ವೇಮಗಲ್: ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಕಲ್ಲಹಳ್ಳಿ ಗ್ರಾಮ ಗಂಗರು ಮತ್ತು ವಿಜಯನಗರ ಅರಸರ ಕಾಲದ ಐತಿಹಾಸಿಕ ಪರಂಪರೆ ಹೊಂದಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಉದಾಸೀನತೆಯಿಂದ ಇಡೀ ಊರು ಹಾಳಾಗಿದೆ.

ಸುಮಾರು 1,500 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಎಲ್ಲೆಡೆ ಕಸದ ರಾಶಿಯೇ ತುಂಬಿದೆ. ಚರಂಡಿಗಳು ತುಂಬಿ ತುಳುಕುತ್ತಿದ್ದು, ಕೊಳಚೆ ನೀರಿನ ದುರ್ವಾಸನೆಯಿಂದ ಜನರು ಹೈರಾಣಾಗಿದ್ದಾರೆ.

ಗ್ರಾಮದ ಹೃದಯಭಾಗದಲ್ಲಿರುವ ಐತಿಹಾಸಿಕ ಕಲ್ಯಾಣಿ ಕೊಳಚೆ ನೀರು ಸಂಗ್ರಹಿಸುವ ಗುಂಡಿಯಾಗಿ ಮಾರ್ಪಟ್ಟಿದೆ. ಕುಂಟೆ ಒಂದು ಬದಿಯಲ್ಲಿ ದೇವಸ್ಥಾನ, ಇನ್ನೊಂದು ಬದಿಯಲ್ಲಿ ಆರೋಗ್ಯ ಉಪ ಕೇಂದ್ರ, ಮತ್ತೊಂದು ಮಗ್ಗುಲಲ್ಲಿ ಹಾಲಿನ ಡೇರಿ ಇದೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿರುವ ಈ ಕುಂಟೆಯಿಂದ ಮಲೇರಿಯಾ, ಡೆಂಗಿ ಭೀತಿ ಆವರಿಸಿದೆ.

1923ರಲ್ಲಿ ಮೈಸೂರು ಸಂಸ್ಥಾನದ ಕಾಲದಲ್ಲಿ ಪ್ರಾರಂಭವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದೆಯೇ ಚರಂಡಿ ಕುಸಿದು ಬಿದ್ದಿದೆ. ಶಾಲಾ ಮಕ್ಕಳು ಪ್ರತಿದಿನ ಇದರಲ್ಲಿ ಬೀಳುವ ಭಯದಲ್ಲೇ ಓಡಾಡಬೇಕಾಗಿದೆ. ಇನ್ನು ಗ್ರಾಮದ ಏಕೈಕ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಒಂದು ವಾರದಿಂದ ನಿಷ್ಕ್ರಿಯಗೊಂಡಿದ್ದು, ಗ್ರಾಮಸ್ಥರು ಒಂದು ಕೊಡ ನೀರಿಗಾಗಿ ಪಕ್ಕದ ಗ್ರಾಮಗಳನ್ನೇ ಅವಲಂಬಿಸುವಂತಾಗಿದೆ.

ಹಿಂದೆ ರಾಜರ ದಂಡಯಾತ್ರೆ ಪ್ರಮುಖ ತಂಗುದಾಣವಾಗಿದ್ದ ಈ ಗ್ರಾಮದಲ್ಲಿ ಇಂದಿಗೂ ವೀರಗಲ್ಲು ಮತ್ತು ಶಾಸನಗಳು ಅನಾಥವಾಗಿ ನಿಂತಿವೆ. ಚರಂಡಿಗಳ ದುರಸ್ತಿ, ಕಲ್ಯಾಣಿ ಪುನಶ್ಚೇತನ ಮತ್ತು ಗ್ರಾಮದ ನೈರ್ಮಲ್ಯ ಕಾಪಾಡುವಂತೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-18-500944180

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.