ಕೋಲಾರ: ಅಯೋಧ್ಯ ವೈಶ್ಯ ನಾಮಧಾರಿ ನಗರ್ತ ಸಮುದಾಯವನ್ನು ಪ್ರವರ್ಗ 2 ಎ ಪಟ್ಟಿಗೆ ಸೇರಿಸಿ ಜಾತಿ ಪ್ರಮಾಣಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ಸಮುದಾಯದ ಮುಖಂಡರು ಹಾಗೂ ಜನರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಬಂಗಾರಪೇಟೆ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ. ಮಂಗಳಾ ಅವರಿಗೆ ಮನವಿ ಸಲ್ಲಿಸಿದರು.

ಅಯೋಧ್ಯ ವೈಶ್ಯ ನಾಮಧಾರಿ ನಗರ್ತ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ವಿತರಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಮೊದಲಿನಿಂದಲೂ ಮನವಿ ನೀಡುತ್ತಾ, ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೆ, ಸ್ಪಂದನೆ ಮಾತ್ರ ಸಿಗುತ್ತಿಲ್ಲ ಎಂದು ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ನಗರ್ತ, ನಾಮಧಾರಿ ನಗರ್ತ, ನಾಮಧಾರಿ ಎಂಬ ಹೆಸರಿನಲ್ಲಿ ಹಲವು ದಶಕಗಳಿಂದ ಶಾಲಾ ದಾಖಲೆ, ಆದಾಯ ದಾಖಲೆಗಳಲ್ಲಿ ಸೇರಿದಂತೆ ವಿವಿಧ ದಾಖಲೆಗಳಲ್ಲಿ ನಮೂದಿಸಲಾಗಿದೆ. ಈ ಹೆಸರಲ್ಲಿರುವ ವ್ಯತ್ಯಾಸಗಳಿಂದ ಇತ್ತೀಚಿನ ದಿನದಲ್ಲಿ ಗೊಂದಲ ಸೃಷ್ಟಿಯಾಗಿದೆ. ಎಲ್ಲ ಹೆಸರು ಒಂದೇ ಸಮುದಾಯವನ್ನು ಸೂಚಿಸುತ್ತವೆ. ಈ ಜಾತಿಯನ್ನು ಅಧಿಕೃತ ಗೆಜೆಟ್ ಪಟ್ಟಿಯಲ್ಲಿ ಸರ್ಕಾರ ಸೇರಿಸಿದ ಕಾರಣ ಪ್ರಮಾಣಪತ್ರ ಪಡೆಯಲು ಕಷ್ಟವಾಗುತ್ತಿದೆ ಎಂದರು.

ಅಯೋಧ್ಯ ವೈಶ್ಯ ನಾಮಧಾರಿ ನಗರ್ತ ಸಂಘದ ಗೌರವ ಅಧ್ಯಕ್ಷ ಎಸ್.ಎ.ರಾಮ್ ಪ್ರಕಾಶ್ ಮಾತನಾಡಿ, ‘ನಮ್ಮ ಸಮುದಾಯದಿಂದ ಒಬ್ಬ ಐಎಎಸ್, ಕೆಎಎಸ್ ಅಧಿಕಾರಿ, ಶಾಸಕ, ಸಂಸದ ಇಲ್ಲ. ಪ್ರತಿಭಟನಾ ಮೆರವಣಿಗೆ ಮೂಲಕ ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಪತ್ರ ನೀಡಿದ್ದೇವೆ. ಸಮುದಾಯವನ್ನು 2ಎ ಗೆ ಸೇರಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡ ವೆಂಕಟೇಶ್ ಮಾತನಾಡಿ, ‘ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಸಮುದಾಯದವರು 1985ರಿಂದ 2ಎ ವರ್ಗದ ಸವಲತ್ತು ಪಡೆಯುತ್ತಿದ್ದಾರೆ. ರಾಜ್ಯದಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯದವರು ಜಾತಿ ಪ್ರಮಾಣಪತ್ರ ಸಿಗದೆ ಪರದಾಡುವಂತಾಗಿದೆ. ಶಾಲಾ ಕಾಲೇಜುಗಳಲ್ಲಿ ಶುಲ್ಕ ರಿಯಾಯಿತಿಗೂ ಜಾತಿ ಪ್ರಮಾಣಪತ್ರ ಕೇಳುತ್ತಾರೆ. ನಮಗಿಂತ ಕಡಿಮೆ ಅಂಕ ಪಡೆಯುವ ಇತರ ಸಮುದಾಯದ ಮಕ್ಕಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡುತ್ತಾರೆ. ಜಾತಿ ಪ್ರಮಾಣಪತ್ರ ಇಲ್ಲದಿರುವುದರಿಂದ ನಮ್ಮ ಸಮುದಾಯದ ಹಿಂದೆ ಉಳಿದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ತೇಜಸ್ವಿನಿ ಮಾತನಾಡಿ, ‘ಬೇರೆ ಸಮುದಾಯದವರಿಗಿಂತ ಹೆಚ್ಚು ಅಂಕ ಪಡೆದರೂ ನಮಗೆ ಉದ್ಯೋಗ ಸಿಗುತ್ತಿಲ್ಲ. ನಮಗೆ ಜಾತಿ ಪ್ರಮಾಣಪತ್ರ ಸಿಗುತ್ತಿಲ್ಲ. ನಮ್ಮ ಸಮುದಾಯ ಮುಂದೆ ಬರಲು ಜಾತಿ ಪ್ರಮಾಣಪತ್ರದ ಅಗತ್ಯವಿದೆ’ ಎಂದು ಮನವಿ ಮಾಡಿದರು.

ವಿದ್ಯಾರ್ಥಿನಿ ತ್ರಿಷಾ ಮಾತನಾಡಿ, ‘ಎಂಬಿಬಿಎಸ್ ಮಾಡಬೇಕೆಂಬುದು ನನ್ನ ಕನಸು. ಆದರೆ, ಈ ಕನಸು ನನಸಾಗಲು ನಾವು 650ಕ್ಕೂ ಹೆಚ್ಚು ಅಂಕ ಪಡೆಯಬೇಕು. ಬೇರೆ ವರ್ಗದವರಿಗೆ 450ಕ್ಕೂ ಹೆಚ್ಚು ಅಂಕ ಬಂದರೆ ಸಾಕು. ಹೀಗಾಗಿ, ಜಾತಿ ಪ್ರಮಾಣಪತ್ರ ಬೇಕಿದೆ’ ಎಂದರು.

ವಿದ್ಯಾರ್ಥಿನಿಯರಾದ ಪೂಜಾ ಹಾಗೂ ಯಶಸ್ವಿನಿ, ‘ನಮ್ಮ ಜಾತಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಶಿಕ್ಷಣ ಹಾಗೂ ಉದ್ಯೋಗಕ್ಕೆ ಜಾತಿ ಪ್ರಮಾಣಪತ್ರ ಬೇಕು’ ಎಂದು ಹೇಳಿದರು.

ಸಮುದಾಯದ ಮುಖಂಡರಾದ ಜಯಪ್ರಕಾಶ್, ಜಿ.ಆನಂದಪ್ಪ, ಬಿ.ಎ.ಜಯರಾಂ, ಅಶೋಕ್, ಜನಾರ್ದನ್, ಸೀತಾರಾಂ, ದಾಮೋದರ್ ಹಾಗೂ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-18-1922081473

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.