ಮಾಲೂರು: ನಗರದ ಹನಮಂತ ನಗರದ ಮಾಲೂರು-ಕೋಲಾರ ರಸ್ತೆಯ ಸುದ್ಧಗುಂಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಹಸಿ ಕರಗ ಮಹೋತ್ಸವ ಅಪಾರ ಜನಸ್ತೋಮದೊಂದಿಗೆ ಗುರುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.

ಪ್ರತಿ ವರ್ಷದಂತೆ ಈ ವರ್ಷವೂ ಧರ್ಮರಾಯಸ್ವಾಮಿ ದ್ರೌಪದಂಭಾ ಮಹೋತ್ಸವ ಹಾಗೂ ಪಟಾಲಮ್ಮ, ಮುತ್ಯಾಲಮ್ಮ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ನೆರವೇರಿತು.

ಗುರುವಾರ ರಾತ್ರಿ ಅಪಾರ ಜನಸ್ತೋಮದೊಂದಿಗೆ ಕರಗ ಪೂಜಾರಿ ವೆಂಕಟರೋಣ, ಅಭಿಲಾಷ್, ಮಂಜುನಾಥ್ ಅವರು ಕರಗ ಹೊತ್ತು ತಮಟೆ ಸದ್ದಿಗೆ ತಕ್ಕಂತೆ ಕುಣಿಯುತ್ತಾ ಹೊರ ಬಂದರು.

ವೀರ ಕುಮಾರರು ಕರಗದಮ್ಮನಿಗೆ ಅಲಗು ಸೇವೆ ಅರ್ಪಿಸಿದರು. ಕರಗ ಹೊತ್ತ ಪೂಜಾರಿಗಳು ಸುದ್ದಗುಂಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಹೊರಟು ನಗರದಲ್ಲಿ ಸಂಚರಿಸಿತು. ಭಕ್ತರು ಕರಗದಮ್ಮನಿಗೆ ಮಲ್ಲಿಗೆ ಹೂವು ಅರ್ಪಿಸಿದರು. ಹಸಿ ಕರಗ ವೀಕ್ಷಣೆಗೆ ಸಾವಿರಾರು ಸಂಖ್ಯೆಯ ಭಕ್ತರು ನೆರೆದಿದ್ದರು.

ಏ.10 ಶುಕ್ರವಾರ ಮಹಿಳೆಯರು ತಂಬಿಟ್ಟಿನ ಆರತಿಯನ್ನು ತಾಯಿಗೆ ಅರ್ಪಿಸಿದರು. ಪಟಾಲಮ್ಮ ದೇವಾಲಯ ಮುಂಭಾಗದಲ್ಲಿ ರಾತ್ರಿ 3ಗಂಟೆಗೆ ಅಗ್ನಿಕೊಂಡ ನೆರವೇರಿತು.

ಏ.11ರಂದು ಪಟಾಲಮ್ಮ ದೇವಾಲಯದಲ್ಲಿ ಸಿಡಿ ಉತ್ಸವ ನಡೆಯಲಿದೆ. ಸಿಡೀರಣ್ಣ ದೇವರನ್ನು ಭುಜಗಳ ಮೇಲೆ ಹೊತ್ತ ಪೂಜಾರಿ ಹಲಗೆ ತಾಳಕ್ಕೆ ನರ್ತಿಸುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ಸಂಜೆ ಸಿಡೀರಣ್ಣ ಮೂರ್ತಿಯನ್ನು ಸಿದ್ಧಪಡಿಸಿ ಸಿಡಿ ಕಂಭಕ್ಕೆ ಕಟ್ಟಿ ಪೂಜೆ ಸಲ್ಲಿಸಲಾಗುತ್ತಿದೆ.

ಏ.12ರಂದು ಧರ್ಮರಾಯಸ್ವಾಮಿ ದ್ರೌಪದಾಂಭ ಹೂವಿನ ಕರಗ ರಾತ್ರಿ11ಕ್ಕೆ ನಡೆಯಲಿದೆ. ಪಟ್ಟಣದ ಎಲ್ಲಾ ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ.

ಶಾಸಕ ಕೆ.ವೈ.ನಂಜೇಗೌಡ, ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ, ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್, ತಹಶೀಲ್ದಾರ್ ಎಂ.ವಿ.ರೂಪ, ಸುನೀಲ್ ನಂಜೇಗೌಡ, ಹನುಮಂತಪ್ಪ, ಎಚ್,ಎಂ.ವಿಜಯನರಸಿಂಹ, ಶ್ರೀನಿವಾಸ್, ಎಂ.ಪಿ.ವಿಜಯ್ ಕುಮಾರ್, ಪಿ.ವೆಂಕಟೇಶ್. ಸಿ.ಲಕ್ಷ್ಮಿನಾರಾಯಣ್, ಸಿ.ಪಿ.ನಾಗರಾಜ್, ಮಾಜಿ ಸದಸ್ಯ ಎ.ರಾಜಪ್ಪ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-18-2043421600

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.