ಮಾಲೂರು: ನಗರಸಭೆಯಾಗಿ ಮಾಲೂರನ್ನು ಮೇಲ್ದರ್ಜೆಗೇರಿಸಿದ ಬಳಿಕ ಮೂಲಸೌಲಭ್ಯ ಕಲ್ಪಿಸಲು ವಿಶೇಷವಾಗಿ ₹ 40 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಇದರಲ್ಲಿ ₹ 20 ಕೋಟಿ ವೆಚ್ಚದಲ್ಲಿ ಟೆಂಡರ್ ಆಗಿದ್ದು, ಸದ್ಯದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ₹ 20 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದ ಜೊತೆಜೊತೆಗೆ ಅಭಿವೃದ್ಧಿಗೂ ಹೆಚ್ಚು ಒತ್ತು ನೀಡಿ ಕಾಮಗಾರಿ ಕೈಗೊಳ್ಳಲಾಗಿದೆ. ಯರಗೋಳ್ ನೀರು ಕೂಡ ಸಿಕ್ಕಿದೆ’ ಎಂದರು.

ಸಮಗ್ರ ಯೋಜನೆ (ಮಾಸ್ಟರ್ ಪ್ಲಾನ್) ಕೂಡ ಬದಲಾಗಿದ್ದು ಬಸ್ ನಿಲ್ದಾಣ, ಆಸ್ಪತ್ರೆ, ಕೆರೆ ಅಭಿವೃದ್ಧಿ, ಅಂಬೇಡ್ಕರ್ ಅಭಿವೃದ್ಧಿ, ಮೇಲ್ಸೇತುವೆ, ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ವಿಶೇಷ ಅನುದಾನದಲ್ಲಿ ನಗರದ ವಿವಿಧ ವಾರ್ಡ್ಗಳಿಗೆ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ವಾರ್ಡ್ವಾರು ಪ್ಯಾಕೇಜ್ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತದೆ. ಮೂರು ತಿಂಗಳೊಳಗೆ 55 ಕಿ.ಮೀ ರಸ್ತೆ ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು.

ತೆರಿಗೆಯೂ ಬಾಕಿ ಉಳಿಸಿಕೊಂಡಿದ್ದರು. ಶೇ 5 ರಿಯಾಯಿತಿ ನೀಡಿ ತೆರಿಗೆ ಪಾವತಿಸಿಕೊಳ್ಳಲಾಗುತ್ತಿದೆ. ಅಧಿಕಾರಿಗಳು ಒಂದೇ ದಿನ ₹ 1.22 ಕೋಟಿ ತೆರಿಗೆ ಸಂಗ್ರಹ ಮಾಡಿದ್ದಾರೆ. ಹರಾಜಿನಲ್ಲಿ ₹ 12 ಕೋಟಿ ಸಿಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಮಳೆ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಯಾಗಿ ಮಾಡಲು ಎಲ್ಲರೂ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಆನಂದ ಸಿದ್ಧಾರ್ಥ ಕುರಿತು ಮಾಜಿ ಶಾಸಕ ಕೆ.ಎಸ್.ಮಂಜನಾಥಗೌಡರು ಮಾತನಾಡಿದ್ದಾರೆ. ಆನಂದ ಸಿದ್ಧಾರ್ಥ ನಮ್ಮ ಹುಡುಗ. ನಮ್ಮ ಜೊತೆಯಲ್ಲಿದ್ದವವರು. ಕೆಲ ಭಿನ್ನಾಭಿಪ್ರಾಯ ಕಾರಣಾಂತರಗಳಿಂದ ಬಿಟ್ಟು ಹೋಗಿ ಬೇರೆಯವರ ಮಾತು ಕೇಳಿ ಏನೋ ಹೇಳುತ್ತಿರಬಹುದು ಎಂದರು.

ದಯವಿಟ್ಟು ಮಂಜುನಾಥಗೌಡರ ಬಗ್ಗೆ ಏನೂ ಕೇಳಬೇಡಿ. ಅವರ ಬಗ್ಗೆ ನಾನು ಮಾತನಾಡಲ್ಲ. ಅವರು ಬೇಕಾದರೆ ನನ್ನ ಬಗ್ಗೆ ನಿತ್ಯ ಮಾತನಾಡಲಿ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-18-423991693

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.