ಕೋಲಾರ: ಮಹಿಳಾ ಕೋಟಾ ಹಾಗೂ ಪರಿಶಿಷ್ಟ ಜಾತಿ ಎಡಗೈ ಸಮುದಾಯದ ಕೋಟಾದಲ್ಲಿ ಈ ಬಾರಿ ಸಚಿವ ಸ್ಥಾನ ಪಡೆಯಬೇಕೆಂದು ಮೌನ ಪ್ರಯತ್ನದಲ್ಲಿ ತೊಡಗಿದ್ದ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಹೆಸರು ಮಂಗಳವಾರ ಬೆಳಿಗ್ಗೆ ಮುಂಚೂಣಿಗೆ ಬಂದಿತ್ತು. ಅಷ್ಟರಲ್ಲಿ ಅವರ ತಂದೆ, ದೇವನಹಳ್ಳಿ ಶಾಸಕ ಕೆ.ಎಚ್.ಮುನಿಯಪ್ಪ ಕೂಡ ತಮಗೆ ಕೊನೆಯ ಅವಕಾಶ ಬೇಕೆಂದು ಪಟ್ಟು ಹಿಡಿದಿರುವ ಕಾರಣ ಸಚಿವ ಸ್ಥಾನಕ್ಕೆ ಅವರು ಹೆಸರೂ ತಡರಾತ್ರಿ ಮುನ್ನೆಲೆಗೆ ಬಂದಿದೆ.

ಹೈಕಮಾಂಡ್ ಅಂಗಳದಲ್ಲೂ ಈ ವಿಚಾರ ಕಗ್ಗಂಟಾಗಿತ್ತು. ನವದೆಹಲಿಯಲ್ಲಿ ನಡೆದ ಚರ್ಚೆಯಲ್ಲಿ ರೂಪಕಲಾ ಅವರನ್ನು ಪರಿಗಣಿಸಬೇಕೋ ಅಥವಾ ಮುನಿಯಪ್ಪ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕೋ ಎಂಬ ವಿಚಾರ ಪ್ರಸ್ತಾಪವಾಗಿದೆ.

ತಂದೆ ಹಾಗೂ ಪುತ್ರಿ ಇಬ್ಬರೂ ಸಚಿವರಾಗಲು ಹಟ ಹಿಡಿದಿದ್ದರು. ಏಕಕಾಲಕ್ಕೆ ಒಂದೇ ಕುಟುಂಬದ ಇಬ್ಬರಿಗೆ ವರಿಷ್ಠರು ಅವಕಾಶ ಕಲ್ಪಿಸುತ್ತಾರೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿತ್ತು. ಭಾನುವಾರವಷ್ಟೇ ಮಾತನಾಡಿದ್ದ ರೂಪಕಲಾ, ‘ಸಚಿವ ಸ್ಥಾನ ಯಾರಿಗೆ ಕೊಡಬೇಕೆಂದು ಪಕ್ಷದ ವರಿಷ್ಠರೇ ತೀರ್ಮಾನ ಮಾಡಬೇಕು’ ಎಂದಿದ್ದರು.

ಇಬ್ಬರಿಗೂ ಅವಕಾಶ ಕಲ್ಪಿಸಿದರೆ ಕೋಲಾರ ಜಿಲ್ಲೆಯ ಕಾಂಗ್ರೆಸ್ನ ಇತರ ಶಾಸಕರಿಂದ ವಿರೋಧ ವ್ಯಕ್ತವಾಗುತ್ತದೆ ಎಂಬುದನ್ನು ಮನಗಂಡ ಹೈಕಮಾಂಡ್, ಈ ಬಗ್ಗೆ ತಾವೇ ಅಂತಿಮ ನಿರ್ಧಾರ ಕೈಗೊಂಡು ಒಬ್ಬರ ಹೆಸರನ್ನು ಸೂಚಿಸುವಂತೆ ಅಪ್ಪ ಹಾಗೂ ಪುತ್ರಿ ತೀರ್ಮಾನಕ್ಕೆ ಬಿಟ್ಟಿರುವುದು ಗೊತ್ತಾಗಿದೆ.

ಕಾಂಗ್ರೆಸ್ ಸರ್ಕಾರದ ಮೊದಲ ಅವಧಿಯಲ್ಲೂ ರೂಪಕಲಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಸತತ ಎರಡು ಬಾರಿ ಗೆದ್ದಿರುವ ಅವರು ಮಹಿಳಾ ಕೋಟಾದಡಿ ಪ್ರಯತ್ನ ನಡೆಸಿದ್ದರು. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮೀಸಲು ಕ್ಷೇತ್ರದಿಂದ ಗೆದ್ದಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮುನಿಯಪ್ಪ ಅವರಿಗೆ ಸಚಿವ ಸ್ಥಾನ ಕಲ್ಪಿಸಲಾಯಿತು. ಒಂದೇ ಕುಟುಂಬಕ್ಕೆ ಎರಡು ಸ್ಥಾನ ಕಲ್ಪಿಸುವುದಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ರೂಪಕಲಾ ಹಿಂದೆ ಸರಿದಿದ್ದರು. ಆಗ ಕಾಂಗ್ರೆಸ್ ಮಹಿಳಾ ಶಾಸಕಿಯರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತ್ರ ಸಚಿವೆಯಾಗಿದ್ದರು.

ಈ ನಡುವೆ, ಮುನಿಯಪ್ಪ ಅವರು, ‘ರಾಜ್ಯ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬಳಿಕ ಹಿರಿಯ ಸಚಿವರು ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ನೀಡಬೇಕು’ ಎಂಬ ಹೇಳಿಕೆ ನೀಡಿದ್ದರು. ಹೀಗಾಗಿ, ಅವರೇ ಹಿಂದೆ ಸರಿದು ಪುತ್ರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳಿಗೆ ಪುಷ್ಟಿ ನೀಡಿತ್ತು.

ಈಗ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲೂ ತಾವೇ ಮಂತ್ರಿಯಾಗಿ ಮುಂದುವರಿಯಲು ಅವರು ಬಯಸಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೂ ತಂದು ಬುಧವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಷ್ಟಾಗಿಯೂ ರೂಪಕಲಾ ತಮ್ಮ ಪ್ರಯತ್ನ ಬಿಟ್ಟಿಲ್ಲ.

ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಸತತ ಏಳು ಬಾರಿ ಸಂಸದರಾಗಿ, ಯುಪಿಎ ಸರ್ಕಾರದ ಅವಧಿಯಲ್ಲಿ ಹತ್ತು ವರ್ಷ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ರಾಜಕಾರಣಿ ಮುನಿಯಪ್ಪ ಅವರು ಮೊದಲ ಅವಧಿಯಲ್ಲಿ ಮೂರು ವರ್ಷ ಆಹಾರ ಸಚಿವರಾಗಿದ್ದರು. ಕೇಂದ್ರದಲ್ಲಿ ಹೆಚ್ಚು ಸಮಯ ಇದ್ದ ಕಾರಣ ಹೈಕಮಾಂಡ್ನಲ್ಲಿ ಪ್ರಭಾವ ಹೊಂದಿದ್ದಾರೆ. ಇದೇ ಕಾರಣಕ್ಕೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ಹಕ್ಕೊತ್ತಾಯ ಮಂಡಿಸಿದ್ದಾರೆ.

ರೂಪಕಲಾಗೆ ಸಿಗದ್ದರೆ ಎಸ್ಎನ್ಎನ್ಗೆ ಅವಕಾಶ?

ದೇವನಹಳ್ಳಿ ಶಾಸಕ ಕೆ.ಎಚ್.ಮುನಿಯಪ್ಪ ಅವರಿಗೆ ಮತ್ತೆ ಸಚಿವ ಸ್ಥಾನದ ಅವಕಾಶ ಲಭಿಸಿದರೆ ಅವರ ಪುತ್ರಿ, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರನ್ನು ಪರಿಗಣಿಸುವುದಿಲ್ಲ ಎನ್ನಲಾಗಿದೆ. ಏಕೆಂದರೆ ಒಂದೇ ಕುಟುಂಬದ ಇಬ್ಬರನ್ನು ಪರಿಗಣಿಸುವ ಸಾಧ್ಯತೆ ಕಡಿಮೆ.

ಹೀಗಾಗಿ, ಕೋಲಾರ ಜಿಲ್ಲೆಯಿಂದ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಶಾಸಕ ಬಂಗಾರಪೇಟೆಯ ಎಸ್.ಎನ್.ನಾರಾಯಣಸ್ವಾಮಿ ಅವರ ಅದೃಷ್ಟ ಖುಲಾಯಿಸುವ ಸಂಭವವಿದೆ. ಸತತ ಮೂರು ಬಾರಿ ಗೆದ್ದಿರುವ ಅವರು ನಾಲ್ಕೈದು ದಿನಗಳಿಂದ ಹೈಕಮಾಂಡ್ ಹಾಗೂ ರಾಜ್ಯ ವರಿಷ್ಠರನ್ನು ಪದೇಪದೇ ಭೇಟಿಯಾಗುತ್ತಲೇ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.