ಮಾಲೂರು (ಕೋಲಾರ): ತಾಲ್ಲೂಕಿನ ಮಾಸ್ತಿ ಹೋಬಳಿಯ ಕೊತ್ತೂರು ಗ್ರಾಮದಲ್ಲಿ ಸೋಮವಾರ ಕುಂಟೆಗೆ ಬಿದ್ದು ಮೃತರಾದ ಮಕ್ಕಳ ಶವಗಳನ್ನು ಆಟೊದಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆರೋಗ್ಯ ಇಲಾಖೆಯಲ್ಲಿ ಆಂಬುಲನ್ಸ್ ಇಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ ಕೊತ್ತೂರು ಗ್ರಾಮಕ್ಕೆ ಬಂದಿದ್ದ ವೆಂಕಟೇಶಪ್ಪ ಎಂಬುವರ ಮೊಮ್ಮಕ್ಕಳಾದ ದೇವಕಿರಣ್(12) ಹಾಗೂ ವಿನೀತ್ ಕುಮಾರ್ (9) ಕುಂಟೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದರು.

ಗ್ರಾಮದಲ್ಲಿ ಬೇರೆ ವಾಹನ ಇಲ್ಲದ ಕಾರಣ ಸುಮಾರು 10 ಕಿ.ಮೀ. ದೂರವಿರುವ ಮಾಸ್ತಿ ಸರ್ಕಾರಿ ಆಸ್ಪತ್ರೆಗೆ ಆಟೊದಲ್ಲಿ ಮಕ್ಕಳನ್ನು ಕರೆದೊಯ್ಯಲಾಗಿದೆ. ಮಕ್ಕಳು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ನಂತರ ಅದೇ ಆಟೊದಲ್ಲಿ ಶವಗಳನ್ನು ಮರಣೋತ್ತರ ಪರೀಕ್ಷೆಗೆಂದು ಮಾಸ್ತಿಯಿಂದ 16 ಕಿ.ಮೀ. ದೂರವಿರುವ ಮಾಲೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮಾಸ್ತಿ ಆಸ್ಪತ್ರೆಯಿಂದಾದರೂ ಆಂಬುಲನ್ಸ್ನಲ್ಲಿ ಮಾಲೂರಿಗೆ ಮಕ್ಕಳ ಶವ ಸಾಗಿಸಬೇಕಿತ್ತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೊತ್ತೂರು ಕುಗ್ರಾಮದಲ್ಲಿ ದೂರವಾಣಿ ಸಿಗ್ನಲ್ ಸಿಗಲ್ಲ. ಹೀಗಾಗಿ, ಆಂಬುಲನ್ಸ್ ತಡವಾಗಲಿದೆ ಎಂದು ಸಂಬಂಧಿಕರ ಆಟೊದಲ್ಲಿಯೇ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪುಟ್ಟರಾಜು ತಿಳಿಸಿದ್ದಾರೆ.

ಮಾಲೂರಿಗೆ ಕರೆದೊಯ್ಯುವಷ್ಟರಲ್ಲಿ ರಾತ್ರಿ ಆದ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಮಂಗಳವಾರ ಬೆಳಗ್ಗೆ ನಡೆಸುವುದಾಗಿ ಹೇಳಿದ್ದಾರೆ. ಸೋಮವಾರ ರಾತ್ರಿಯೇ ತಹಶೀಲ್ದಾರ್ ರೂಪಾ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಮಾತನಾಡಿಸಿದ್ದಾರೆ.

‘ಸ್ವಂತ ಆಟೊದಲ್ಲಿ ಮಕ್ಕಳ ಮೃತದೇಹ ತಂದಿರುವ ವಿಚಾರ ಗೊತ್ತಾಗಿದೆ. ಮಂಗಳವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರ ಮೂಲಕ ಮೃತದೇಹಗಳನ್ನು ಆಂಬುಲನ್ಸ್ನಲ್ಲಿ ಸಾಗಿಸಲಾಗಿದೆ’ ಎಂದು ಮಾಲೂರು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-18-329881428

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.