ಕೋಲಾರ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಕೋಲಾರ ಜಿಲ್ಲೆಯು ಆರಕ್ಕೇರುವ ಲಕ್ಷಣಗಳೇ ಕಂಡುಬರುತ್ತಿಲ್ಲ. ಈ ಬಾರಿಯಾದರೂ ರ್ಯಾಂಕಿಂಗ್ ಸುಧಾರಿಸಬೇಕೆಂದು ನಡೆಸಿದ ಕಸರತ್ತು ಮತ್ತೆ ಕೈಕೊಟ್ಟಿದೆ.

ರಾಜ್ಯಮಟ್ಟದಲ್ಲಿ ಅಗ್ರ ಹತ್ತರೊಳಗಿನ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕೆಂಬ ಜಿಲ್ಲೆಯ ಜನರ ಕನಸು ಕನಸಾಗಿಯೇ ಉಳಿದಿದೆ. ಹತ್ತರೊಳಗಿನ ಸ್ಥಾನ ಕಂಡು ಹಲವು ವರ್ಷಗಳೇ ಆಗಿದೆ.

ಈ ಬಾರಿ ಶೇ 87.38 ಫಲಿತಾಂಶದೊಂದಿಗೆ ರಾಜ್ಯದಲ್ಲಿ 15ನೇ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ 1 ಸ್ಥಾನ ಮೇಲೇರಿದೆ. ಫಲಿತಾಂಶ ಪ್ರಮಾಣದಲ್ಲಿ ಪರವಾಗಿಲ್ಲ, ಆದರೆ ಸ್ಥಾನದಲ್ಲಿ ಅಂಥ ಜಿಗಿತವಾಗಿಲ್ಲ. ವೈಯಕ್ತಿಕವಾಗಿ ಜಿಲ್ಲೆಗೆ ವಿಜ್ಞಾನ ವಿಭಾಗದಲ್ಲಿ 4ನೇ ರ್ಯಾಂಕ್ (ಮದನ್ ಪಿ.) ಹಾಗೂ ವಾಣಿಜ್ಯ ವಿಭಾಗದಲ್ಲಿ 5ನೇ ರ್ಯಾಂಕ್ (ಚಿರಂತನಾ ಎಂ.) ಸಿಕ್ಕಿದ್ದು, ಉತ್ತಮ ಸಾಧನೆ ಮಾಡಿದ್ದಾರೆ. ಕಳೆದ ಸಲ ಶೇ 72.45 ಫಲಿತಾಂಶದೊಂದಿಗೆ 16ನೇ ಸ್ಥಾನಕ್ಕೆ ಕುಸಿದಿತ್ತು.

ಇದರೊಂದಿಗೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟದ ಸಾರ್ವಜನಿಕರು ಪ್ರಶ್ನೆ ಎತ್ತುತ್ತಿದ್ದಾರೆ. ಕಳಪೆ ಫಲಿತಾಂಶಕ್ಕೆ ಯಾರು ಕಾರಣ? ಯಾರು ಹೊಣೆ ಎಂಬ ಚರ್ಚೆ ನಡೆಯುತ್ತಿದೆ. ಪರೀಕ್ಷೆಗೆ ಮುನ್ನವೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ನೇತೃತ್ವದಲ್ಲಿ ನಡೆದ ಕೆಡಿಪಿಯ ಹಲವಾರು ಸಭೆಗಳಲ್ಲಿ ಚರ್ಚೆ ನಡೆದಿತ್ತು. ಇಲಾಖೆಯ ಅಧಿಕಾರಿಗಳಿಗೆ ಹಲವಾರು ಬಾರಿ ಚಾಟಿ ಬೀಸಿದ್ದೂ ಆಗಿದೆ. ಫಲಿತಾಂಶ ಮಾತ್ರ ಸುಧಾರಿಸುತ್ತಿಲ್ಲ.

ಪಿಯು ಫಲಿತಾಂಶದಲ್ಲಿ ಬಹಳ ಹಿಂದುಳಿದಿರುವ ಜಿಲ್ಲೆಯ ರ್ಯಾಂಕಿಂಗ್ ಸುಧಾರಿಸಲು ಈ ಬಾರಿ ಜಿಲ್ಲಾಧಿಕಾರಿ ಎಂ.ಆರ್.ರವಿ ಅಖಾಡಕ್ಕಿಳಿದಿದ್ದರು. ಅವರ ನೇತೃತ್ವದಲ್ಲಿ ಹಲವಾರು ಸಭೆ, ಕಾರ್ಯಾಗಾರ ನಡೆದಿದ್ದವು. ಕನಿಷ್ಠ ಹತ್ತು ಸ್ಥಾನದೊಳಗೆ ಕಾಣಿಸಿಕೊಳ್ಳಬೇಕೆಂದು ಗುರಿ ನಿಗದಿಪಡಿಸಿದ್ದರು. ಡಿಡಿಪಿಯು ರಾಜಶೇಖರ್ ಪಟ್ಟಣಶೆಟ್ಟಿ ಕೂಡ ಸವಾಲಾಗಿ ಸ್ವೀಕರಿಸಿ ಸಾಕಷ್ಟು ಪ್ರಯತ್ನ ಹಾಕಿದ್ದರು. ವಿಶೇಷ ತರಗತಿ, ಹೆಚ್ಚುವರಿ ತರಗತಿ, ಪರಿಹಾರ ಬೋಧನೆ, ಸೇತುಬಂಧ ಕೋರ್ಸ್, ಗುಂಪು ಅಧ್ಯಯನ ನಡೆಸಲಾಗಿತ್ತು. ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸಿ ಮಕ್ಕಳನ್ನು ಸಜ್ಜುಗೊಳಿಸಲಾಗಿತ್ತು. ಆದರೆ, ಆ ಕಸರತ್ತು ಸಾಕಾಗಿಲ್ಲ.

‘ಪೂರ್ವಸಿದ್ಧತಾ ಎರಡು ಪರೀಕ್ಷೆ ನಡೆಸಿದ್ದು, ಉತ್ತಮ ಫಲಿತಾಂಶ ಬಂದಿತ್ತು. ಹೀಗಾಗಿ, ಅಗ್ರ ಹತ್ತರೊಳಗಿನ ಸ್ಥಾನ ಪಡೆಯುವ ವಿಶ್ವಾಸವಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಮುಂದೆ ಉತ್ತಮ ಫಲಿತಾಂಶ ಪಡೆಯಲು ನಿರಂತರ ಪ್ರಯತ್ನ ಹಾಕುತ್ತೇವೆ’ ಎಂದು ಡಿಡಿಪಿಯು ರಾಜಶೇಖರ್ ಪಟ್ಟಣಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲಿ ಎಡವಟ್ಟು ಸಂಭವಿಸುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಈ ಬಗ್ಗೆ ಸಮಿತಿ ರಚಿಸಿ ಅವಲೋಕನ ಮಾಡಬೇಕಿದೆ ಎಂಬುದಾಗಿ ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಫೆಬ್ರುವರಿ 28 ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆದಿತ್ತು. ಜಿಲ್ಲೆಯಲ್ಲಿ ಈ ಬಾರಿ 12,823 ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ 11,205 ಮಂದಿ ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶಕ್ಕೆ (ಶೇ 86.14) ಹೋಲಿಸಿದರೆ ಈ ಬಾರಿಯೂ ಗ್ರಾಮೀಣ ಪ್ರದೇಶದ (ಶೇ 89.06) ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರು ಶೇ 84.5 ಅಂಕಗಳೊಂದಿಗೆ ಈ ವರ್ಷವೂ ಬಾಲಕರನ್ನು (ಶೇ 77.95) ಮೀರಿಸಿದ್ದಾರೆ.

ಏ.30ರಿಂದ ಮೇ 13ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ–2 ನಡೆಯಲಿದೆ. ಪರೀಕ್ಷೆ–1ರಲ್ಲಿ ಅನುತ್ತೀರ್ಣರಾದವರು ಹಾಗೂ ಅಂಕ ಸುಧಾರಣೆ ಮಾಡಿಕೊಳ್ಳುವವರು ಈ ಪರೀಕ್ಷೆ ಬರೆಯಲು ಅವಕಾಶವಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-18-993001797

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.