ಮುಳಬಾಗಿಲು: ಗ್ರಾಮೀಣ ಭಾರತದಲ್ಲಿ ಬಹುತೇಕರಿಗೆ ಶಿಕ್ಷಣ ಸಿಕ್ಕಿದರೂ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದು ತಲೆತಗ್ಗಿಸುವ ವಿಷಯ. ಹಾಗಾಗಿ ಅಸ್ಪೃಶ್ಯತೆ ನಿರ್ಮೂಲನೆಗೆ ಎಲ್ಲರೂ ಸಂಕಲ್ಪ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.

ತಾಲ್ಲೂಕಿನ ಬೆಳಪನಹಳ್ಳಿ ಗ್ರಾಮದಲ್ಲಿ ಭಾನುವಾರ ಅರಿವು ಭಾರತ ದಲಿತ ಗೃಹ ಪ್ರವೇಶ ಸಮಿತಿಯಿಂದ ಗ್ರಾಮದ ಅಚಲಗುರು ಸುಬ್ಬಾರೆಡ್ಡಿ ಅವರ ಮನೆಯಲ್ಲಿ ಏರ್ಪಡಿಸಿದ್ದ ಸಮಾನತೆಗಾಗಿ ಸಹಭೋಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮವೆಂದರೆ ಕೇವಲ ಭೌತಿಕ ಸೌಲಭ್ಯಗಳಿಂದ ಅಳೆಯುವದೇ ಅಲ್ಲ, ಅಲ್ಲಿರುವ ಜನರ ಗುಣ, ಸಂಸ್ಕಾರ ಮತ್ತು ಒಳ್ಳೆತನವೇ ಅದರ ಮಹತ್ವ ತೋರಿಸುತ್ತದೆ ಎಂದರು.

ಬೆಳಪನಹಳ್ಳಿ ಗ್ರಾಮವು ಒಂದು ರೀತಿಯ ತಪೋವನದ ಅನುಭವ ನೀಡುತ್ತಿದೆ. ಇಂತಹ ಪವಿತ್ರ ಸ್ಥಳದಲ್ಲಿ ಅರಿವು ಭಾರತ ಕಾರ್ಯಕ್ರಮ ನಡೆಯುತ್ತಿರುವುದು ಅರ್ಥಪೂರ್ಣ ಮತ್ತು ವಿಶಿಷ್ಟವಾಗಿದೆ. ಕಳೆದ ಒಂದು ವರ್ಷದಿಂದ ನಾವು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇವೆ. ಆದರೆ, ಈ ಕಾರ್ಯಕ್ರಮ ವಿಭಿನ್ನವಾಗಿದೆ ಎಂಬ ಭಾವನೆ ನೀಡುತ್ತಿದೆ ಎಂದು ಹೇಳಿದರು.

ನಂತರ ಅರಿವು ಯಾನ ಆನ್ಲೈನ್ ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಿದ ಕನ್ನಡ ಕ್ರಿಯಾ ಸಮಿತಿ ಮುಖಂಡ ವ.ಚ.ಚನ್ನೇಗೌಡ ಮಾತನಾಡಿ, ಪತ್ರಿಕೆಗಳು ಚಳುವಳಿಯ ಸಂದೇಶವನ್ನು ಜನಸಮುದಾಯಕ್ಕೆ ಮುಟ್ಟಿಸುತ್ತವೆ ಎಂದರು.

ಅಚಲಗುರು ಸುಬ್ಬಾರೆಡ್ಡಿ ಮಾಡನಾಡಿ, ‘ನಮ್ಮ ಆಶ್ರಮದಲ್ಲಿ ಎಲ್ಲರಿಗೂ ಪ್ರವೇಶವಿದೆ. ಯಾವುದೇ ತಾರತಮ್ಯವಿರುವುದಿಲ್ಲ. ಮನುಷ್ಯ ಕುಲ ಅಥವಾ ಜಾತಿಗಿಂತ ಗುಣ ದೊಡ್ಡದಾಗಬೇಕು’ ಎಂದು ಹೇಳಿದರು.

ನಂತರ ಗ್ರಾಮದ ನಾರಾಯಣಪ್ಪ ಅವರ ಮನೆಯಲ್ಲಿ ಸಮಾನತೆಯ ಟೀ ಕಾರ್ಯಕ್ರಮ ನಡೆಯಿತು.

ತಹಶೀಲ್ದಾರ್ ವಿ.ಗೀತಾ, ಅ.ಮು.ಲಕ್ಷ್ಮಿನಾರಾಯಣ, ರಾಮಲಿಂಗಾರೆಡ್ಡಿ, ಟಿ.ಎಸ್.ರಮೇಶ್, ಡಾ.ಅರಿವು ಶಿವಪ್ಪ, ಕೃಷ್ಣೇಗೌಡ ಕೌರಗಾನಹಳ್ಳಿ, ಸರ್ವಜ್ಞ ಗೌಡ, ಜಯರಾಮರೆಡ್ಡಿ, ಟಿ.ವಿಜಯಕುಮಾರ್, ಪಂಡಿತ್ ಮನವಿಕಟ್ಟಪ್ಪ, ಓಂ ಪ್ರಕಾಶ್, ವಾರಿಧಿ ಮಂಜುನಾಥ್ ರೆಡ್ಡಿ, ಮಂಜುಕನ್ನಿಕ, ಗೋಪಿ ಕರವಿ, ರಾಮಪ್ಪ, ಅಶೋಕ ಆನಂದ ರೆಡ್ಡಿ, ವೆಂಕಟೇಶ್ ಗೌಡ, ಶ್ರೀ ಕೃಷ್ಣಾನಂದಮಯಿ ಕುಮಾರಿ ಅಮ್ಮನವರು, ರುದ್ರೇಶ್ ಅದರಂಗಿ, ನಿಜಾನಂದಮಯಿ ಶಾಂತ ಮಾಂಬಾ, ತ್ರಿಗುಣತಿತ ಗೋವಿಂದ ಸ್ವಾಮಿ, ಪೂರ್ಣಾನಂದ ಪ್ರಕಾಶ ರೆಡ್ಡಿ ಸ್ವಾಮಿ, ಮುಬಾರಕ್, ಭಗವಾನ್, ರಾಧಾಮಣಿ ಬೆಳಕು ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-18-161388327

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.