ಮುಳಬಾಗಿಲು: ರಾಜ್ಯದಲ್ಲೇ ಬರಗಾಲದ ತಾಲ್ಲೂಕು ಎಂಬ ಹೆಸರು ಪಡೆದಿರುವ ಮುಳಬಾಗಿಲಿನಲ್ಲಿ ಮಳೆ ನೀರು ಸಂಗ್ರಹಿಸುವ ಯಾವುದೇ ಡ್ಯಾಂಗಳಿಲ್ಲದ ಕಾರಣ, ನೀರು ಆಂಧ್ರಪ್ರದೇಶಕ್ಕೆ ಹರಿದು ಹೋಗುತ್ತದೆ. ಹಾಗಾಗಿ ನೀರಿನ ಸಂಗ್ರಹಕ್ಕೆ ಡ್ಯಾಮ್ ಅಥವಾ ನೀರಿನ ಸಂಗ್ರಹ ಕೇಂದ್ರಗಳನ್ನು ಪ್ರಾರಂಭಿಸಬೇಕೆಂಬುದು ಜನತೆಯ ಬೇಡಿಕೆ.

ಕೋಲಾರ ಜಿಲ್ಲೆಯಲ್ಲಿ ಮುಳಬಾಗಿಲು ತಾಲ್ಲೂಕು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದ್ದು ತಾಲ್ಲೂಕಿನಲ್ಲಿ ಯಾವುದೇ ರೀತಿಯ ನೀರಿನ ಸಂಗ್ರಹ ಕೇಂದ್ರಗಳಿಲ್ಲ. ಹಾಗಾಗಿ ತಾಲ್ಲೂಕಿನಲ್ಲಿ ಸ್ವಲ್ಪ ಮಳೆಯಾಗಿ ಹಳ್ಳ, ಗುಂಡಿ, ಹಾಗೂ ಕುಂಟೆ ತುಂಬಿದರೂ ಮಳೆಯ ನೀರು ಏಕಾಏಕಿ ಆಂಧ್ರದ ಕೆರೆ ಕುಂಟೆಗಳ ಪಾಲಾಗುತ್ತದೆ.

ಭೀಕರ ಬರಗಾಲಿಗೆ ತುತ್ತಾಗಿದ್ದ ತಾಲ್ಲೂಕನ್ನು ರಾಜ್ಯ ಸರ್ಕಾರವೇ ಬರಗಾಲದ ಪಟ್ಟಿಗೆ ಸೇರಿಸಿತ್ತು. ಹಾಗಾಗಿ ತಾಲ್ಲೂಕಿನಲ್ಲಿ ನೀರಿನ ಅಂತರ್ಜಲ ಹೆಚ್ಚಾಗಲೂ ಹಾಗೂ ಆಂಧ್ರಕ್ಕೆ ವ್ಯರ್ಥವಾಗಿ ನೀರು ಹರಿದು ಹೋಗುವುದನ್ನು ತಪ್ಪಿಸಲು ಸರ್ಕಾರ ಅಥವಾ ಸ್ಥಳೀಯ ಅಧಿಕಾರಿಗಳು ಮನಸ್ಸು ಮಾಡಬೇಕಾಗಿದೆ.

ಇನ್ನು ಮುಳಬಾಗಿಲು ತಾಲ್ಲೂಕಿನ ಬೈರಕೂರು, ತಾಯಲೂರು ಹಾಗೂ ದುಗ್ಗಸಂದ್ರ ಹೋಬಳಿ ಕೇಂದ್ರಗಳು ಬಹುತೇಕ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಂತಿದ್ದು, ತಾಲ್ಲೂಕಿನಲ್ಲಿ ನೀರು ಹರಿಯುವ ಮಳೆಯಾದರೂ ಏಕಾಏಕಿ ತಾಲ್ಲೂಕಿನ ನೀರು ಆಂಧ್ರಪ್ರದೇಶದ ಪಾಲಾಗುತ್ತದೆ. ಹಾಗಾಗಿ ತಾಲ್ಲೂಕಿನಲ್ಲಿ ನೀರು ಸಂಗ್ರಹದಂತಹ ದೊಡ್ಡ ಡ್ಯಾಂ, ತಡೆ ಗೋಡೆ ಹಾಗೂ ದೊಡ್ಡ ವಡ್ಡು ನಿರ್ಮಿಸಿದರೆ ಜನತೆಗೆ ಸಹಾಯವಾಗುತ್ತದೆ ಎಂಬುದು ಸಾರ್ವಜನಿಕರ ಮಾತಾಗಿದೆ.

