ಕೋಲಾರ: ಕೃಷಿಕರು, ಹೈನುಗಾರರು ಹೆಚ್ಚಿರುವ ಬಯಲುಸೀಮೆ ಕೋಲಾರದ ಐವರು ಅಭ್ಯರ್ಥಿಗಳು ಈ ಬಾರಿ ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಮಂದಿ ಪಾಸ್ ಆದ ಹೆಗ್ಗಳಿಕೆಗೆ ಜಿಲ್ಲೆ ಪಾತ್ರವಾಗಿದೆ.

ಪುಟ್ಟ ಜಿಲ್ಲೆಯ ಇಷ್ಟೊಂದು ಅಭ್ಯರ್ಥಿಗಳು ಉತ್ತೀರ್ಣರಾಗಿ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸಿದ್ದಾರೆ. ಈ ಮೂಲಕ ನಾಗರಿಕ ಸೇವಾ ಪರೀಕ್ಷೆಯಲ್ಲಿನ ಗತಕಾಲದ ವೈಭವವನ್ನು ಮರುಸ್ಥಾಪಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಿಲ್ಲೆಯ ಹಿರಿಮೆಯನ್ನು ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ.

ಈ ಬಾರಿ ರಾಜ್ಯದ 25 ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಕೋಲಾರ ಮೊದಲ ಸ್ಥಾನದಲ್ಲಿದೆ. ಈ ಜಿಲ್ಲೆಯ ಐವರು ರ್ಯಾಂಕ್ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿರುವ ಯಾದಗಿರಿ ಹಾಗೂ ಬೆಳಗಾವಿ ಜಿಲ್ಲೆಯ ತಲಾ ನಾಲ್ವರು ರ್ಯಾಂಕ್ ಗಳಿಸಿದ್ದಾರೆ. ಬೆಳಗಾಗಿ, ಮಂಡ್ಯ, ಬೆಂಗಳೂರಿನ ತಲಾ ಇಬ್ಬರು ಇದ್ದಾರೆ.

ಒಂದೂ ನದಿ ಮೂಲ ಇಲ್ಲದ, ಕೊಳವೆಬಾವಿ ಹಾಗೂ ಕೆರೆ ನಂಬಿಕೊಂಡೇ ಬದುಕು ಕಟ್ಟಿಕೊಂಡಿರುವ ರೈತಾಪಿ ಸಮುದಾಯದ ಈ ಜಿಲ್ಲೆಯ ಹಳ್ಳಿಗಳ ಹುಡುಗರೇ ಈ ಬಾರಿ ರ್ಯಾಂಕ್ ಪಡೆದ ಸಾಧನೆ ಮಾಡಿದ್ದಾರೆ.

ಕೋಲಾರ ತಾಲ್ಲೂಕಿನ ಇರಗಸಂದ್ರ ಗ್ರಾಮದ ಎ.ಮಧು (436), ತ್ಯಾವನಹಳ್ಳಿ ಗ್ರಾಮದ ವರುಣ್ ಗೌಡ ಪಿ.(462), ಮೇಡಿತಂಬಹಳ್ಳಿ ಗ್ರಾಮದ ಎಂ.ಎಸ್.ಉಲ್ಲಾಸ್ (556), ಶಾನುಭೋಗನಹಳ್ಳಿ ಗ್ರಾಮದ ಸಾಗರ್.ಎ (641) ಹಾಗೂ ಬಂಗಾರಪೇಟೆಯ ತೌಸಿಫ್ ಉಲ್ಲಾ ಖಾನ್ (741) ರ್ಯಾಂಕ್ ಪಡೆದವರು.

ಇವರೆಲ್ಲರೂ ಸಾಮಾನ್ಯ ಕುಟುಂಬದವರಿಂದ ಬಂದವರು. ಎ.ಮಧು ಸತತ ಆರು ಬಾರಿ ಪ್ರಯತ್ನ ಹಾಕಿ ಈ ಸಾಧನೆ ಮಾಡಿದ್ದಾರೆ. ಇವರ ತಂದೆ ಆನಂದ್ ಗೌಡ ಹಾಗೂ ತಾಯಿ ಸುಶೀಲಮ್ಮ ಕೃಷಿಕರು. ತರಕಾರಿ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಡಾ.ವರುಣ್ ಗೌಡ ತಂದೆ ಪ್ರಕಾಶ್ ಗೌಡ ಕಾನ್ಸ್ಟೆಬಲ್ ಆಗಿದ್ದವರು, ಈಗ ಎಎಸ್ಐ ಆಗಿ ಕೆಲಸ ಮಾಡುತ್ತಿದ್ದಾರೆ. ಕಷ್ಟಪಟ್ಟು ಪುತ್ರನನ್ನು ಓದಿಸಿದ್ದಾರೆ. ಯುಪಿಎಸ್ಸಿಗೆ ಸಿದ್ಧತೆ ನಡೆಸಲು ವರುಣ್ ಡಾಕ್ಟರ್ ಹುದ್ದೆಯನ್ನೇ ಬಿಟ್ಟಿದ್ದಾರೆ.

