ಮಾಸ್ತಿ (ಮಾಲೂರು): ಮಾಸ್ತಿ ಗ್ರಾಮದಲ್ಲಿ ಶಿಥಿಲಗೊಂಡಿರುವ ಪುರಾತನ ದಾಮರ ಕುಂಟೆ ಕಲ್ಯಾಣಿಯನ್ನು ಎತ್ತಿನಹೊಳೆ ಯೋಜನೆಯ ₹1.82 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ತಾಲ್ಲೂಕಿನ ಮಾಸ್ತಿ ಗ್ರಾಮದ ದಾಮರ ಕುಂಟೆ ಕಲ್ಯಾಣಿ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ದಾಮರ ಕುಂಟೆ ಪುರಾತನವಾಗಿದ್ದು, ಸಂಪೂರ್ಣ ಶಿಥಿಲಗೊಂಡಿದೆ. ಇದರ ಅಭಿವೃದ್ಧಿಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಅದರಂತೆ ಸಚಿವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಚರ್ಚಿಸಿ ಎತ್ತಿನಹೊಳೆ ಯೋಜನೆಡಿ ₹25 ಕೋಟಿ ಮಂಜೂರು ಮಾಡಿಸಿಕೊಂಡಿದ್ದು, ತಾಲೂಕಿನಲ್ಲಿ ಚೆಕ್ ಡ್ಯಾಂ, ಕಲ್ಯಾಣಿ, ಕಾಲುವೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.

ಪ್ರಸಿದ್ಧ ಕಲ್ಯಾಣಿ ಉಳಿಸುವುದು ಮೊದಲ ಆದ್ಯತೆ. ಹಾಗಾಗಿ ಟೇಕಲ್ನ ಬನಹಳ್ಳಿ, ತೊರಹಳ್ಳಿ, ಮಾಸ್ತಿ ದಾಮರ ಕುಂಟೆ ಕಲ್ಯಾಣಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕಾಮಗಾರಿಯನ್ನು ಗುಣಮಟ್ಟ ಹಾಗೂ ವೇಗವಾಗಿ ನಡೆಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.

ಕಲ್ಯಾಣಿ ಸುತ್ತಲೂ ಮೆಸ್ ಕಾಂಪೌಂಡ್, ವಾಕಿಂಗ್ ಟ್ರ್ಯಾಕ್ ನಿರ್ಮಿಸಲು ಬೇರೆ ಅನುದಾನ ನೀಡಲಾಗುವುದು ಎಂದರು.

ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಂ.ವಿಜಯ ನರಸಿಂಹ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆಂಜಿನಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್, ಚನ್ನರಾಯಪ್ಪ, ಕೃಷ್ಣಕುಮಾರ್, ಹನುಮಂತಯ್ಯ, ಅಕ್ರಂ ಪಾಷಾ, ಎಂ.ವಿ.ಚೇತನ್, ಜೆಸಿಬಿ ನಾಗರಾಜ್, ಶೌಕತುಲ್ಲಾ, ಸರ್ದಾರ್ ಬೇಗ್, ನಾರಾಯಣಸ್ವಾಮಿ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-18-1147065591

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.