ತಾಲ್ಲೂಕಿನಲ್ಲಿ ಸುಮಾರು 420 ಕೆರೆಗಳಿದ್ದು, ಬಹುತೇಕ ಕೆರೆಗಳು ಕೀಡಿ ಹರಿದರೆ ಹರಿಯುವ ನೀರಿಗೆ ತಡೆ ಗೋಡೆಗಳೇ ಇಲ್ಲ. ಇದರಿಂದ ನೀರು ಸರಾಗವಾಗಿ ಹರಿದು ಆಂಧ್ರಕ್ಕೆ ಹೋಗುತ್ತವೆ. ಮಳೆ ನಿಂತ ಕೇವಲ ತಿಂಗಳುಗಳಲ್ಲಿ ಹಳ್ಳ ಹಾಗೂ ಕುಂಟೆಗಳಲ್ಲಿ ನೀರು ಖಾಲಿಯಾಗುತ್ತದೆ.

ಕೆಲವರು ಕೊಳವೆಬಾವಿ ನೀರು ಬಳಸಿ ಕೃಷಿಯಲ್ಲಿ ತೊಡಗುತ್ತಾರೆ, ಇನ್ನೂ ಕೆಲವರು ಮಳೆ ನೀರನ್ನೇ ಆಶ್ರಯಿಸುತ್ತಾರೆ. ಕೆರೆ, ಕುಂಟೆ, ಡ್ಯಾಂ, ಒಡ್ಡುಗಳನ್ನು ನಿರ್ಮಿಸಿದರೆ ವ್ಯರ್ಥವಾಗಿ ಆಂಧ್ರಕ್ಕೆ ಹರಿಯುವ ನೀರನ್ನು ಸಂಗ್ರಹಿಸಿದರೆ ತಾಲ್ಲೂಕಿನ ರೈತರಿಗೆ ಸಹಕಾರಿಯಾಗಲಿದೆ ಎಂದರು.

ಕೆರೆ ತೂಬುಗಳಿಂದ ವ್ಯರ್ಥವಾಗಿ ಹರಿಯುವ ನೀರು: ಕೆಲವು ಕೆರೆಗಳಲ್ಲಿ ಮಳೆಯಿಂದಾಗಿ ತುಂಬಿದ್ದ ನೀರು ತೂಬುಗಳ ರಂಧ್ರ, ಕೋಡಿಯ ಕಲ್ಲು ಸಂದಿಗಳಲ್ಲಿ ಸುರಿದು ವ್ಯರ್ಥವಾಗಿ ಏಟಿಗಳ ಮೂಲಕ ಆಂಧ್ರದ ಕಡೆಗೆ ಹೋಗುತ್ತಿದೆ. ಇಲ್ಲಿಯವರೆ ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಕಾರ್ಯ ನಡೆಸಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.

ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ ಬಿದ್ದ ಮಳೆಗೆ ತಾಲ್ಲೂಕಿನಾದ್ಯಂತ ಕೆರೆಗಳು ತುಂಬಿ ಕೋಡಿ ಹರಿದಿತ್ತು. ಆಗ ತಾಲ್ಲೂಕಿನ ನಗವಾರ (ಮಾಣಿಕ್ಯನ ಕೆರೆ), ಹೊಳಗೇರನಹಳ್ಳಿ ಕೆರೆ ಹಾಗೂ ಬೈರಕೂರು ಹಾಗೂ ನಂಗಲಿ ಕೆರೆ ತೂಬು ಹಾಗೂ ಇನ್ನಿತರೆ ಕೆಲವು ಕೆರೆಗಳ ಕೋಡಿ ಹಾಗೂ ಕಟ್ಟೆಗಳು ಬಿರುಕು ಬಿಟ್ಟುಕೊಂಡು ಕೆರೆಯಲ್ಲಿನ ನೀರೆಲ್ಲಾ ಆಂಧ್ರದ ಪಾಲಾಗಿತ್ತು. ಕೆಲವು ಕೆರೆಗಳನ್ನು ದುರಸ್ತಿ ಮಾಡಿದ್ದರೂ, ಇನ್ನೂ ನಂಗಲಿ ಕೆರೆಯ ತೂಬಿನಿಂದ ನೀರು ವ್ಯರ್ಥವಾಗುತ್ತಲೇ ಇದೆ.

ಮುಳಬಾಗಿಲು ತಾಲ್ಲೂಕಿನ ಮಳೆ ನೀರು ಸಂಗ್ರಹಿಸಿಲು ಯರಗೋಳ್ ಡ್ಯಾಂ ಮಾದರಿಯ ಡ್ಯಾಂ ಅವಶ್ಯಕತೆ ಇದೆ. ಹಾಗಾಗಿ ಸರ್ಕಾರಗಳು ನೂತನ ಜಲ ಯೋಜನೆ ತಾಲ್ಲೂಕಿಗೆ ತರಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-18-39494576

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.