ಕೋಲಾರ: ಜಿಲ್ಲೆಯಲ್ಲಿನ ಕೆರೆಗಳ ಹೂಳು ಹಾಗೂ ಮಣ್ಣನ್ನು ಯಾವುದೇ ರೀತಿಯ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಲು ಹಾಗೂ ಬೇರೆಡೆ ಸಾಗಣೆ ಮಾಡುವುದನ್ನು ಸಣ್ಣ ನೀರಾವರಿ ಇಲಾಖೆ ನಿಷೇಧಿಸಿದೆ. ಈ ಮೂಲಕ ಕೆರೆಗಳ ಮಣ್ಣು ಸಾಗಣೆ ಮಾಫಿಯಾಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

ಆಯಾಯ ಕೆರೆಗಳ ಜಲಾನಯನ ಪ್ರದೇಶದ ಅಚ್ಚುಕಟ್ಟುದಾರರು ಮಾತ್ರ ಈ ಹೂಳಿನ ಮೇಲೆ ಹಕ್ಕು ಹೊಂದಿರುತ್ತಾರೆ. ಯಾರ ಅನುಮತಿಯನ್ನೂ ಪಡೆಯದೆ ಕೆರೆಯಲ್ಲಿ ಜೆಸಿಬಿ, ಹಿಟಾಚಿ ಇಳಿಸಿ ವಾಣಿಜ್ಯ ಉದ್ದೇಶಕ್ಕೆ ಹೂಳು ತೆಗೆದರೆ, ಕೆರೆಯ ಸ್ವರೂಪ ಹಾಳು ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ.

ಅವೈಜ್ಞಾನಿಕವಾಗಿ, ಅಡ್ಡಾದಿಡ್ಡಿಯಾಗಿ ಹೂಳು ತೆಗೆದು ಕೆರೆ ಸ್ವರೂಪವನ್ನೇ ಬದಲಿಸುವ ಮಣ್ಣು ಸಾಗಣೆ ದಂಧೆಗೆ ಕಡಿವಾಣ ಹಾಕಲು ಈ ಕ್ರಮ ವಹಿಸಲಾಗಿದೆ. ಕೆರೆ ವ್ಯಾಪ್ತಿಯ ರೈತರು ಮಾತ್ರ ಈ ಮಣ್ಣು ಬಳಸಿಕೊಳ್ಳಲು ಅನುಮತಿ ನೀಡಬೇಕೆಂಬ ಸುತ್ತೋಲೆಯನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಈಚೆಗೆ ಹೊರಡಿಸಿದ್ದಾರೆ.

ಪ್ರತಿವರ್ಷವೂ ಒಡಲು ಬಗೆಯುವ ಕೆಲಸ ನಡೆಯುತ್ತಿದೆ. ಕೆರೆ ಬಗೆಯುವ ಕೆಲಸ ಎಲ್ಲೆಡೆ ಎಗ್ಗಿಲ್ಲದೆ ನಡೆಯುತ್ತಿದೆ. ಬೇಸಿಗೆಯಲ್ಲಿ ನೀರು ಬರಿದಾಗುತ್ತಿದ್ದಂತೆ ಕೆರೆಗಳಿಗೆ ಇಳಿಯುತ್ತಿರುವ ಜೆಸಿಬಿಗಳು, ಹಿಟಾಚಿಗಳು ಎಲ್ಲೆಂದರಲ್ಲಿ ಮಿತಿ ಇಲ್ಲದೆ ಅಗೆದು ಟ್ರಾಕ್ಟರ್ ಮತ್ತು ಟಿಪ್ಪರ್ನಲ್ಲಿ ಸಾಗಿಸುತ್ತಿವೆ.

ಇದರಿಂದ ಕೆರೆಗಳೊಳಗೆ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗುತ್ತಿವೆ. ಕೆರೆಗಳ ನೀರಿನಲ್ಲಿ ಗುಂಡಿಗಳಿರುವುದು ಗೊತ್ತಾಗದೆ ಜನ ಹಾಗೂ ಜಾನುವಾರು ಪ್ರಾಣ ಕಳೆದುಕೊಳ್ಳುವ ಅವಘಡಗಳು ಸಂಭವಿಸುತ್ತಿವೆ. ಅಲ್ಲದೇ; ಕೆರೆಯ ಮೂಲ ಸ್ವರೂಪವೇ ಹಾಳಾಗುತ್ತಿದೆ. ಜತೆಗೆ ಏರಿಯ ಸೋರಿಕೆಗೂ ಇದು ಕಾರಣವಾಗುತ್ತಿದೆ. ಇಂತಹ ದೂರುಗಳು ಹೆಚ್ಚಾದ ಕಾರಣ ಈ ಆದೇಶ ಹೊರಡಿಸಲಾಗಿದೆ.

ಕೆರೆಯ ಜಲಾನಯನ ಪ್ರದೇಶಗಳಲ್ಲಿ ಉಂಟಾಗುವ ಮಣ್ಣಿನ ಸವಕಳಿಯಿಂದ ಕೆರೆಗಳಲ್ಲಿ ಸ್ವಾಭಾವಿಕವಾಗಿ ಶೇಖರಣೆಗೊಳ್ಳುವ ಹೂಳು ಮಿಶ್ರಿತ ಮಣ್ಣು ಫಲವತ್ತಾಗಿರುತ್ತದೆ. ಈ ಫಲವತ್ತಾದ ಹೂಳನ್ನು ಕರೆಗಳಿಂದ ತೆಗೆದು ರೈತರು ಕೃಷಿ ಭೂಮಿಗಳಲ್ಲಿ ಬಳಸಿಕೊಳ್ಳುವುದರಿಂದ ಬೆಳೆಗಳ ಇಳುವರಿ ಹೆಚ್ಚಾಗುತ್ತಿದೆ. ಅಲ್ಲದೆ ಕೆರೆಗಳ ಮೂಲ ನೀರಿನ ಸಂಗ್ರಹಣಾ ಸಾಮರ್ಥ್ಯ ಕೂಡ ಹಾಗೇ ಉಳಿಸಬಹುದಾಗಿದೆ. ಆದರೆ, ಅವೈಜ್ಞಾನಿಕವಾಗಿ ಅಡ್ಡಾದಿಡ್ಡಿಯಾಗಿ ಕೆರೆಯ ಒಡಲು ಬಗೆದರೆ ಜಲಕಾಯದ ಸ್ವರೂಪಕ್ಕೆ ಧಕ್ಕೆಯಾಗಲಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

ಕೆರೆಗಳ ಅಚ್ಚುಕಟ್ಟು ಪ್ರದೇಶಗಳ ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಬಳಸಿಕೊಳ್ಳಲು ಮಾತ್ರ ಹೂಳು ತೆಗೆಯಲು ಅನುಮತಿ ನೀಡಬಹುದು. ಆದರೆ, ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮೂಲಕ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ಪ್ರಾಧಿಕಾರ ಸಮ್ಮತಿ ನೀಡಿದರೆ ಮಾತ್ರ ಹೂಳೆತ್ತುವ ಪ್ರಸ್ತಾವನೆಗೆ ಅನುಮತಿಯನ್ನು ಅಧಿಕಾರಿಗಳು ನೀಡಬೇಕು ಎಂದು ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-18-1974049135

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.