ಕೋಲಾರ: ಜಿಲ್ಲೆಯಲ್ಲಿ ಪ್ರಸವಪೂರ್ವ ಹಾಗೂ ಪ್ರಸವ ನಂತರದಲ್ಲಿ ತಾಯಿ ಮರಣ ಪ್ರಮಾಣ ಗಣನೀಯವಾಗಿ ತಗ್ಗಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೈಗೊಂಡ ‘ಆರ್ಆರ್ಆರ್ ಮಾದರಿ’ ವಿನೂತನ ಕ್ರಮ ಇದಕ್ಕೆ ಕಾರಣವಾಗಿದೆ.

2023–24ನೇ ಸಾಲಿನಲ್ಲಿ ಶೇ 50ರಷ್ಟಿದ್ದ ತಾಯಿ ಮರಣ ಪ್ರಮಾಣ ಈಗ ಶೇ 23ಕ್ಕೆ ತಗ್ಗಿದೆ. ಕೆಲ ನಿಮಿಷ ತಡವಾಗಿದ್ದರೂ ಜೀವಹಾನಿ ಸಾಧ್ಯತೆಯಾಗುವಂತಹ ಪ್ರಕರಣಗಳಲ್ಲಿಯೂ ಜೀವ ಉಳಿಸಲಾಗಿದೆ.

ಪ್ರಸವಪೂರ್ವ, ನಂತರದ ಅವಧಿ ಯಲ್ಲಿ ತಾಯಂದಿರ ಮರಣ ಪ್ರಮಾಣ (ಪ್ರತಿ ಲಕ್ಷ ಜೀವಂತ ಜನನಗಳಿಗೆ)ರಾಷ್ಟ್ರಮಟ್ಟದಲ್ಲಿ ಶೇ 97ರಷ್ಟಿದ್ದು, ರಾಜ್ಯ ಮಟ್ಟದಲ್ಲಿ ಶೇ 68ರಷ್ಟಿದೆ.

ಏನಿದು ತ್ರಿಬಲ್ ಆರ್?: ಜಿಲ್ಲೆಯಲ್ಲಿ ಮರಣಪ್ರಮಾಣ ತಗ್ಗಿಸಲು ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ‘ಆರ್ಆರ್ಆರ್ ಮಾದರಿ’ ಜಾರಿಗೊಳಿಸಿದೆ.

ಗರ್ಭಿಣಿಯ ಸಮಸ್ಯೆಗಳ ಪುನರ್ ಪರಿಶೀಲನೆ (ಆರ್1–ರಿಅಸೆಸ್ಮೆಂಟ್ ಆಫ್ ರಿಸ್ಕ್), ವಿಳಂಬ ತಗ್ಗಿಸುವುದು (ಆರ್2–ರೆಡ್ಯೂಸ್ ದಿ ಡಿಲೇ), ತ್ವರಿತಗತಿಯ ಸ್ಪಂದನೆ (ಆರ್3–ರೆಸ್ಪಾಂಡ್ ಸ್ವಿಫ್ಟ್ಲಿ) ವಿಧಾನದ ಮೂಲಕ ತಾಯಿ ಮರಣ ಪ್ರಮಾಣ ತಗ್ಗಿಸಲು ಪ್ರಯತ್ನ ನಡೆಯುತ್ತಿದೆ.

2023–24ರಲ್ಲಿ 9 ಹಾಗೂ 2024–25ರಲ್ಲಿ 8 ತಾಯಂದಿರು ಮೃತಪಟ್ಟಿದ್ದರು. ಆರ್ಆರ್ಆರ್ ಮಾದರಿ ಜಾರಿಯ ನಂತರ 2025–26ನೇ ಸಾಲಿನಲ್ಲಿ ಕೇವಲ ನಾಲ್ವರು ಮೃತಪಟ್ಟಿದ್ದಾರೆ.

ಈ ಹಿಂದೆ ಹೆರಿಗೆ ವೇಳೆ ಸಂಭವಿಸಿದ ತಾಯಿ ಮರಣ ಪ್ರಕರಣಗಳ ‘ಡೆತ್ ಆಡಿಟ್’ ಕೂಡ ಮಾಡಲಾಗಿದೆ. ಕೆಲ ಪ್ರಕರಣಗಳಲ್ಲಿ ತಾಯಿಯ ಪ್ರಾಣ ಉಳಿಸಿಕೊಳ್ಳಬಹುದಿತ್ತು ಎಂಬುದು ಗೊತ್ತಾಗಿದೆ.

