ಮಾಲೂರು: ತಾಲ್ಲೂಕಿನ 182 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ₹47 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಮಾರ್ಕಂಡೇಯ ಜಲಾಶಯ ಕುಡಿಯುವ ನೀರು ಸರಬರಾಜು ಯೋಜನೆ ಹಳ್ಳ ಹಿಡಿದು 18 ವರ್ಷ ಕಳೆದಿದೆ.

2008ರಕ್ಕು ತಾಲ್ಲೂಕಿಗೆ ಕುಡಿಯುವ ನೀರು ಸರಬರಾಜು ಮಾಡಲು ನಿರ್ಮಾಣವಾಗಿದ್ದ ಯೋಜನೆ 18 ವರ್ಷಗಳಿಂದ ಸ್ಥಗಿತಗೊಂಡಿದ್ದು, ತಾಲ್ಲೂಕು ಜನತೆಯ ಬಾಯಾರಿಕೆ ತೀರಿಲ್ಲ.

ಮಾರ್ಕಂಡೇಯ ಜಲಾಶಯವನ್ನು 1936ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ ಅವರು ₹4 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮುಗಿಸಿದ್ದರು. ಸಂಸ್ಥಾನದ ದಿವಾನ ಸರ್ ಮಿರ್ಜಾ ಇಸ್ಮಾಯಿಲ್ ಅವರು 1940ರಲ್ಲಿ ಲೋಕಾರ್ಪಣೆಗೊಳಿಸಿದ್ದರು.

ಜಲಾಶಯವು 81 ಅಡಿ ಎತ್ತರ ಹೊಂದಿದ್ದು, 5 ಟಿಎಂಸಿ ನೀರು ಶೇಖರಣೆಯಾಗಲಿದೆ. 75 ಅಡಿಗಳಿಗೆ ಕೋಡಿ ಹರಿಯುತ್ತದೆ. ಕೋಡಿ ನೀರು ಯರಗೋಳ್ ಡ್ಯಾಂ ಸೇರುತ್ತದೆ. 2008ರಲ್ಲಿ ಅಂದಿನ ಶಾಸಕ ಹಾಗೂ ಕೊಳೆಚೆ ಮತ್ತು ನೀರು ಸರಬರಾಜು ಒಳಚರಂಡಿ ಮಂಡಳಿ ಅಧ್ಯಕ್ಷ ಕೃಷ್ಣಯ್ಯಶೆಟ್ಟಿ ಅವರು ಮಾಲೂರು ಕ್ಷೇತ್ರದ 182 ಹಳ್ಳಿಗಳಿಗೆ ಜಲಾಶಯದ ನೀರನ್ನು ಶುದ್ಧೀಕರಿಸಿ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ, ₹47 ಕೋಟಿ ವೆಚ್ಚದ ಯೋಜನೆ ರೂಪಿಸಿದರು. 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಶಂಕುಸ್ಥಾಪನೆ ನೆರವೇರಿಸಿದರು.

ನಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಮುಂದಾದ ಅವರು, ಜಾಕ್ವೇಲ್ ನಿರ್ಮಿಸುವ ಮೂಲಕ ಟೇಕಲ್ ಬೆಟ್ಟದ ತಪ್ಪಲಿನಲ್ಲಿ ಶುದ್ಧೀಕರಣ ಘಟಕ ನಿರ್ಮಿಸಿದರು. ಬೆಟ್ಟದ ಮೇಲೆ ನೀರು ಸಂಗ್ರಹ ಟ್ಯಾಂಕ್ ಸ್ಥಾಪಿಸಿದರು. ಗುರುತ್ವಾಕರ್ಷಣೆಯಿಂದ ತಾಲ್ಲೂಕಿನ ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಪೈಪ್ಲೈನ್ ಅಳವಡಿಸಿದ್ದರು. ಆದರೆ, ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ವೇಳೆಗೆ ಡ್ಯಾಂನ ನೀರಿನ ಮಟ್ಟ ಕಡಿಮೆಯಾಗಿ ಯೋಜನೆ ನನೆಗುದಿಗೆ ಬೀಳುವಂತಾಗಿತ್ತು.

