ಕೋಲಾರ: ಮಾಲೂರು ತಾಲ್ಲೂಕಿನಲ್ಲಿ ನೂರಾರು ಎಕರೆ ಸರ್ಕಾರಿ ಜಮೀನುಗಳಿಗೆ ಅಧಿಕಾರಿಗಳು ಹಾಗೂ ಭೂ ಮಾಫಿಯಾದವರು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭೂ ಮಂಜೂರಾತಿ ಮಾಡಿರುವಂತೆ ನಕಲಿ ದಾಖಲೆ ಸೃಷ್ಟಿ ಮಾಡಿ ಕೋಟ್ಯಂತರ ಬೆಲೆ ಬಾಳುವ ಸರ್ಕಾರಿ ಜಮೀನುಗಳನ್ನು ಭೂ ಮಾಫಿಯಾದವರಿಗೆ ನೀಡುತ್ತಿದ್ದಾರೆ. ಲೋಕಾಯುಕ್ತಕ್ಕೂ ದಾಖಲೆ ಸಮೇತ ದೂರು ನೀಡಿ, ಸರ್ಕಾರಿ ಜಮೀನು ಉಳಿಸಲು ಹೋರಾಟ ನಡೆಸಲಾಗುವುದು’ ಎಂದರು.

ಮಾಲೂರು ತಾಲ್ಲೂಕು ಕಸಬಾ ಹೋಬಳಿ ಬೈರ್ನ ಹೊಸಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಜಮೀನು ಸರ್ವೇ ನಂ.5 ರಲ್ಲಿ 4.20 ಎಕರೆ ಹಾಗೂ 3 ಎಕರೆ ಸೇರಿ ಒಟ್ಟು 7ಎಕರೆ 20 ಗುಂಟೆ ಜಮೀನನ್ನು ನಕಲಿ ದಾಖಲೆಗಳ ಮೂಲಕ ಮಂಜೂರಾತಿ ಆಗಿರುವಂತೆ ತೋರಿಸಿ ಒಂದೇ ದಿನದಲ್ಲಿ ಪೋಡಿ ಹಾಗೂ ಖಾತೆ ಮಾಡಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ ಎಂದು ದೂರಿದರು.

ಈ ಪ್ರಕರಣದಲ್ಲಿ ಮಾಲೂರು ತಹಶೀಲ್ದಾರ್, ಕಸಬಾ ರಾಜಸ್ವ ನಿರೀಕ್ಷಕ, ಗ್ರಾಮಾಡಳಿತಾಧಿಕಾರಿ, ವಿಷಯ ನಿರ್ವಾಹಕಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕ, ಭೂ ಮಾಪಕ, ಪರ್ಯಾವೇಕ್ಷಕ ಹಾಗೂ ಇಬ್ಬರು ನಕಲಿ ಫಲಾನುಭವಿಗಳ ವಿರುದ್ಧ ಭ್ರಷ್ಟಾಚಾರ ನಿರೋಧಕ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಜಿಲ್ಲಾ ಲೋಕಾಯಕ್ತ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸುವುದಾಗಿ ಹೇಳಿದರು.

ಈ ಪ್ರಕರಣದಲ್ಲಿ ಒಂದೇ ಜಮೀನಿಗೆ ಮೂರು ಬಾರಿ ಮಂಜೂರು ಮಾಡಲಾಗಿದೆ, ಅಪ್ರಾಪ್ತ ವಯಸ್ಸಿನ ವ್ಯಕ್ತಿಗೆ ಭೂಮಿ ಮಂಜೂರು ಮಾಡಿರುವ ದಾಖಲೆಗಳಿವೆ, ನಕಲಿ ಚಲನ್ಗಳನ್ನು ಸೃಷ್ಟಿಸಲಾಗಿದೆ, 25 ವರ್ಷಗಳ ಬಳಿಕ ಖಾತೆ ಮಾಡಿರುವುದು ಹಲವು ಅನುಮಾನಗಳಿಗೆಡೆ ಮಾಡಿಕೊಟ್ಟಿದೆ ಎಂದರು.

ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸುವ ವೇಳೆ 19 ವರ್ಷ ವಯಸ್ಸು ಎಂಬುದಾಗಿ ಆರೋಪಿಯು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಎಂಟು ವರ್ಷದಿಂದ ಸಾಗುವಳಿ ಮಾಡುತ್ತಿರುವುದಾಗಿ ಅದೇ ಅರ್ಜಿಯಲ್ಲಿ ನಮೂದಿಸಿದ್ದಾರೆ. ಅಂದರೆ ಬಾಲಕನಾಗಿದ್ದಾಗಲೇ ಸಾಗುವಳಿ ಮಾಡುವುದು ಕಾನೂನು ಬಾಹಿರವಲ್ಲವೇ? 1999ರಲ್ಲೇ ಸಾಗುವಳಿ ಚೀಟಿ ನೀಡಿದ್ದು, 25 ವರ್ಷಗಳ ನಂತರ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದು ಏಕೆ? ಈಗ ಈ ಜಮೀನಿನ ಮಾರುಕಟ್ಟೆ ಮೌಲ್ಯ ಅಂದಾಜು ₹ 15 ಕೋಟಿ ಇದೆ. ಅಕ್ರಮ ಮಾರ್ಗದಿಂದ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಒತ್ತಾಯಿಸಿದರು.

ಬಹುಜನ ವಿಚಾರ ವೇದಿಕೆಯ ಎಸ್.ಚಿನ್ನ ಹಾಗೂ ದಿಂಬಚಾಮನಹಳ್ಳಿ ಪ್ರಕಾಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-18-1651044252

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.