ಬಂಗಾರಪೇಟೆ: ತಾಲ್ಲೂಕಿನ ಜನರಿಗಾಗಿ ಅಂದು ಮಹಾರಾಜರು ಮಾರ್ಕಂಡೇಯ ಜಲಾಶಯ ನಿರ್ಮಿಸಿದ್ದಾರೆ. ನಮ್ಮ ಪಾಲಿನ ನೀರನ್ನು ಅನ್ಯ ಕ್ಷೇತ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಶನಿವಾರ ತಿಳಿಸಿದರು.

ಈ ಮೂಲಕ ಮಾಲೂರು ತಾಲ್ಲೂಕಿನ 182 ಗ್ರಾಮಗಳಿಗೆ ಮಾರ್ಕಂಡೇಯ ಜಲಾಶಯದ ನೀರು ಹರಿಸಲಾಗುವುದು ಎಂಬ ಸ್ವಪಕ್ಷ ಶಾಸಕ ಕೆ.ವೈ. ನಂಜೇಗೌಡ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ನತ್ತಬೆಲೆ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾರ್ಕಂಡೇಯ ಜಲಾಶಯದ ಅಣೆಕಟ್ಟು ಬಂಗಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿದೆ. ಈ ಜಲಾಶಯದ ಅಡಿ ಸುಮಾರು 2,400 ಅಚ್ಚುಕಟ್ಟುದಾರರಿದ್ದಾರೆ. ಈ ನೀರು ಕೇವಲ ಕೃಷಿ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ ವಾಸ್ತವಾಂಶ ಅರಿಯದೆ ಮಾಲೂರು ಶಾಸಕರು ನನ್ನ ಗಮನಕ್ಕೆ ತರದೆ ಕುಡಿಯುವ ನೀರು ಸರಬರಾಜಿಗೆ ಮುಂದಾಗಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ಬಂಗಾರಪೇಟೆ, ಮಾಲೂರು ಮತ್ತು ಕೋಲಾರ ನಗರಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ₹400 ಕೋಟಿ ವೆಚ್ಚದಲ್ಲಿ ಯರಗೋಳ್ ಡ್ಯಾಂ ನಿರ್ಮಿಸಲಾಗಿದೆ. ಮಾರ್ಕಂಡೇಯ ಜಲಾಶಯ ತುಂಬಿದರೆ ಮಾತ್ರ ಯರಗೋಳ್ ಡ್ಯಾಂಗೆ ನೀರು ಹರಿಯಲು ಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಮಾರ್ಕಂಡೇಯ ಜಲಾಶಯದ ನೀರನ್ನು ನೇರವಾಗಿ ಮಾಲೂರಿಗೆ ಕೊಂಡೊಯ್ಯುವುದು ಅವೈಜ್ಞಾನಿಕ ಮತ್ತು ಎರಡೂ ಕ್ಷೇತ್ರಗಳ ಹಿತಾಸಕ್ತಿಗೆ ವಿರುದ್ಧ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-18-209255108

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.