ಕೋಲಾರ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುದ್ಧ ಕುಡಿಯುವ ನೀರಿನ ಬಹುತೇಕ ಖಾಸಗಿ ಘಟಕಗಳು ಪರವಾನಗಿ ಪಡೆಯದೆ ನೀರು ಪೂರೈಕೆಯಲ್ಲಿ ತೊಡಗಿರುವುದು ಗೊತ್ತಾಗಿದೆ. ಹೀಗಾಗಿ, ಈ ಘಟಕಗಳಲ್ಲಿನ ನೀರಿನ ಶುದ್ಧತೆ, ಸುರಕ್ಷತೆ, ಗುಣಮಟ್ಟ ಹಾಗೂ ನೈರ್ಮಲ್ಯದ ಬಗ್ಗೆ ಸಾರ್ವಜನಿಕರಲ್ಲಿ ಪ್ರಶ್ನೆಗಳು ಉದ್ಭವಿಸಿವೆ.

ಹೀಗಾಗಿ, ಕುಡಿಯುವ ನೀರಿನ ಘಟಕಗಳಲ್ಲಿ ಸ್ವಚ್ಛತೆ ಕಾಪಾಡದ ಮತ್ತು ಕಲಬೆರಕೆ ನೀರು ಪೂರೈಸುವವರ ವಿರುದ್ಧ ಜಿಲ್ಲಾಡಳಿತ ಸಮರ ಸಾರಿದೆ.

ಬಿಸಿಲು ಹೆಚ್ಚುತ್ತಿರುವಂತೆ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಹಣ ಪಡೆದು ಗ್ರಾಹಕರಿಗೆ ಟ್ಯಾಂಕರ್ಗಳ ಮೂಲಕವೂ, ಘಟಕದ ಬಳಿ ಬಾಟಲಿ, ಕ್ಯಾನ್, ಕೊಡಗಳಲ್ಲಿ ನೀರು ವಿತರಣೆಯಲ್ಲಿ ಘಟಕಗಳ ಮಾಲೀಕರು ತೊಡಗಿದ್ದಾರೆ.

ಒಂದೆರಡು ಘಟಕಗಳಲ್ಲಿ ನೀರು ಕಲಬೆರಕೆಯಾಗಿರುವ ಪ್ರಕರಣ ಪತ್ತೆಯಾಗಿರುವುದಾಗಿ ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದ್ದಾರೆ.

ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳು ಈಚೆಗೆ ಒಂದೆರಡು ಹೋಟೆಲ್ಗಳ ಮೇಲೆ ದಾಳಿ ನಡೆಸಿದಾಗ ನೀರು ಕಳಪೆ ಗುಣಮಟ್ಟದಿಂದ ಕೂಡಿರುವುದು ಹಾಗೂ ವಿಷಕಾರಕ ಅಂಶ ಇರುವುದು ಕಂಡುಬಂದಿದೆ. ಆ ಹೋಟೆಲ್ಗಳಿಗೆ ನೀರು ಪೂರೈಕೆ ಮಾಡುತ್ತಿರುವವರನ್ನೂ ಪತ್ತೆ ಹಚ್ಚಿ ಪರಿಶೀಲಿಸಿದ್ದಾರೆ. ಈಗಾಗಲೇ ಒಂದು ಆರ್ಒ ಘಟಕವನ್ನು ಮುಚ್ಚಿಸಿದ್ದಾರೆ.

ಎಫ್ಎಸ್ಎಸ್ಎಐ ಪರವಾನಗಿ ಪಡೆದಿರುವ ಜಿಲ್ಲೆಯ 16 ಘಟಕಗಳನ್ನು ಆಹಾರ ಸುರಕ್ಷಾ ಇಲಾಖೆ ಅಧಿಕಾರಿಗಳು ಗುರುತಿಸಿದ್ದಾರೆ. ಆದರೆ, ಸುಮಾರು 32 ಶುದ್ಧ ಕುಡಿಯುವ ನೀರಿನ ಘಟಕಗಳು ಈವರೆಗೆ ಪರವಾನಗಿ ಪಡೆದೇ ಇಲ್ಲ.

ಅನುಮತಿ ಪಡೆಯದೆ ಕಾರ್ಯನಿರ್ವಹಿಸುತ್ತಿರುವ ಶುದ್ಧ ಕುಡಿಯುವ ನೀರು ಘಟಕಗಳನ್ನು ತಕ್ಷಣವೇ ಬಂದ್ ಮಾಡಲು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

‘ಕಳಪೆ ಗುಣಮಟ್ಟದ ನೀರು ಸಂಗ್ರಹ ಮಾಡುವವರ ಹಾಗೂ ಶುದ್ಧೀಕರಣಗೊಳಿಸದೆ ಪೂರೈಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಈಗಾಗಲೇ ಕಾರ್ಯಾಚರಣೆ ಆರಂಭವಾಗಿದ್ದು, ಮತ್ತಷ್ಟು ತೀವ್ರಗೊಳಿಸುತ್ತೇವೆ. ಹಾಲು, ನೀರಿನ ವಿಚಾರದಲ್ಲಿ ಜನರ ಜೊತೆ ಚೆಲ್ಲಾಟವಾಡಿದರೆ ಸಹಿಸುವುದಿಲ್ಲ’ ಎಂದು ಎಂ.ಆರ್.ರವಿ ಹೇಳಿದರು.

ಜಿಲ್ಲೆಯ ವಿವಿಧೆಡೆ ಮಾರಾಟ ಮಾಡುತ್ತಿರುವ ಕೆಲ ಬ್ರ್ಯಾಂಡ್ಗಳ ಬಾಟಲಿ ನೀರು ಕುಡಿಯಲು ಯೋಗ್ಯವಾಗಿಲ್ಲ, ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ವರದಿಗಳು ಬರುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿವೆ.

ಶ್ರೀನಿವಾಸಪುರದಲ್ಲಿ ಬಾಟಲಿ ಘಟಕಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಒಂದು ಕಡೆ ನೀರು ಕುಡಿಯಲು ಅಸುರಕ್ಷಿತ ಎಂಬ ವರದಿ ಬಂದಿದ್ದರೆ, ಮತ್ತೊಂದು ಕಡೆ ಕಳಪೆ ಗುಣಮಟ್ಟದಿಂದ ಕೂಡಿರುವುದು ಪತ್ತೆಯಾಗಿತ್ತು.

ಹಾಲು ಕಳಪೆ ಗುಣಮಟ್ಟ: ಹಾಲಿನ ಕಲಬೆರಕೆ ದಂಧೆಯೂ ನಡೆಯುತ್ತಿದೆ. ಈಗಾಗಲೇ ದಾಳಿ ನಡೆಸಿ ಜಿಲ್ಲೆಯಾದ್ಯಂತ ಸಂಗ್ರಹಿಸಲಾಗಿದ್ದ ಒಟ್ಟು 48 ಹಾಲಿನ ಮಾದರಿಗಳ ಪೈಕಿ 18ರಲ್ಲಿ ಕಡಿಮೆ ಗುಣಮಟ್ಟ ಇರುವುದು ಪತ್ತೆಯಾಗಿದೆ. ಸಂಬಂಧಿಸಿದ ಹಾಲಿನ ಸಂಗ್ರಹ ಮತ್ತು ಶೇಖರಣಾ ಕೇಂದ್ರಗಳ ಮಾಲೀಕರು, ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-18-1889248526

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.