ಕೋಲಾರ: ಕೋಲಾರ ಹಾಲು ಒಕ್ಕೂಟದಲ್ಲಿ ₹ 300 ಕೋಟಿ ಅಕ್ರಮ ನಡೆದಿದೆ ಎಂಬ ಆರೋಪವನ್ನು ಮಾಜಿ ಶಾಸಕ ಬಿಜೆಪಿಯ ಕೆ.ಎಸ್.ಮಂಜುನಾಥಗೌಡ ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಅವರನ್ನು ಎರಡನೇ ಬಾರಿ ಶಾಸಕರನ್ನಾಗಿಸಲು ಶ್ರಮಿಸುವೆ ಎಂದು ಕೋಮುಲ್ ಅಧ್ಯಕ್ಷ ಹಾಗೂ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಸವಾಲು ಹಾಕಿದರು.

ತಾಲ್ಲೂಕಿನ ಬೆಳಗಾನಹಳ್ಳಿಯಲ್ಲಿ ಕೋಮುಲ್ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾನು ಶಾಸಕನಾದಾಗಿನಿಂದ ಮಂಜುನಾಥಗೌಡ ಇಲ್ಲಸಲ್ಲದ ಆರೋಪ ಮಾಡಿಕೊಂಡು ಬರುತ್ತಿದ್ದಾರೆ. ಚುನಾವಣೆಗೆ ಎರಡು ವರ್ಷವಿರುವಾಗ ಮತ್ತೆ ತಮ್ಮ ಚಾಳಿ ಶುರುವಿಟ್ಟುಕೊಂಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವವರು ಜವಾಬ್ದಾರಿಯಿಂದ ವರ್ತಿಸಬೇಕು. ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಮಾಲೂರು ಕ್ಷೇತ್ರದ ಜನರು ಇಂಥ ವ್ಯಕ್ತಿಗಳನ್ನು ಒಪ್ಪುವುದಿಲ್ಲ’ ಎಂದರು.

ಕೋಲಾರ ಹಾಲು ಒಕ್ಕೂಟಕ್ಕೆ ಸಂಬಂಧಿಸಿದಂತೆ ಗೂಳಿಗಾನಹಳ್ಳಿ ನಾಗರಾಜ್ ಎಂಬುವರ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ಬಂದು ಮೂರು ದಿನ ದಾಖಲೆ ಪರಿಶೀಲಿಸಿದ್ದಾರೆ. ಎಲ್ಲಾ ರೀತಿಯ ಸಹಕಾರ ನೀಡಲಾಗಿದೆ. ಎಲ್ಲಾ ದಾಖಲೆ ನೀಡುವಂತೆ ನಾನೇ ಒಕ್ಕೂಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ ಎಂದು ಹೇಳಿದರು.

ರಾಜ್ಯದಲ್ಲಿ ಮಂಗಳೂರು ಹೊರತುಪಡಿಸಿ ಹಾಲು ಉದ್ಪಾದಕರಿಗೆ ಅತಿ ಹೆಚ್ಚು ದರ ನೀಡುತ್ತಿರುವ ಒಕ್ಕೂಟ ಕೋಮುಲ್. ನಮ್ಮ ಆಡಳಿತ ಮಂಡಳಿ ಬಂದ ಮೇಲೆ ಒಟ್ಟು ₹ 6 ದರ ಹೆಚ್ಚಿಸಿದ್ದೇವೆ. ಒಕ್ಕೂಟ ವಿಭಜನೆ ಆದಾಗ ವಾರ್ಷಿಕ ವಹಿವಾಟು ₹ 1,374 ಕೋಟಿ ಇತ್ತು. ನಾನು ಅಧ್ಯಕ್ಷನಾದ ಮೇಲೆ ₹ 1,537 ಕೋಟಿ ತಲುಪಿದೆ. ಇದು ನಮ್ಮ ಸಾಧನೆ ಎಂದು ತಮ್ಮ ಅವಧಿಯ ಕೆಲಸ ಕಾರ್ಯಗಳನ್ನು ವಿವರಿಸಿದರು.