ತೌಸಿಫ್ ಉಲ್ಲಾ ಖಾನ್ ಅವರು ಕಾಲೇಜಿನ ಶುಲ್ಕ ಕಟ್ಟಲೂ ಕಷ್ಟಪಟ್ಟವರು. ಅವರ ತಾಯಿ ಚಿನ್ನ ಅಡವಿಟ್ಟು ಓದಿಸಿದ್ದಾರೆ. ಎಂ.ಎಸ್.ಉಲ್ಲಾಸ್ ಅವರ ತಂದೆ ಎಂ.ಎಚ್.ಶ್ರೀನಿವಾಸ್ ಪಿಎಲ್ಡಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ, ತಾಯಿ ಸುಜಾತಾ ವಿಟ್ಟಪ್ಪನಹಳ್ಳಿ ಸರ್ಕಾರಿ ಶಾಲಾ ಶಿಕ್ಷಕಿ. ಸಾಧಕ ಸಾಗರ್.ಎ ಪೋಷಕರಾದ ಅಶ್ವಥಪ್ಪ ಹಾಗೂ ಸುಶೀಲಮ್ಮ ಕೃಷಿಕರು. ಹೀಗೆ, ಐವರೂ ಕಷ್ಟಪಟ್ಟು ಬೆಳೆದು ಮೇಲೆ ಬಂದವರು.

ಕಳೆದ ವರ್ಷ ಇಬ್ಬರು ರ್ಯಾಂಕ್ ಪಡೆದಿದ್ದರು. ಕೋಲಾರದಲ್ಲಿ ಹಿಂದೆ ಜಿಲ್ಲಾಧಿಕಾರಿ ಆಗಿದ್ದ ದಿವಂಗತ ಡಿ.ಕೆ.ರವಿ ಅವರೇ ತಮಗೆ ಸ್ಫೂರ್ತಿ ಎಂಬುದಾಗಿ ಡಾ.ಆರ್.ಮಾಧವಿ ಹೇಳಿದ್ದರು. 446ನೇ ರ್ಯಾಂಕ್ ಪಡೆದಿದ್ದ ಅವರು ಶ್ರೀನಿವಾಸಪುರ ಪಟ್ಟಣದ ಶಿಕ್ಷಕ ದಂಪತಿ ಪುತ್ರಿ.

ಕೋಲಾರ ತಾಲ್ಲೂಕಿನ ಕೆಂಬೋಡಿ ಗ್ರಾಮದ ಕೆ.ಆರ್.ನಂದಿನಿ 2016ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದರು. ಅದು ನಾಗರಿಕ ಸೇವಾ ಪರೀಕ್ಷೆಯಲ್ಲಿ ಜಿಲ್ಲೆಯ ಅತಿದೊಡ್ಡ ಸಾಧನೆ ಮತ್ತು ಹೊಸ ತಿರುವು. ಅವರು ಕೂಡ ರೈತ ಕುಟುಂಬದವರು, ಶಿಕ್ಷಕ ದಂಪತಿ ಪುತ್ರಿ. ಅವರೀಗ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಯುವಪೀಳಿಗೆಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

ಕೆಎಎಸ್ ಎಂದರೆ ಕೋಲಾರ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ ಎಂಬುದು ಜಿಲ್ಲೆಗೆ ಅನ್ವರ್ಥನಾಮವಾಗಿತ್ತು. ಏಕೆಂದರೆ ವಿವಿಧ ಇಲಾಖೆಗಳಲ್ಲಿ ಜಿಲ್ಲೆಯವರೇ ಹೆಚ್ಚಿನ ಅಧಿಕಾರಿಗಳು ಇದ್ದರು. ಈಗ ಕೋಲಾರದಿಂದ ಆಯ್ಕೆಯಾಗುವ ಯುಪಿಎಸ್ಸಿ, ಕೆಪಿಎಸ್ಸಿ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವಾಗ ಈಗ ಮತ್ತೊಮ್ಮೆ ಆಶಾಭಾವನೆ ಮೂಡಿದೆ.