ಕಾರ್ಯಾಚರಣೆ ಹೇಗೆ?: ಮೊದಲ ಹಂತದಲ್ಲಿ (ಆರ್1) ಹೆರಿಗೆಗೆ ಮೂರು ತಿಂಗಳಿರುವ ಸಮಸ್ಯೆಯಾತ್ಮಕ ಗರ್ಭಿಣಿ ಯರನ್ನು ಗುರುತಿಸಲಾಗುತ್ತದೆ. ವೈದ್ಯಾಧಿಕಾರಿ ಅಂಥವರನ್ನು ನಿಯಮಿತ ವಾಗಿ ಪರೀಕ್ಷಿಸುವರು. ಹೆರಿಗೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯ ಕಡತ ಸಿದ್ಧಪಡಿಸುತ್ತಾರೆ.

ಎರಡನೇ ಹಂತದಲ್ಲಿ (ಆರ್2) ಹೆರಿಗೆ ಸಮಯದಲ್ಲಿ ಸಮಸ್ಯೆ ಉಂಟಾಗ ದಂತೆ ನೋಡಿಕೊಳ್ಳಲು ಕಾಲವಿಳಂಬ ಮಾಡದೆ ತಕ್ಷಣವೇ ಉನ್ನತ ಮಟ್ಟದ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ.

ಮೂರನೇ ಹಂತದಲ್ಲಿ (ಆರ್3) ತಜ್ಞ ವೈದ್ಯರು ಗರ್ಭಿಣಿ ಪರಿಶೀಲಿಸಿ ಅಗತ್ಯವಿರುವ ಚಿಕಿತ್ಸೆ ಬಗ್ಗೆ ತ್ವರಿತಗತಿಯಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ಅಗತ್ಯವಿದ್ದರೆ ಮೇಲ್ದರ್ಜೆ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ.

ಡಿಂಕ್ ಸಂಪರ್ಕ ವ್ಯವಸ್ಥೆ: ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಆವರಣದಲ್ಲಿ ಟಾಟಾ ಸಮೂಹದ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಂಕ್ (ಡಿಜಿಟಲ್ ನರ್ವ್ ಸೆಂಟರ್) ಮೂಲಕ ಜಿಲ್ಲೆಯಲ್ಲಿನ ಗರ್ಭಿಣಿಯರ ಗುರುತಿಸುವಿಕೆ ಹಾಗೂ ಸಂಪರ್ಕಿಸುವ ವ್ಯವಸ್ಥೆ ನಡೆಯುತ್ತಿದೆ.

‘ತಾಯಿ ಮರಣ ಪ್ರಮಾಣ ತಗ್ಗಿಸಲು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ಅದರಂತೆ ನಾವು ಆರ್ಆರ್ಆರ್ ಪ್ರಯೋಗದಿಂದ ಪ್ರಮಾಣ ತಗ್ಗಿಸುವ ಪ್ರಯತ್ನ ನಡೆಸಿ, ಯಶಸ್ವಿಯೂ ಆಗಿದ್ದೇವೆ. 24 ತಾಸು ನಿಗಾ, ಪರಸ್ಪರ ಸಂವಹನ, ಗರ್ಭಿಣಿ ಮತ್ತು ಆಕೆಯ ಕುಟುಂಬದ ಜೊತೆ ಸಂಪರ್ಕ, ಹಿಂದಿನ ಹೆರಿಗೆಯ ಮಾಹಿತಿ ಹಾಗೂ ಪ್ರಕರಣದ ಫಾಲೋ ಅಪ್ ಮಾಡುತ್ತಿದ್ದೇವೆ’ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಆರ್ಆರ್ಆರ್ ಮಾದರಿ ಅನುಷ್ಠಾನದ ಮೂಲಕ ತಾಯಿ ಮರಣ ಗಣನೀಯವಾಗಿ ತಗ್ಗಿದೆ. ಭವಿಷ್ಯದಲ್ಲಿ ಇನ್ನಷ್ಟು ಕ್ರಮಗಳಿಂದ ಶೂನ್ಯಕ್ಕೆ ತಗ್ಗಿಸಲು ಪ್ರಯತ್ನ ಮಾಡುತ್ತಿದ್ದೇವೆ
– ಎಂ.ಆರ್.ರವಿ, ಜಿಲ್ಲಾಧಿಕಾರಿ

