ಮುಳಬಾಗಿಲು: ಗಂಡನ ಕಿರುಕುಳ ತಾಳಲಾರದೆ ಪತ್ನಿ ಹಾಗೂ ಇಬ್ಬರು ಮಕ್ಕಳು ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬಿ.ಕೊರವೇನೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ತಾಲ್ಲೂಕಿನ ಬಿ.ಕೊರವೇನೂರು ಗ್ರಾಮದ ಲಕ್ಷ್ಮಮ್ಮ ( 35), ಮಕ್ಕಳಾದ ಗಗನಶ್ರೀ (14) ಹಾಗೂ ರೆಡ್ಡೆಮ್ಮ (12) ಮೃತರು. ಮೃತರ ಸಾವಿಗೆ ಗಂಡನ ಕಿರುಕುಳವೇ ಕಾರಣ ಎಂದು ಪೊಲೀಸ್ ಪ್ರಕರಣ ದಾಖಲಾಗಿದೆ.

ಲಕ್ಷ್ಮಮ್ಮ ಅವರ ಪತಿ ನಾರಾಯಣಪ್ಪ (42) ಪ್ರತಿನಿತ್ಯ ಕುಡಿದು ಬಂದು ಪತ್ನಿ ಹಾಗೂ ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಿಂಸೆ ನೀಡುತ್ತಿದ್ದರು. ಹಾಗಾಗಿ ಮಂಗಳವಾರವೂ ಸಹ ಕುಡಿದು ಬಂದು ನಿಂದಿಸಿ ಹಿಂಸೆ ನೀಡಿದ್ದರು. ಇದರಿಂದ ಬೇಸತ್ತ ಲಕ್ಷ್ಮಮ್ಮ ತನ್ನ ಇಬ್ಬರು ಮಕ್ಕಳನ್ನು ಗ್ರಾಮದ ಕೆರೆಯ ಸಮೀಪದ ರಾಮರೆಡ್ಡಿ ಎಂಬುವವರ ಬಾವಿಯ ಬಳಿಗೆ ಕರೆದುಕೊಂಡು ಹೋಗಿ ಇಬ್ಬರೂ ಮಕ್ಕಳನ್ನು ತನ್ನದೇ ಸೀರೆಯ ಸೆರಿಗಿನಲ್ಲಿ ಸೊಂಟಕ್ಕೆ ಕಟ್ಟುಕೊಂಡು ಒಂದೇ ಸಲ ಬಾವಿಗೆ ಹಾರಿ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಮಗ ಅರವಿಂದನನ್ನೂ ಲಕ್ಷ್ಮಮ್ಮ ಕರೆದಿದ್ದು, ಅರವಿಂದ್ ತನ್ನ ದೊಡ್ಡಪ್ಪನ ಜೊತೆಯಲ್ಲಿ ಬೇರೆಡೆಗೆ ಹೋದ ಕಾರಣದಿಂದ ಅರವಿಂದ್ ಸಾವಿನಿಂದ ತಪ್ಪಿಸಿಕೊಂಡಿದ್ದಾನೆ. ಇಲ್ಲವಾದಲ್ಲಿ ಅರವಿಂದನನ್ನೂ ಸಹ ಬಾವಿಯಲ್ಲಿ ತಳ್ಳುತ್ತಿದ್ದಳು ಎಂದು ಮೃತ ಲಕ್ಷ್ಮಮ್ಮ ಸಹೋದರ ವೆಂಕಟೇಶ್ ದೂರಿನಲ್ಲಿ ತಿಳಿಸಿದ್ದಾರೆ.

ಬಾವಿಯ ಬಳಿ ಎಲೆ ಅಡಿಕೆ ಚೀಲ ಮತ್ತಿತರರ ವಸ್ತುಗಳನ್ನು ಇಟ್ಟು ಬಾವಿಯಲ್ಲಿ ಮುಳುಗಿದ್ದ ಪರಿಣಾಮ ಲಕ್ಷ್ಮಮ್ಮ ಬಾವಿಯಲ್ಲಿ ಬಿದ್ದಿದ್ದಾರೆ ಎಂದು ಕುಟುಂಬಸ್ಥರು ತಿಳಿದು ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಕೆ.ಸತೀಶ್, ಸಬ್ ಇನ್ಸ್ಪೆಕ್ಟರ್ ಅರುಣ್ ಗೌಡ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಗ್ನಿಶಾಮಕ ಸಿಬ್ಬಂದಿಯ ಮೂಲಕ ಶವಗಳನ್ನು ಹೊರ ತೆಗೆದು ಬುಧವಾರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-18-623201558

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.