ಕೋಲಾರ: 36 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಮುಳಬಾಗಿಲು ತಾಲ್ಲೂಕಿನ ನಂಗಲಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೀನಪ್ಪ ಬಂಧಿತ ಆರೋಪಿ. ಮುಳಬಾಗಿಲು ತಾಲ್ಲೂಕಿನ ಹಲೆಕುಪ್ಪ ಗ್ರಾಮದಲ್ಲಿ 1990ರಲ್ಲಿ ನಡೆದಿದ್ದ ಕೊಲೆ ಪ್ರಕರಣ ಇದಾಗಿದೆ.

1990ರ ಜ.30ರಂದು ತಮ್ಮ ಪುತ್ರನಾರಾಯಣಪ್ಪ (24) ಕಾಣೆಯಾಗಿರುವುದಾಗಿ ತಾಯಿ ವೆಂಕಟಮ್ಮ ದೂರು ನೀಡಿದ್ದರು. ಒಂದು ದಿನದ ನಂತರ ಸಣ್ಣ ಹಳ್ಳದಲ್ಲಿ ಹೂತ ಸ್ಥಿತಿಯಲ್ಲಿ ನಾರಾಯಣಪ್ಪ ಅವರ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಇದು ಕೊಲೆ ಎಂಬುದು ಗೊತ್ತಾಗಿತ್ತು. ಆಗ ಆರೋಪಿಗೆ 29 ವರ್ಷವಾಗಿತ್ತು.

ಪ್ರಕರಣ ನಡೆದು 36 ವರ್ಷಗಳಾಗಿದ್ದರೂ ಆರೋಪಿ ಪತ್ತೆಯಾಗಿರಲಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಹಳೆ ಪ್ರಕರಣದ ಕಡತ ತೆಗೆದು ಪರಿಶೀಲಿಸಿ ಆರೋಪಿ ಪತ್ತೆಗೆ ಸೂಚನೆ ನೀಡಿದ್ದರು.

ಮುಳಬಾಗಿಲು ವಿಭಾಗದ ಡಿಐಎಸ್ಪಿ ಮನಿಷಾ, ನಂಗಲಿ ಪೊಲೀಸ್ ಠಾಣೆಯ ಪಿಎಸ್ಐ ವಿದ್ಯಾಶ್ರೀ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಆರೋಪಿ ಪತ್ತೆಗಾಗಿ ನಂಗಲಿ ಠಾಣೆಯ ಎಎಸ್ಐ ನಾಗೇಂದ್ರ ರಾವ್, ಕಾನ್ಸ್ಟೆಬಲ್ ಪವನ್ ಕುಮಾರ್ ಅವರನ್ನು ನಿಯೋಜಿಸಲಾಗಿತ್ತು.

ತನ್ನ ಪತ್ನಿಯು ನಾರಾಯಣಪ್ಪ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಆರೋಪಿ ಸೀನಪ್ಪ ಈ ಕೊಲೆ ಮಾಡಿದ್ದಾನೆ. ನಂತರ ಭಯದಿಂದ ಬೆಂಗಳೂರಿಗೆ ಪರಾರಿಯಾಗಿ ಹೋಟೆಲ್ಗಳಲ್ಲಿ ಕೆಲಸ ಮಾಡಿದ್ದಾನೆ. ನಂತರ ಆಂಧ್ರ ಪ್ರದೇಶದ ಕುಪ್ಪಂ ಪಟ್ಟಣದ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿಸಿ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಿಬ್ಬಂದಿಯನ್ನು ಎಸ್ಪಿ ಶ್ಲಾಘಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-4-224454274

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.