ಕೋಲಾರ: ‘ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಬ್ಲ್ಯಾಕ್ಮೇಲ್ ಮಾಡುವ ಒಂದು ತಂಡವೇ ಇದ್ದು, ಅಂಥವರನ್ನು ಬಲಿ ಹಾಕುವುದಾಗಿ ಶಾಸಕ ಕೆ.ವೈ.ನಂಜೇಗೌಡ ಈಚೆಗೆ ಎಚ್ಚರಿಕೆ ನೀಡಿದ್ದಾರೆ. ಈ ರೀತಿ ಬೆದರಿಕೆ ಹಾಕುವ ಮೂಲಕ ತಮ್ಮ ಮೇಲೆ ಯಾರೂ ಆರೋಪ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದು ವಕೀಲ ಕೆ.ಪಿ.ವೆಂಕಟಾಚಲಪತಿ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ‘ನಾನು ಹಾಗೂ ಸಾಮಾಜಿಕ ಕಾರ್ಯಕರ್ತ ಗೂಳಿಗಾನಹಳ್ಳಿ ನಾಗರಾಜ್ ಹಲವಾರು ಆರೋಪ ಮಾಡಿದ್ದೆವು. ಈ ಹಿನ್ನೆಲೆಯಲ್ಲಿ ಅವರು ಬ್ಲ್ಯಾಕ್ಮೇಲ್ ಎಂದು ಪದ ಬಳಸಿರಬಹುದು. ಬ್ಲ್ಯಾಕ್ಮೇಲ್ ಮಾಡುವವರ ಪಟ್ಟಿಯನ್ನು ಬಹಿರಂಗಪಡಿಸಲಿ, ಆ ಪಟ್ಟಿಯನ್ನು ಅವರು ಪೊಲೀಸರಿಗೆ ನೀಡಲಿ. ಶಾಸಕರಿಗೇ ಬ್ಲ್ಯಾಕ್ಮೇಲ್ ಮಾಡಿದವರನ್ನು ಬಿಡಬಾರದು, ದೂರು ಕೊಟ್ಟು ತನಿಖೆ ಮಾಡಿಸಲಿ. ಪ್ರಕರಣ ದಾಖಲಿಸಲಿ’ ಎಂದು ಒತ್ತಾಯಿಸಿದರು.

‘ಒಬ್ಬ ಶಾಸಕರಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಆದರೆ, ಕಾನೂನು ಬಾಹಿರ ಪದ ಬಳಸುವುದು, ಬೆದರಿಕೆ ಹಾಕುವುದು ಸರಿ ಅಲ್ಲ. ಯಾರಾದರೂ ಜನಸಾಮಾನ್ಯರು ಇದ್ದರೆ ಪೊಲೀಸರು ಸುಮ್ಮನೇ ಬಿಡುತ್ತಾರೆಯೇ? ಹೀಗಾಗಿ, ಅವರ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಕ್ರಮ ಕೈಗೊಳ್ಳಬೇಕು. ಈಗಾಗಲೇ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಿದ್ದೇವೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-18-1185454300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.