ ಸುಧಾರಿಸಲು ಮತ್ತು ಅವರ ಹಕ್ಕುಗಳನ್ನು ಕಾಪಾಡಲು ವಿವಿಧ ಕಾನೂನುಗಳು ರೂಪುಗೊಂಡವು. ಹಾಗಾಗಿ, ಕಾರ್ಮಿಕರ ದಿನವು ಕೇವಲ ಆಚರಣೆ ಮಾತ್ರವಲ್ಲ, ನ್ಯಾಯಯುತ ಕೆಲಸದ ಪರಿಸರಕ್ಕಾಗಿ ನಡೆದ ಹೋರಾಟದ ಸಂಕೇತ ಎಂದು ನೆನೆದರು.

ಸಿಐಯುಟಿ ತಾಲ್ಲೂಕು ಸಂಚಾಲಕ ಐ.ಸಿ.ವೀರಭದ್ರ, ರಾಜ್ಯ ಉಪಾಧ್ಯಕ್ಷ ಎಚ್.ಎನ್.ಗೋಪಾಲಗೌಡ, ಎನ್.ಅಶೋಕ್, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಸುಜಾತ, ಶ್ರೀನಿವಾಸ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-18-916413718

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.