ಕೋಲಾರ: ಟಿಪ್ಪು ಸುಲ್ತಾನ್ ಅವರನ್ನು ಕೋಟೆಯೊಳಗಡೆ ಮುಗಿಸಿದ್ದೇ ಮೀರ್ ಸಾದಿಕ್. ನಮ್ಮಲ್ಲೂ ಕೆಲ ಮೀರ್ ಸಾದಿಕ್ಗಳಿದ್ದಾರೆ. ಕಾಂಗ್ರೆಸ್ನಲ್ಲಿ ನಸೀರ್ ಅಹಮದ್ ಹಾಗೂ ಜಮೀರ್ ಅಹಮದ್ ಕುದುರೆಗಳಂತೆ ಕೆಲಸ ಮಾಡುತ್ತಿದ್ದು, ಆ ಸ್ಥಾನಕ್ಕೆ ಕತ್ತೆಗಳನ್ನು ತರಲು ಪ್ರಯತ್ನ ನಡೆದಿದೆ. ಕುದುರೆಗೂ ಕತ್ತೆಗೂ ವ್ಯತ್ಯಾಸವಿಲ್ಲವೇ? ಆ ಕತ್ತೆಗಳಿಂದ ಈ ಸಮಾಜಕ್ಕೆ ಯಾವುದೇ ಪ್ರಯೋಜನ ಇಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ಹಾಗೂ ಶಾಸಕ ರಿಜ್ವಾನ್ ಅರ್ಷದ್ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಸೀರ್ ಅವರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತೆಗೆದರೆ, ಜಬ್ಬಾರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದರೆ ವೈಯಕ್ತಿಕ ಅವರಿಗೆ ನಷ್ಟವಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಹಾಗೂ ಮುಸ್ಲಿಂ ಸಮಾಜಕ್ಕೆ ನಷ್ಟವಾಗುತ್ತದೆ ಎಂಬುದನ್ನು ಮರೆಯಬಾರದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷ ಉಳಿಸಿಕೊಳ್ಳಲು ಮುಂದಾಗಬೇಕು’ ಎಂದರು.

ಕುದುರೆಗಳಂತೆ ಕೆಲಸ ಮಾಡುತ್ತಿರುವ ನಸೀರ್ ಹಾಗೂ ಜಮೀರ್ ಮೇಲೆ ದಾವಣಗೆರೆ ದಕ್ಷಿಣ ಉಪಚುನಾವಣೆಯ ನೆಪ ಇಟ್ಟುಕೊಂಡು ಪಕ್ಷ ವಿರೋಧಿ ಚಟುವಟಿಕೆಯ ಗೂಬೆ ಕೂರಿಸುವುದು ಎಷ್ಟರ ಮಟ್ಟಿಗೆ ಸರಿ? ಯಾವುದೇ ಬಲವಾದ ಕಾರಣ ಇಲ್ಲದೆ ಆರೋಪ ಮಾಡಿ ನಸೀರ್ ಅವರನ್ನು ಕೆಳಗಿಳಿಸಲಾಗಿದೆ. ಇದು ಕೇವಲ ಅವರೊಬ್ಬರ ಮೇಲಲ್ಲ; ಇಡೀ ಸಮಾಜದ ಮೇಲೆ ಮಾಡುತ್ತಿರುವ ಆರೋಪ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಸೀರ್ 50 ವರ್ಷಗಳಿಂದ ನಿಷ್ಠಾವಂತರಾಗಿ, ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 130 ಸ್ಥಾನ ಪಡೆಯಲು ನಸೀರ್ ಹಾಗೂ ಜಮೀರ್ ರಾಜ್ಯದೆಲ್ಲೆಡೆ ಸುತ್ತಾಡಿ ಅಲ್ಪಸಂಖ್ಯಾತರ ಶೇ 90 ರಷ್ಟು ಮತ ಸೆಳೆದಿರುವುದೇ ಕಾರಣ. ಅಲ್ಪಸಂಖ್ಯಾತರು ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದು, ಸಮಸ್ಯೆ ಇದ್ದಾಗಲೆಲ್ಲಾ ಸ್ಪಂದಿಸುತ್ತಿದ್ದರು. ಎರಡೂ ಜಿಲ್ಲೆಯ ಅಲ್ಪಸಂಖ್ಯಾತರ ಇಲಾಖೆಗೆ ₹ 100 ಕೋಟಿಗೂ ಅಧಿಕ ಅನುದಾನ ಕೊಡಿಸಿದ್ದಾರೆ ಎಂದು ತಿಳಿಸಿದರು.

ಇತಿಹಾಸದಲ್ಲಿ ಎಂದಿಗೂ ಅಲ್ಪಸಂಖ್ಯಾತರ ಧರ್ಮಗುರುಗಳು ರಾಜಕೀಯದಲ್ಲಿ ಪಾಲ್ಗೊಂಡಿದ್ದು ಇಲ್ಲ. ಆದರೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಸ್ಲಿಮರ ಮೀಸಲಾತಿ ಗೊಂದಲ, ಹಿಜಾಬ್, ಹಲಾಲ್ ವಿಚಾರಗಳಿಂದಾಗಿ ದನಿ ಎತ್ತಿದರು. ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಲು ಮುಂದಾದರು. ಈ ಸಂಬಂಧ ನಸೀರ್ ಹಾಗೂ ಜಮೀರ್ ಧರ್ಮಗುರುಗಳನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ನಮ್ಮ ಸಮಾಜಕ್ಕೆ ರಕ್ಷಣೆ ಸಿಗುತ್ತದೆ, ರಾಜ್ಯದಲ್ಲಿ ಶಾಂತಿ ನೆಲೆಸುತ್ತದೆ ಎಂದು ಮುಸ್ಲಿಂ ಸಮುದಾಯವು ಮತ ನೀಡಿತು. ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಮೇಲೆ ಇಟ್ಟ ನಂಬಿಕೆ ಈಗ ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ರಚನೆಯಾದಾಗ ನಸೀರ್ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಭಾವಿಸಲಾಗಿತ್ತು. ಸಮುದಾಯದ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿದರೂ ಸಹಿಸಿಕೊಂಡೆವು. ಅದಾದ ಬಳಿಕ ನಸೀರ್ ಅವರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳಲಾಯಿತು ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-18-1653218580

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.