ಮತ್ತೆ 2017ರಲ್ಲಿ ಜಲಾಶಯಕ್ಕೆ ನೀರು ಹರಿದಿದ್ದರಿಂದ ಅಂದಿನ ಶಾಸಕ ಮಂಜುನಾಥಗೌಡ ನೀರಾವರಿ ಯೋಜನೆಯ ಯಂತ್ರೋಪಕರಣಗಳನ್ನು ಕಾರ್ಯಾರಂಭವಾಗುವಂತೆ ಮಾಡಿದ್ದರು. ಇದರಿಂದ ಮಾಲೂರು ತಾಲ್ಲೂಕಿನ 182 ಗ್ರಾಮಗಳಿಗೆ 6 ವಲಯಗಳ ಮೂಲಕ ನೀರು ಹರಿಸಲು ಯೋಜಿಸಲಾಗಿತ್ತು. 15 ದಿನ ಎಲ್ಲಾ ವಲಯಗಳಿಗೆ ನೀರು ಹರಿಸಲಾಯಿತು. ಆದರೆ, ಯೋಜನೆ ಕಳೆಪೆಯಾಗಿದ್ದು, ಸಮರ್ಪಕ ಪೈಪ್ಲೈನ್ ಅಳವಡಿಕೆಯಾಗದೆ ಇರುವುದರಿಂದ ಒಂದು ವಲಯಕ್ಕೆ ಮಾತ್ರ ಅಂದರೆ 26 ಗ್ರಾಮಗಳಿಗೆ ಮಾತ್ರ ಕುಡಿವ ನೀರು ಸರಬಾರಾಜು ಮಾಡಲಾಗುತ್ತಿತ್ತು. ಆದರೆ ಈಗ ಅದಕ್ಕೂ ಸಂಚಾಕಾರ ಬಂದಿದೆ. ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆ ವಿದ್ಯುತ್ ಸ್ಥಗಿತಗೊಂಡು ಸಂಪೂರ್ಣವಾಗಿ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ.

ಟೇಕಲ್ ವ್ಯಾಪ್ತಿಯಲ್ಲಿ ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಸಂಬಂಧ ಇಲಾಖೆ ಕೂಡಲೇ ಕ್ರಮವಹಿಸಿ ಮಾರ್ಕಂಡೇಯ ಜಲಾಶಯ ಕುಡಿಯುವ ನೀರಿನ ಯೋಜನೆ ಜಾರಿಗೆ ತರಬೇಕೆಂದು ತಾಲ್ಲೂಕಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜಲಾಶಯ ಸಾಮರ್ಥ್ಯ

ಮಾರ್ಕಂಡೇಯ ಜಲಾಶಯ ಬಂಗಾರಪೇಟೆ ತಾಲೂಕಿನಲ್ಲಿದ್ದರೂ, ನೀರು ಸಂಗ್ರಹಣೆಗೆ ಮಾಲೂರು ತಾಲ್ಲೂಕಿನ 13.14 ಚದರ ಮೈಲಿ ಪ್ರದೇಶವನ್ನು ಅವಲಂಬಿಸಿದೆ. ಈ ಜಲಾಶಯ ಸ್ವತಂತ್ರವಾಗಿ 7.73 ಚದರ ಮೈಲು ನೀರು ಸಂಗ್ರಹಣಾ ಪ್ರದೇಶ ಹೊಂದಿದೆ. 61 ಅಡಿಗಳಷ್ಟು ಎತ್ತರ ಮತ್ತು 42 ಅಡಿಗಳ ಅಗಲವಿದೆ. ಸುಮಾರು 46 ಅಡಿ ನೀರು ನಿಲ್ಲುವ ಸಾಮರ್ಥ್ಯ ಹೊಂದಿದೆ. ಸದ್ಯಕ್ಕೆ ಸುಮಾರು 8 ರಿಂದ 10 ಅಡಿಗಳಷ್ಟು ಹೂಳು ತುಂಬಿದೆಯೆಂದು ಅಂದಾಜಿಸಲಾಗಿದೆ. ಇದರಿಂದ ನೀರು ಸಂಗ್ರಹಣಾ ಸಾಮರ್ಥ್ಯ ಕುಸಿದಿದೆ. ಹೂಳು ಸೇರಿ ಪ್ರಸ್ತುತ ಅಣೆಕಟ್ಟೆಯಲ್ಲಿ ಶೇ.40 ರಿಂದ 50ರಷ್ಟು ನೀರು 0.5 ಟಿಎಂಸಿ ಪ್ರಮಾಣದಲ್ಲಿ ಸಂಗ್ರಹವಾಗಿದೆ

