ಶನಿವಾರ, 13 ಜೂನ್ 2026
×
ADVERTISEMENT

ವೇಮಗಲ್: ಕೆರೆಯ ಜೀವ ವೈವಿಧ್ಯತೆ ಕಬಳಿಸಿದ ಕಳೆ!

ವಿಶಾಲವಾದ ಹುಲ್ಲುಗಾವಲಿನಂತಾದ ನರಸಾಪುರ ಕೆರೆ ಜಲಕಳೆ ಕಟಾವಿಗೆ ರೈತರ ಒತ್ತಾಯ
ಎಸ್. ಎಂ. ಅಮರ್
Published : 20 ಮೇ 2026, 0:03 IST
Last Updated : 20 ಮೇ 2026, 5:42 IST
ADVERTISEMENT
ಫಾಲೋ ಮಾಡಿ
Comments
ಕೆಸಿ ವ್ಯಾಲಿ ಯೋಜನೆಯಿಂದ ಒಣಗಿ ಹೋಗಿದ್ದ ನಮ್ಮ ಕೋಲಾರದ ಕೆರೆಗಳಿಗೆ ನೀರು ಬಂದಿರುವುದು ನಿಜಕ್ಕೂ ಸಂತೋಷದ ವಿಷಯ. ಆದರೆ, ಕೇವಲ ನೀರು ಹರಿಸಿದರೆ ಸಾಲದು, ಅದರ ನಿರ್ವಹಣೆಯೂ ಅಷ್ಟೇ ಮುಖ್ಯ. ನರಸಾಪುರ ಕೆರೆಯಲ್ಲಿ ಬೆಳೆದಿರುವ ಜಲಕಳೆಗಳನ್ನು ನೋಡಿದರೆ ಬೇಸರವಾಗುತ್ತದೆ. ಸಂಸ್ಕರಿಸಿದ ನೀರಿನಲ್ಲಿರುವ ಪೋಷಕಾಂಶಗಳಿಂದ ಬೆಳೆಯುತ್ತಿರುವ ಈ ಕಳೆಗಳು ಇಡೀ ಕೆರೆಯನ್ನೇ ನುಂಗುತ್ತಿವೆ. ತಕ್ಷಣವೇ ಅತ್ಯಾಧುನಿಕ ಯಂತ್ರ ಬಳಸಿ, ಈ ಕಳೆ ತೆರವುಗೊಳಿಸದಿದ್ದರೆ, ಮುಂದಿನ ದಿನಗಳಲ್ಲಿ ಇಲ್ಲಿ ಯಾವುದೇ ಜಲಚರಗಳಿಗೆ ಅವಕಾಶವಿಲ್ಲದಂತಾಗುತ್ತದೆ..
–ಗೌರಿಶಂಕರ್, ಸ್ಥಳೀಯ ಪರಿಸರ ಕಾರ್ಯಕರ್ತ, ವೇಮಗಲ್
ನರಸಾಪುರ ಕೆರೆಗೆ ಈ ಹಿಂದೆ ನೂರಾರು ವಲಸೆ ಹಕ್ಕಿಗಳು ಬರುತ್ತಿದ್ದವು. ನೀರಿನಲ್ಲಿ ಅಪಾರ ಪ್ರಮಾಣದ ಮೀನುಗಳಿದ್ದವು. ಮೀನುಗಳನ್ನು ತಿನ್ನಲು ವಿಧ ವಿಧದ ಪಕ್ಷಿಗಳು ಕೆರೆಯ ಸುತ್ತಲೂ ಹಾರಾಡುತ್ತಿದ್ದವು. ಆದರೆ ಈಗ ಕೆರೆಯ ಮೇಲ್ಮೈ ಸಂಪೂರ್ಣವಾಗಿ ಮುಚ್ಚಿಹೋಗಿರುವುದರಿಂದ ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟಾಗಿ ಮೀನುಗಳು ಇದೆಯೋ ಇಲ್ಲವೋ ಎಂಬಂತಾಗಿದೆ. ಜಲ ಹಕ್ಕಿಗಳಿಗೂ ಕೂಡ ನೀರಿನಲ್ಲಿ ಜಾಗವಿಲ್ಲದಂತಾಗಿದೆ. ಸಂಬಂಧಪಟ್ಟವರು ಗಮನಹರಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು.
–ಗಗನ್, ಸ್ಥಳೀಯ ಪರಿಸರ ಪ್ರೇಮಿ
ನರಸಾಪುರ ಕೆರೆಯಲ್ಲಿ ಬೆಳೆದಿರುವ ಜಲಕಳೆಗಳ ನಿರ್ಮೂಲನೆಗೆ ವಿಶೇಷ ಗಮನ ಹರಿಸಿ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು.
–ವೆಂಕಟರಮಣ, ಕಾರ್ಯನಿರ್ವಾಹಕ ಎಂಜಿನಿಯರ್, ಸಣ್ಣ ನೀರಾವರಿ ವಿಭಾಗ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT