ಕೋಲಾರ: ನಗರದ ಕಠಾರಿಪಾಳ್ಯ ಶಾಲಾ ಆವರಣದ ಕನಕ ಬ್ಯಾಸ್ಕೆಟ್ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ಅವರ ಎರಡನೇ ವರ್ಷದ ಸ್ಮರಣೆ ಕಾರ್ಯಕ್ರಮ ನಡೆಯಿತು.

ಅಮರನಾಥ್ ನೆನಪಿನಲ್ಲಿ ಪ್ರತಿ ವರ್ಷ ಬ್ಯಾಸ್ಕೆಟ್ಬಾಲ್ ಟೂರ್ನಿ ನಡೆಸಬೇಕೆಂದು ನಿವೃತ್ತ ಯೋಧರ ಸಂಘದ ಅಧ್ಯಕ್ಷ ಜಗನ್ ಸಲಹೆ ನೀಡಿದರು.

ಜಿಲ್ಲೆಯ ಅಭಿವೃದ್ಧಿ ಬಗ್ಗೆ ತನ್ನದೇ ಆದ ಕನಸು ಹೊಂದಿದ್ದ ಅವರು ಉತ್ತಮ ಬ್ಯಾಸ್ಕೆಟ್ಬಾಲ್ ಆಟಗಾರರು ಆಗಿದ್ದರು. ಜಿಲ್ಲೆಯ ನಿವೃತ್ತ ಯೋಧರನ್ನು ಸಮರ್ಥವಾಗಿ ಮುನ್ನಡೆಸುವ ನಾಯಕರಾಗಿರುತ್ತಿದ್ದರು. ಆದರೆ, ಅವರ ಅಕಾಲಿಕ ಮರಣದಿಂದ ಜಿಲ್ಲೆ ಹಾಗೂ ಸಂಘವು ಬಡವಾಗಿದೆ ಎಂದರು.

ಸಂಘದಿಂದ ನಿವೃತ್ತ ಯೋಧರಿಗೆ ನಿವೇಶನವನ್ನು ವೇಮಗಲ್ ಬಳಿ ರೂಪಿಸುತ್ತಿದ್ದು, ಅಮರನಾಥ್ ಕುಟುಂಬದವರು ಇದನ್ನು ಪಡೆದುಕೊಳ್ಳಲು ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು ಹಾಗೂ ಅಮರನಾಥ್ರ ಹೆಸರನ್ನು ಶಾಶ್ವತವಾಗಿಡಲು ಕಾರ್ಯಕ್ರಮಗಳನ್ನು ರೂಪಿಸಿದರೆ ಸಂಘವು ಜೊತೆಗಿರುತ್ತದೆ ಎಂದು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ‘ಯೋಧರಿಗೆ ವೃತ್ತಿಯಲ್ಲಿದ್ದಾಗ ಮಾತ್ರವೇ ಗೌರವ ಸಿಗುತ್ತದೆ. ನಿವೃತ್ತರಾದವರಿಗೆ ಸಿಗಬೇಕಾದ ಗೌರವ, ಸವಲತ್ತುಗಳು ಸಿಗುತ್ತಿಲ್ಲ. ನಿವೇಶನ, ಭೂಮಿ, ಆರೋಗ್ಯ ಸೇವೆಗಾಗಿ ಅವರು ಹೋರಾಟ ನಡೆಸುತ್ತಲೇ ಇದ್ದಾರೆ. ನಿವೃತ್ತ ಯೋಧರ ಹೋರಾಟಕ್ಕೆ ನಮ್ಮ ಬೆಂಬಲ ಇರುತ್ತದೆ’ ಎಂದರು.

ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಅಮರನಾಥ್ ಸ್ಮರಣಾರ್ಥ ಕೋಲಾರದ ಪ್ರಮುಖ ರಸ್ತೆ, ವೃತ್ತ ಹಾಗೂ ಉದ್ಯಾನಕ್ಕೆ ಅವರ ಹೆಸರಿಡಲು ನಗರಸಭೆ ಮುಂದಾಗಬೇಕೆಂದು ಸಲಹೆ ನೀಡಿದರು.

ಕನಕ ಬ್ಯಾಸ್ಕೆಟ್ಬಾಲ್ ತಂಡದ ಕಾರ್ಯದರ್ಶಿ ಅಂಚೆ ಅಶ್ವತ್ಥ್ ಮಾತನಾಡಿ, ಅಂತರರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಆಟಗಾರರಾಗಿದ್ದ ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ಹೆಸರಿನಲ್ಲಿ ಪ್ರತಿ ವರ್ಷ ಕ್ರೀಡಾಕೂಟವನ್ನು ಆಯೋಜಿಸುವುದಾಗಿ ಘೋಷಿಸಿದರು.

ಅಮರನಾಥ್ರ ಸಹೋದರಿ ವಿಜಯಲಕ್ಷ್ಮಿ ಮಾತನಾಡಿ, ಕಷ್ಟ ಪಟ್ಟು ಸೇನೆಯಲ್ಲಿ ಉನ್ನತ ಹುದ್ದೆಗೇರಿದ್ದ ಸಹೋದರ ಅಕಾಲಿಕವಾಗಿ ಕೊನೆಯುಸಿರೆಳೆದು ಕುಟುಂಬವನ್ನು ಅನಾಥರನ್ನಾಗಿಸಿದ್ದಾರೆ. ಅವರು ಆಶಿಸಿದ್ದಂತೆ ಅವರ ನೆನಪಿನಲ್ಲಿ ಕನಕ ಬ್ಯಾಸ್ಕೆಟ್ಬಾಲ್ ಕ್ರೀಡಾಂಗಣಕ್ಕೆ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು.

ಕಾರ್ಯಕ್ರಮವನ್ನು ಲೆಫ್ಟಿನೆಂಟ್ ಕರ್ನಲ್ ಪತ್ನಿ ಜ್ಯೋತಿಶ್ರೀ ದೀಪಬೆಳಗಿಸಿ ಉದ್ಘಾಟಿಸಿದರು. ತಾಯಿ ರತ್ನಮ್ಮ ಮತ್ತು ಕುಟುಂಬದ ಸದಸ್ಯರು, ಕರಾಟೆಪಟುಗಳು, ಕ್ರೀಡಾಪಟುಗಳು, ನಿವೃತ್ತ ಯೋಧರು, ಸೇನಾಧಿಕಾರಿಗಳು ಪಾಲ್ಗೊಂಡಿದ್ದರು. ರೇಣುಕಾ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-18-2013273469

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.