ಮಾಲೂರು: ಅಂಬೇಡ್ಕರ್ ಜಯಂತಿ ಅಂಗವಾಗಿ ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ನಗರದ ವೈಟ್ ಗಾರ್ಡನ್ನ ನಿವಾಸದ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ, ನಂತರ ಆಟೊ ಚಾಲಕರಿಗೆ ಆಹಾರ ಕಿಟ್ ಹಾಗೂ ಆಟೊ ಗ್ಯಾಸ್ ಕೂಪನ್ ವಿತರಿಸುವ ಮೂಲಕ ಜಯಂತಿ ಆಚರಿಸಿದರು.

ಈ ವೇಳೆ ಮಾತನಾಡಿದ ಅವರು, ಯುದ್ಧದ ಪ್ರಭಾವದಿಂದ ಅನಿಲದ ಅಭಾವ ಹೆಚ್ಚಾಗಿದ್ದು, ಆಟೊ ಚಾಲಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಆಟೊ ಚಾಲಕರಿಗೆ ಆಹಾರ ಕಿಟ್ ಹಾಗೂ ಗ್ಯಾಸ್ ಕೂಪನ್ ವಿತರಿಸಲಾಗುತ್ತಿದೆ ಎಂದರು.

ಅಂಬೇಡ್ಕರ್ ಆವರು ರಚಿಸಿ ಕೊಟ್ಟ ಸಂವಿಧಾನದಲ್ಲಿನ ಚಿಂತನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದರ ಮೂಲಕ ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕೆಂದು ಹೇಳಿದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಮುಖಂಡರಾದ ಆರ್.ಪ್ರಭಾಕರ್, ದಿನೇಶ್ ಗೌಡ, ವೆಂಕಟೇಶ್ ಗೌಡ, ಬಡಗಿ ಶ್ರೀನಿವಾಸ್, ಆಂಜಿನಪ್ಪ, ಗೋಪಾಲ್ ಗೌಡ, ಕುಟ್ಟಿ, ಶ್ರೀನಾಥ್, ದೊಡ್ಡ ಕಲ್ಲಳ್ಳಿ ನಾರಾಯಣಸ್ವಾಮಿ, ದಿಬ್ಬಯ್ಯ, ಗುಟ್ಲಪ್ಪ, ಚಲಪತಿ, ಎಸ್.ನಾರಾಯಣಸ್ವಾಮಿ, ಬಿ.ಆರ್.ವೆಂಕಟೇಶ್ ಬಾಬು, ದೇವರಾಜ್ ರೆಡ್ಡಿ, ರಾಜಾರಾಮ್, ಮೋಹನ್ ಬಾಬು, ಪಂಡು ಕಿರಣ್ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-18-931964104

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.