ಆರ್ಸಿಎಚ್ ಪೋರ್ಟಲ್ ಮಾಹಿತಿ ಆಧರಿಸಿ ಸಮಸ್ಯೆ ಇರುವ ಗರ್ಭಿಣಿಯರನ್ನು ಗುರುತಿಸಲಾಗುತ್ತದೆ. ಪ್ರಸವಪೂರ್ವದಲ್ಲಿ ಮೂರು ತಿಂಗಳು ನಿಗಾ ಇಟ್ಟು ಚಿಕಿತ್ಸೆಗೆ ಕ್ರಮವಹಿಸಲಾಗುತ್ತದೆ
– ಡಾ.ಜಿ.ಶ್ರೀನಿವಾಸ್, ಜಿಲ್ಲಾ ಆರೋಗ್ಯಾಧಿಕಾರಿ

ನಿಗಾ ಇಡಲು ಆ್ಯಪ್

ಪ್ರಸವಪೂರ್ವ ಗರ್ಭಿಣಿಯರು ಮತ್ತು ನಂತರದಲ್ಲಿ ಬಾಣಂತಿಯರ ಆರೋಗ್ಯದ ಮೇಲೆ ನಿಗಾ ಇಡಲು ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಸಿಎಸ್ಆರ್ ಅನುದಾನದ ಅಡಿ ಮೊಬೈಲ್ ಅಪ್ಲಿಕೇಷನ್ ರೂಪಿಸಲಾಗುತ್ತಿದೆ.

‘ಸದ್ಯ ಅಧಿಕಾರಿಗಳು, ತಜ್ಞ ವೈದ್ಯರಿರುವ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ನಿಗಾವಹಿಸಲಾಗುತ್ತಿದೆ. ಕ್ರಮಬದ್ಧವಾಗಿ, ತ್ವರಿತವಾಗಿ ಸ್ಪಂದಿಸಲು ಹೊಸ ಆ್ಯಪ್ ನೆರವಾಗಲಿದೆ’ ಎಂದು ಜಿಲ್ಲಾಧಿಕಾರಿ ರವಿ ತಿಳಿಸಿದರು.

ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಆರ್ಸಿಎಚ್ ಅಧಿಕಾರಿ, ತಾಲ್ಲೂಕುಗಳ ನೋಡಲ್ ಅಧಿಕಾರಿಗಳು, ತಾಲ್ಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು, ಮಹಿಳಾ ತಜ್ಞರು, ಮಕ್ಕಳ ತಜ್ಞರು, ಜಿಲ್ಲಾ ಆಸ್ಪತ್ರೆ ವೈದ್ಯರು, ಆಂಬುಲೆನ್ಸ್ ಚಾಲಕರು, ರಕ್ತ ನಿಧಿ, ನರ್ಸ್ಗಳು, ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರು ಇದ್ದಾರೆ.

ಸಮಸ್ಯೆಯಾತ್ಮಕ ಗರ್ಭಿಣಿಯರ ಗುರುತಿಸುವಿಕೆ ಹಾಗೂ ನಿತ್ಯ ಮೇಲ್ವಿಚಾರಣೆ ನಡೆಯುತ್ತಿರುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಖಾಸಗಿ ಆಸ್ಪತ್ರೆಗಳ ಜೊತೆ ಸಂಪರ್ಕ ಸಾಧಿಸಲಾಗುತ್ತದೆ. ಹೆರಿಗೆಯ ನಂತರ 48 ತಾಸು ತಾಯಿ ಆರೈಕೆ ಮಾಡಲಿದ್ದು, ಸಮಸ್ಯೆಯಾತ್ಮಕ ಪ್ರಕರಣಗಳ ನಿಯಮಿತ ಫಾಲೋ ಅಪ್ ನಡೆಯುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.