ಮಂಜುನಾಥಗೌಡರ ದೊಡ್ಡಸ್ತಿಕೆ, ಗೌರವದಿಂದ ಕಾಣದ ಗುಣವಿರುವ ಕಾರಣ ಆತನನ್ನು ಬಿಟ್ಟು ಹೊರ ಬಂದು ನಾನು ಶಾಸಕನಾದೆ. ಅವರು ಸುಮ್ಮನೇ ನನ್ನನ್ನು ನ್ಯಾಯಾಲಯಗಳಿಗೆ ಅಲೆಸಿದ್ದಾರೆ. ಈಗ ಏನಾಯಿತು? 2028 ರ ಚುನಾವಣೆಗೆ ಅವರನ್ನು ಸ್ವಾಗತಿಸುವೆ ಎಂದರು.

ಶಾಸಕರು ಮಸಾಜ್ಗೆ ಹೋಗುತ್ತಾರೆ, ಬೋಗಸ್ ಕಂಪನಿಗಳಿವೆ, ಬಿಲ್ಗಳು ಮಾಡುತ್ತಾರೆ ಎಂದೆಲ್ಲಾ ಆರೋಪಿಸಿದ್ದಾರೆ. ನಾನು ರೈತ ಕುಟುಂಬದವನು, ನನಗೆ ಮಸಾಸ್ ಗೊತ್ತಿಲ್ಲ. ಬೋಗಸ್ ಕಂಪನಿ, ಬಿಲ್ ಮಾಡುವುದು ಅವರಿಗೆ ಸಂಬಂಧಪಟ್ಟರು ಎಂದು ತಿರುಗೇಟು ನೀಡಿದರು.

ನಮ್ಮ ನಿರ್ದೇಶಕರು ಅಮಾಯಕರು ಎಂಬುದಾಗಿ ಹೇಳಿದ್ದಾರೆ. ಆದರೆ, ಅವರಿಗಿಂತ ಜೋರಾಗಿಯೇ ಇದ್ದಾರೆ. ಹಲವಾರು ಬಾರಿ ನಿರ್ದೇಶಕರು, ಅಧ್ಯಕ್ಷರೂ ಆಗಿರುವ ಎಂ.ವಿ.ಕೃಷ್ಣಪ್ಪ ಅವರ ಪುತ್ರ, ಕಾಡೇನಹಳ್ಳಿ ನಾಗರಾಜ್, ಹನುಮೇಶ್ ಅವರಂಥ ಘಟಾನುಘಟಿಗಳಿದ್ದಾರೆ ಎಂದರು.

ಡೇರಿಯಿಂದ ಪ್ರತಿದಿನ ನನ್ನ ಹೆಸರಲ್ಲಿ ಸಂಬಂಧಿಕರಿಗೆ ₹ 10 ಲಕ್ಷ ಡ್ರಾ ಆಗುತ್ತದೆ ಎಂಬ ಆರೋಪವನ್ನೂ ಮಂಜುನಾಥಗೌಡ ಮಾಡಿದ್ದಾರೆ. 12 ವರ್ಷಗಳಿಂದ ಅಲ್ಲ; ಡೇರಿ ಆರಂಭವಾದಾಗಿಂದ ಮಾಡಿರುವ ಬ್ಯಾಂಕ್ ವರ್ಗಾವಣೆ ಮಾಹಿತಿ ಪಡೆಯಿರಿ. ಏನಾದರೂ ಸಿಕ್ಕರೆ ಹೇಳಲಿ ಎಂದು ಸವಾಲು ಹಾಕಿದರು.

ತಪ್ಪು ಮಾಡಿದ್ದರೆ ಕೋಮುಲ್ ಚುನಾವಣೆಯಲ್ಲಿ ಏಕೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದರು? ಅವರ ಅಭ್ಯರ್ಥಿಗಳು ಏನಾದರು? ಹಿರಿಯ ಮುಖಂಡ ಎಟ್ಟಕೋಡಿ ಕೃಷ್ಣಾರೆಡ್ಡಿ ಅವರಿಗೆ 10 ಮತಗಳೂ ಬರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಎಷ್ಟು ಮತಕೊಡಿಸಿದ್ದರು? ಮುಂದಿನ ದಿನಗಳಲ್ಲಿ ಅವರ ಜತೆಗಿರುವ ಅಮಾಯಕರ ಕಥೆ ಏನಾಗುತ್ತದೆಯೋ ನೋಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕೋಮುಲ್ ನಿರ್ದೇಶಕರಾದ ಚಂಜಿಮಲೆ ರಮೇಶ್, ಕೆ.ಕೆ.ಮಂಜುನಾಥ್, ಶ್ರೀನಿವಾಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-18-750883981

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.