ಕೆಜಿಎಫ್: ಮನೆಗೆ ಬೀಗ ಹಾಕಿ ಹೊರಹೋದ ಸಂದರ್ಭದಲ್ಲಿ ಮನೆಯನ್ನು ಕಳ್ಳರಿಂದ ಸುರಕ್ಷಿತವಾಗಿ ಇಡಲು ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (ಎಲ್ಎಚ್ಬಿಎಸ್) ವ್ಯವಸ್ಥೆಯನ್ನು ಮಂಗಳವಾರದಿಂದ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ತಿಳಿಸಿದ್ದಾರೆ.

ಮನೆ ಮಾಲೀಕರು ಮನೆಗೆ ಬೀಗ ಹಾಕಿ ರಾತ್ರಿ ಹೊತ್ತು ಹೊರಗೆ ಹೋದ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗ ಮುರಿದು ಕಳ್ಳತನ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಕಳ್ಳತನ ತಡೆಗಟ್ಟವುದು. ರಾತ್ರಿ ಗಸ್ತನ್ನು ಹೆಚ್ಚಿಸುವುದು. ಅಪರಾಧ ತಡೆಗಟ್ಟುವಿಕೆಯಲ್ಲಿ ಸಾರ್ವಜನಿಕರನ್ನು ಭಾಗಿಗಳನ್ನಾಗಿ ಮಾಡುವುದು ಮತ್ತು ಬೀಗ ಹಾಕಿದ ಮನೆಗಳ ಮೇಲೆ ಕಣ್ಗಾವಲು ಇಡಲು ಎಲ್ಎಚ್ಬಿಎಸ್ ವ್ಯವಸ್ಥೆ ಅನುಕೂಲವಾಗಲಿದೆ ಎಂದರು.

ಸಾರ್ವಜನಿಕರು ಮನೆಯಿಂದ ತಾತ್ಕಾಲಿಕವಾಗಿ ಹೊರಗೆ ಹೋಗುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಜೊತೆ ಸಮನ್ವಯ ಸಾಧಿಸಬೇಕು. ಇಂತಹ ಸಂದರ್ಭದಲ್ಲಿ ಬೀಗ ಹಾಕಿದ ಮನೆಗಳ ಮೇಲೆ ಸಿಬ್ಬಂದಿ ಹೆಚ್ಚಿನ ನಿಗಾ ಇರಿಸುತ್ತಾರೆ. ಇದರಿಂದಾಗಿ ಮನೆ ಮಾಲೀಕರು ತಮ್ಮ ಮನೆಯಿಂದ ಕಳ್ಳರಿಂದ ಸುರಕ್ಷಿತವಾಗಿಡಬಹುದು ಎಂದು ಹೇಳಿದರು.

ಈ ಸೌಲಭ್ಯವನ್ನು ಬಳಸಿಕೊಳ್ಳಲು ಪೊಲೀಸ್ ಇಲಾಖೆ ಸಮನ್ವಯ ಸಾಧಿಸಲು ಸಿಬ್ಬಂದಿಯನ್ನು ನೇಮಿಸಿದೆ. ಇಲಾಖೆಯ ವಾಟ್ಸಪ್ ನಂಬರ್ 82779 63743 ಸಂಖ್ಯೆಗೆ ಸಂಪರ್ಕಿಸಿ. ಹೆಸರು, ವಿಳಾಸ, ಗೂಗಲ್ ಲೊಕೇಶನ್, ಮನೆಯಿಂದ ಹೊರಗೆ ಹೋಗುವ ಅವಧಿ, ಫೋನ್ ನಂಬರ್ ಮಾಹಿತಿಯನ್ನು ಮನೆ ಮಾಲೀಕರು ನೀಡಬೇಕಾಗುತ್ತದೆ. ಈ ಪ್ರಯೋಜವನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-18-1226466031

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.