ಕೋಲಾರ: ಸಾರ್ವಜನಿಕರ ಹಿತ ಕಾಯಬೇಕಾದ ಉಪ ಅರಣ್ಯ ಸಂರಕ್ಷಣಾಧಿಕಾರಿಯು ರೈತರನ್ನು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಅಪರಾಧಿಗಳಂತೆ ಬಿಂಬಿಸಿ ಭೂಮಾಫಿಯಾ ಕೈವಾಡವಿದೆ, ಜೈಲಿಗೆ ಕಳಿಸುತ್ತೇನೆ ಎಂಬುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅವರ ಈ ಹೇಳಿಕೆ ಖಂಡನಾರ್ಹ ಎಂದು ಜಿಲ್ಲಾ ಭೂಸಂತ್ರಸ್ತರ ಹೋರಾಟ ಸಮಿತಿ ಹಾಗೂ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಆರ್.ಶ್ರೀನಿವಾಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, 'ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಮೊದಲಿನಿಂದಲೂ ತಪ್ಪು ಮಾಹಿತಿ ನೀಡುತ್ತಾ ಬಂದಿದ್ದಾರೆ. ಇದಕ್ಕೆ ಸಾಕ್ಷಿಯೇ ತಾಲ್ಲೂಕಿನ ಹುತ್ತೂರು ಹೋಬಳಿ ಕಿರು ಅರಣ್ಯ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಅಧಿಸೂಚನೆಯನ್ನು ರದ್ದುಗೊಳಿಸಿ ಸಣ್ಣ ಅರಣ್ಯಗಳಾಗಿ ಪರಿಚಯಿಸಿ ತಾತ್ಕಾಲಿಕ ಅಥವಾ ಮೂರು ವರ್ಷಗಳ ಯೋಜನೆ ಎಂದು ಜಾರಿ ಮಾಡಿದ್ದಾರೆ. ಅದರಂತೆ ಅಬ್ಬಣಿ ಕಿರು ಅರಣ್ಯವನ್ನು ಸರ್ಕಾರದ 1931 ಅಧಿಸೂಚನೆಯಂತೆ 619 ಎಕರೆ 1 ಗುಂಟೆ ಗುರ್ತಿಸಿ ಇದು ತಾತ್ಕಾಲಿಕ, ಮೂರು ವರ್ಷ ಮತ್ತು 5 ವರ್ಷಗಳ ಯೋಜನೆಗೆ ಒಳಪಟ್ಟಿರುತ್ತದೆ ಎಂದು ನಮೂದಿಸಲಾಗಿದೆ' ಎಂದಿದ್ದಾರೆ.

ಈ ಯೋಜನೆ ಕಾರ್ಯವೈಖರಿಯ ಕುರಿತು ಅಂದಿನ ಜಿಲ್ಲಾಧಿಕಾರಿ, ಮುಖ್ಯ ಸಂರಕ್ಷಣಾಧಿಕಾರಿ ವಾರ್ಷಿಕ ವರದಿ ಸಲ್ಲಿಸಬೇಕಾಗಿತ್ತು. ಕಿರು ಅರಣ್ಯ ನಿಯಮಗಳನ್ನು ಮೈಸೂರು ಗೆಜೆಟ್ನಲ್ಲಿ ಪ್ರತ್ಯೇಕವಾಗಿ ಪ್ರಕಟಿಸುವಂತೆ ಮೈಸೂರು ಜಿಲ್ಲಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರು. ಕೋಲಾರ ಜಿಲ್ಲೆಯಲ್ಲಿ ಇದು ಅನುಷ್ಠಾನಗೊಂಡಿರುವುದಿಲ್ಲ. ಕಿರು ಅರಣ್ಯಗಳು ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 35, ಅರಣ್ಯ ಕಾಯ್ದೆ 1927 ಅಥವಾ ಹೈದರಾಬಾದ್ ಅರಣ್ಯ ಕಾಯ್ದೆ 1355ರ ಅಡಿಯಲ್ಲಿ ಸಂರಕ್ಷಿತ ಅರಣ್ಯ, ರಕ್ಷಿತಾರಣ್ಯ, ರಾಜ್ಯ ಅರಣ್ಯವಾಗಿದೆ. ಇದನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸದನದಲ್ಲಿಯೇ ಹೇಳಿದ್ದಾರೆ ಎಂದು ವಿವರಿಸಿದ್ದಾರೆ.

ಜಿಲ್ಲೆಯಲ್ಲಿ 1941 ರಂತೆ ಫಾರೆಸ್ಟ್ ಸೆಟಲ್ಮೆಂಟ್ ಅಧಿಕಾರಿಯೊಂದಿಗೆ ಮೈಸೂರು ಜಿಲ್ಲಾಧಿಕಾರಿ, ಮುಖ್ಯ ಸಂರಕ್ಷಣಾಧಿಕಾರಿ, ಲ್ಯಾಂಡ್ ರೆಕಾರ್ಡ್ ಮೈಸೂರು ಜಿಲ್ಲಾಧಿಕಾರಿ, ಕೋಲಾರ ಜಿಲ್ಲಾಧಿಕಾರಿ ಒಳಗೊಂಡಂತೆ 409 ಎಕರೆ 35 ಗುಂಟೆಗೆ ಆದೇಶ ಮಾಡಿ ಸಿ ಸ್ಟೇಟ್ಮೆಂಟ್, ಬಿ ಸ್ಟೇಟ್ಮೆಂಟ್ ಅಳವಡಿಸಿ ಬೌಂಡರಿಗಳು ಮತ್ತು ಚೈನುಗಳ ಲೆಕ್ಕಾಚಾರದಲ್ಲಿ ಆದೇಶಿಸುತ್ತಾರೆ. ಅದರಂತೆ ಇಂದಿಗೂ ನೀಲಗಿರಿ ಮರಗಳು ಮತ್ತು ಬಿದಿರಿನ ಮರಗಳು ಅಲ್ಲಿರುವುದು ಸಾಕ್ಷಿಯಾಗಿದೆ. ನೋಟಿಫಿಕೇಶನ್ ಹೆಸರಿನಲ್ಲಿ ಅರಣ್ಯ ಒತ್ತುವರಿ ಭೂಮಿ ಮೂರು ಎಕರೆಗಿಂತ ಕಡಿಮೆ ಇರುವ ಒತ್ತವರಿದಾರರನ್ನು ಒಕ್ಕಲಿಬ್ಬಿಸಬಾರದೆಂದು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಕಾರ್ಯದರ್ಶಿ ಆದೇಶವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಧಿಕ್ಕರಿಸಿದ್ದಾರೆ. ರೈತರ, ಕಂದಾಯ ಇಲಾಖೆಯ ಒಂದು ಎಕರೆ, ಎರಡು ಎಕರೆ, ಮೂರು ಎಕರೆ ಜಮೀನುಗಳನ್ನು ದ್ವಂಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರೈತರ ಬೆಳೆಗಳನ್ನ ನಾಶ ಮಾಡಿ ಅರಣ್ಯ ಇಲಾಖೆಯವರೇ 2022 -23 ರಲ್ಲಿ ಕಾರ್ಯ ಯೋಜನೆ ತಯಾರಿಸಿ ಅದರಂತೆ ಸಂದೀಪ್ ಕುಮಾರ್ ಸರ್ವೆ ಅಧಿಕಾರಿಯ ಕೈಜೋಡಿಸಿಕೊಂಡು ದಿನಾಂಕ 6-9-2024 ತಪ್ಪು ಅಂಕಿ ಅಂಶಗಳೊಂದಿಗೆ ಕಂದಾಯ ಇಲಾಖೆಯ ಯಾರ ಸಹಿಯು ಇಲ್ಲದೆ, ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಪೊಲೀಸ್ ನೆರವಿನೊಂದಿಗೆ ನೂರಾರು ಜನರು ರಾತ್ರಿ ಮೂರು ನಾಲ್ಕು ಗಂಟೆಯ ಸಮಯದಲ್ಲಿ ಜೆಸಿಬಿಗಳೊಂದಿಗೆ ಜಮೀನು ನಾಶ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಏಪ್ರಿಲ್ 2025ರಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಜಂಟಿ ಸರ್ವೆ ನಡೆದೇ ಇಲ್ಲ ಎಂದು ಹಿಂಬರಹವನ್ನು ರೈತರಿಗೆ ನೀಡಿದ್ದಾರೆ. ಮೇ 2025 ರಂದು ನಕ್ಷೆ ತಪ್ಪಾಗಿದ್ದು ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ. ಜೂನ್ 2025 ರಂದು ರಾಜಸ್ವ ನಿರೀಕ್ಷಕರ ವರದಿಯಂತೆ ದುರಸ್ತಿಯಾದ ಹಿಡುವಳಿ ಜಮೀನುಗಳನ್ನು ನಾಶ ಮಾಡಿದ ಅರಣ್ಯ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಪರಿಹಾರ ಕಂಡುಕೊಳ್ಳುವಬಹುದೆಂದು ಕೋಲಾರ ತಹಶೀಲ್ದಾರ್ ಆದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಾಗಿ ಕೋಲಾರ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್, ಡಿಎಫ್ಓ ಮಹೇಶ್, ಎಸಿಎಫ್ ಪುಷ್ಪಲತಾ, ಆರ್.ಎಫ್.ಓ ಮಂಜುನಾಥ್, ನಾಗೇಂದ್ರ, ಫಾರೆಸ್ಟ್ ಗಾರ್ಡ್ ವಿರುದ್ಧ ವಿಚಾರಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಜಿಲ್ಲಾಡಳಿತ ಜಂಟಿ ಸರ್ವೆ ಮಾಡಿ ನಕ್ಷೆ ತಯಾರಿಸಿ ರೈತರ ಭೂಮಿ ಯಾವುದು? ಅರಣ್ಯ ಭೂಮಿ ಯಾವುದು? ಎಂಬುದನ್ನು ಗುರುತಿಸಲು ಸೂಚಿಸಿದ್ದು, ಅದರಂತೆ ಜಂಟಿ ಸರ್ವೆ ನಕ್ಷೆ ಮುಗಿದು ಸಹಿಯಾಗಿದೆ. ರೈತರ ಭೂಮಿ, ಅರಣ್ಯ ಭೂಮಿ ಯಾವುದೆಂದು ಗೊತ್ತಾಗಿದೆ. ಇದರಿಂದ ರೊಚ್ಚಿಗೆದ್ದ ಅರಣ್ಯ ಅಧಿಕಾರಿಗಳು 1923 ರಲ್ಲಿ ರೈತರಿಗೆ ಕೊಟ್ಟಂತಹ ಜಮೀನುಗಳನ್ನು ನಾಶಪಡಿಸಿದ್ದಲ್ಲದೆ ರೈತರನ್ನು, ತಾಲ್ಲೂಕು ಭೂಮಾಪನ ಅಧಿಕಾರಿಗಳನ್ನು ಭೂ ಮಾಫಿಯಾ, ರಿಯಲ್ ಎಸ್ಟೇಟ್, ಕೇಸು ದಾಖಲಿಸಿ ಜೈಲಿಗೆ ಕಳಿಸುವುದು ಎಂಬ ಬೆದರಿಕೆಗಳು ಕೋಲಾರದಲ್ಲಿ ನಡೆಯುವುದಿಲ್ಲ. ದಾಖಲೆಗಳು ಸರಿಯಾಗಿವೆ, ರೈತರು ಧೈರ್ಯದಿಂದ ಇದ್ದಾರೆ. ಅರಣ್ಯ ಇಲಾಖೆಯಲ್ಲಿ ಲಂಚ ತೆಗೆದುಕೊಳ್ಳುವವರು ಇದ್ದಾರೆ ಎಂಬುದು ಸಾಬೀತಾಗಿದೆ. ಹಾಗೆಯೇ ಮರಗಳನ್ನು ಸಾಗಿಸುವುದನ್ನು ರೈತರೇ ಹಿಡಿದು ಕೊಟ್ಟಿದ್ದಾರೆ. ಒತ್ತುವರಿ ಹೆಸರಿನಲ್ಲಿ ಮೂರು ದಿನ ಜೆಸಿಬಿಗಳಿಗೆ ₹ 41 ಲಕ್ಷ ಖರ್ಚು ಮಾಡಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿ ಈ ರೀತಿ ಹೇಳಿಕೆ ನೀಡುವುದು ಸಮಂಜಸವಲ್ಲ. ಕೋಲಾರ ಜಿಲ್ಲೆಯಲ್ಲಿ ಎಲ್ಲಿಯೂ ಕಿರು ಅರಣ್ಯಗಳು ಇರುವುದಿಲ್ಲ. ನೋಟಿಫಿಕೇಶನ್ ಹೆಸರಿನಲ್ಲಿ ಯಾವುದೇ ಕಂದಾಯ ಭೂಮಿಯನ್ನು ಒತ್ತುವರಿ ಹೆಸರಿನಲ್ಲಿ ತೆರವುಗೊಳಿಸುವ ಆಲೋಚನೆ ಇದ್ದರೆ ಕೈ ಬಿಡಬೇಕು. ಇಲ್ಲದಿದ್ದರೆ ಮತ್ತೊಮ್ಮೆ ಭೂ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ರೈತರು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-18-20825879

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.