ಕೆರೆಗಳ ಅಭಿವೃದ್ಧಿಗೆ ₹18 ಕೋಟಿ ಬಿಡುಗಡೆ

ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆರೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ₹18 ಕೋಟಿ ಬಿಡುಗಡೆ ಮಾಡಿದೆ. ಅದರಲ್ಲಿ ₹8 ಕೋಟಿ ವೆಚ್ಚದಲ್ಲಿ ಮೈಸೂರು ಅರಸರು ನಿರ್ಮಾಣ ಮಾಡಿರುವ ಮಾರ್ಕಂಡೇಯ ಜಲಾಶಯ ಕೆರೆಯನ್ನು ಅಭಿವೃದ್ಧಿಪಡಿಸಿ, ಕೆರೆಗೆ ಸಂಪರ್ಕ ರಸ್ತೆ ಸೇರಿದಂತೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು. ಕೆರೆ ಕಟ್ಟೆ ಸುತ್ತಲೂ ಅಡ್ಡಗೋಡೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಅಂದಿನ ಶಾಸಕ ಕೃಷ್ಣಯ್ಯ ಶೆಟ್ಟಿ ಅವರ ನೇತೃತ್ವದಲ್ಲಿ ಆರಂಭವಾದ ಈ ಯೋಜನೆಯಲ್ಲಿ ಅನೇಕ ಅಕ್ರಮಗಳು ನಡೆದಿವೆ. ಆದರೆ, ತನಿಖೆ ಮಾಡುವುದು ನನ್ನ ಉದ್ದೇಶವಲ್ಲ. ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವುದು ನನ್ನ ಉದ್ದೇಶ. ಈಗಾಗಲೇ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಅವರ ಬಳಿ ಚರ್ಚೆ ಮಾಡಲಾಗಿದೆ. ಮಾರ್ಚ್ 23ಕ್ಕೆ ಸಚಿವರು ರಾಜ್ಯ ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದಾರೆ ಎಂದರು.

ಹಳ್ಳಿಗಳಿಗೆ ನೀರು ಸರಬರಾಜಿಗೆ ಯತ್ನ

ಮಾರ್ಕಂಡೇಯ ಜಲಾಶಯ ಕುಡಿಯುವ ನೀರು ಯೋಜನೆ ತಾಲ್ಲೂಕಿನ 182 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಮಹತ್ವದ ಯೋಜನೆ. ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು. ಪ್ರಸ್ತುತ ಸ್ಥಳೀಯ ಶಾಸಕರು ಮಾರ್ಕಂಡೇಯ ಕೆರೆ ಅಭಿವೃದ್ಧಿಗೆ ಸರ್ಕಾರದಿಂದ ₹8 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಶೀಘ್ರ ತಾಲ್ಲೂಕಿನ 182 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ವಹಿಸಲು ಪ್ರಯತ್ನ ನಡೆಸಲಾಗುತ್ತಿದೆ.

–ಜಭಿವುಲ್ಲಾ, ಎಇಇ, ಕೊಳೆಚೆ ಮತ್ತು ನೀರು ಸರಬರಾಜು ಒಳಚರಂಡಿ ಮಂಡಳಿ

ಶೀಘ್ರ ನೀರು ಹರಿಸಲಿ

ಟೇಕಲ್ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕಳಪೆ ಕಾಮಗಾರಿಯಿಂದ ಮಾರ್ಕಂಡೇಯ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಂಡು ವರ್ಷಗಳು ಕಳೆದಿವೆ. ಯೋಜನೆ ಆರಂಭದಲ್ಲಿ 15 ದಿನ ಟೇಕಲ್ ಬಳಿಯ ಶೆಟ್ಟಹಳ್ಳಿ ಗ್ರಾಮಕ್ಕೂ ನೀರು ಸರಬರಾಜು ಮಾಡಲಾಯಿತು. ನಂತರ ಸ್ಥಗಿತಗೊಂಡು 18 ವರ್ಷ ಕಳೆದರೂ ಇನ್ನೂ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಸ್ಥಳೀಯ ಶಾಸಕರು ಅನುದಾನ ಬಿಡುಗಡೆ ಮಾಡಿಸಿದ್ದು, ಅದಷ್ಟು ಬೇಗ ಈ ಭಾಗದ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವಂತಾಗಲಿ.

ರಾಮಮೂರ್ತಿ, ಶೆಟ್ಟಹಳ್ಳಿ ನಿವಾಸಿಟೇಕಲ್ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕಳಪೆ ಕಾಮಗಾರಿಯಿಂದ ಮಾರ್ಕಂಡೇಯ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಂಡು ವರ್ಷಗಳು ಕಳೆದಿವೆ. ಯೋಜನೆ ಆರಂಭದಲ್ಲಿ 15 ದಿನ ಟೇಕಲ್ ಬಳಿಯ ಶೆಟ್ಟಹಳ್ಳಿ ಗ್ರಾಮಕ್ಕೂ ನೀರು ಸರಬರಾಜು ಮಾಡಲಾಯಿತು. ನಂತರ ಸ್ಥಗಿತಗೊಂಡು 18 ವರ್ಷ ಕಳೆದರೂ ಇನ್ನೂ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಸ್ಥಳೀಯ ಶಾಸಕರು ಅನುದಾನ ಬಿಡುಗಡೆ ಮಾಡಿಸಿದ್ದು, ಅದಷ್ಟು ಬೇಗ ಈ ಭಾಗದ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವಂತಾಗಲಿ.

–ರಾಮಮೂರ್ತಿ, ಶೆಟ್ಟಹಳ್ಳಿ ನಿವಾಸಿ

ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ

ಮಾರ್ಕಂಡೇಯ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭದಲ್ಲಿ ಬಂಗಾರುಪೇಟೆ ತಾಲ್ಲೂಕು ಜನತೆಯ ವಿರೋಧ ಲೆಕ್ಕಿಸದೆ ಯೋಜನೆ ಅನುಷ್ಠಾನ ಮಾಡಲಾಯಿತು. ತಾಲ್ಲೂಕಿನ 182 ಗ್ರಾಮಗಳಿಗೆ ಕುಡಿವ ನೀರು ಸರಬರಾಜು ಮಾಡುವ ಉದ್ದೇಶದಿಂದ ಯೋಜನೆ ಆರಂಭಿಸಲಾಯಿತು. ಆದರೆ, ದುರದೃಷ್ಟವಶಾತ್ ಮಳೆ ಕೊರತೆಯಿಂದಾಗಿ ಕೆರೆಯಲ್ಲಿ ನೀರು ಇಲ್ಲದೆ ಯೋಜನೆ ಸ್ಥಗಿತಗೊಂಡಿತು. ಆ ನಂತರ ಶಾಸಕರಾಗಿದ್ದ ಮಂಜುನಾಥ ಗೌಡ ಅವರು ಈ ಯೋಜನೆ ಕೈಗೆತ್ತಿಕೊಂಡರು. ಆದರೆ, ಅಷ್ಟೊತ್ತಿಗೆ ಕೆಲವು ಕಡೆ ಭೂಮಿಯಲ್ಲಿದ್ದ ನೀರು ಸರಬರಾಜು ಪೈಪ್ಗಳ ಕಳ್ಳತನವಾಗಿತ್ತು. ಸ್ಥಳೀಯ ಶಾಸಕರಿಗೆ ಇದು ಕಳಪೆ ಕಾಮಗಾರಿ ಅಂತ ಅನಿಸಿದರೆ ಅವರದ್ದೇ ಸರ್ಕಾರ ಇದೆ. ತಕ್ಷಣವೇ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಲಿ. ಅದನ್ನು ಬಿಟ್ಟು ಆರೋಪ ಮಾಡಿರುವುದು ಸರಿಯಲ್ಲ.

–ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.