ದೇಶ ಹಾಗೂ ರಾಜ್ಯಕ್ಕೆ ಕೋಲಾರ ಹಲವಾರು ಕೊಡುವೆ ನೀಡಿದೆ. ಬರೀ ಚಿನ್ನವನ್ನಷ್ಟೇ ಕೊಟ್ಟಿಲ್ಲ; ಚಿನ್ನದಂಥ ಸಾಧನೆಯನ್ನೂ ಮಾಡಿದೆ. ಮೊದಲ ಮುಖ್ಯಮಂತ್ರಿ ನೀಡಿದ ಜಿಲ್ಲೆ ಕೂಡ. ಅಲ್ಲದೇ, ಕೆಎಎಸ್, ಐಎಎಸ್ ಅಧಿಕಾರಿಗಳು, ನ್ಯಾಯಾಧೀಶರು ನೂರಾರು ಮಂದಿ ಇದ್ದಾರೆ.

ನಮ್ಮ ಕೋಲಾರ ನಮ್ಮ ಹೆಮ್ಮೆ

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸಿ.ಮುನಿಸ್ವಾಮಿ ಅವರಂಥ ಅಧಿಕಾರಿಗಳನ್ನು ನೀಡಿದ ಜಿಲ್ಲೆ ಕೋಲಾರ. ಕೆ.ಆರ್.ನಂದಿನಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಮೊದಲ ರ್ಯಾಂಕ್ ಪಡೆದ ಸಾಧನೆ ಮಾಡಿದವರು. ಕಳೆದ 10 ವರ್ಷಗಳಲ್ಲಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಜಿಲ್ಲೆಯು ಹಿಂದೆ ಉಳಿದಿದ್ದು ಒಂದಿಬ್ಬರ ಹೆಸರು ಕಾಣಿಸಿಕೊಳ್ಳುತಿತ್ತು. ಈ ನಿಟ್ಟಿನಲ್ಲಿ ನಾಗರಿಕ ಸೇವಾ ಪರೀಕ್ಷೆ ಕುರಿತು ಪ್ರಜ್ಞೆ ಮೂಡಿಸಲು ನಾವು ಕೂಡ ಕೋಲಾರದಲ್ಲಿ ಡಿಎಂಆರ್ ಫೌಂಡೇಷನ್ ಶುರು ಮಾಡಿದೆವು. ಈ ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಐವರು ಪಾಸ್ ಆಗಿದ್ದು ಬಹಳ ಪರಿಶ್ರಮ ಹಾಕಿದ್ದಾರೆ. ಇಡೀ ರಾಜ್ಯದಲ್ಲಿ ಕೋಲಾರ ಜಿಲ್ಲೆಯವರೇ ಹೆಚ್ಚಿನ ಸಾಧಕರಿದ್ದಾರೆ. ನಮ್ಮ ಕೋಲಾರ ನಮ್ಮ ಹೆಮ್ಮೆ. ಪ್ರತಿ ಸಾಧನೆಯು ನನಗೆ ಖುಷಿಕೊಡುತ್ತದೆ. ಇವರೆಲ್ಲಾ ಒಂದೆರಡು ಬಾರಿ ವಿಫಲರಾದರೂ ಛಲ ಬಿಡದೆ ಪರೀಕ್ಷೆ ಎದುರಿಸಿದ್ದಾರೆ. ಇದು ಜಿಲ್ಲೆಯ ಪಾಲಿಗೆ ಶುಭ ಸೂಚನೆ. ಯುವಜನತೆ ಇದರಿಂದ ಸ್ಫೂರ್ತಿ ಪಡೆದು ಪರೀಕ್ಷೆ ಬರೆಯಬೇಕು. ನಮ್ಮ ಫೌಂಡೇಷನ್ನಿಂದ ಅದಕ್ಕೆ ಬೇಕಾದ ಪುಸ್ತಕ ಸೌಲಭ್ಯ ಕೊಡಲು ಸಿದ್ಧರಿದ್ದೇವೆ ಡಿ.ದೇವರಾಜ್ ಡಿಐಜಿಪಿ ಪೊಲೀಸ್ ತರಬೇತಿ

ಒಂದೆರಡು ವೈಫಲ್ಯಕ್ಕೆ ಕೈಚೆಲ್ಲಬೇಡಿ

ಐವರು ಹುಡುಗರು ಸತತವಾಗಿ ಪರಿಶ್ರಮ ಹಾಕಿ ಛಲ ಬಿಡದೆ ಸಾಧನೆ ಮಾಡಿದ್ದಾರೆ. ಕೆಲವರು ಐದಾರು ಬಾರಿ ಪ್ರಯತ್ನ ಹಾಕಿ ಉತ್ತೀರ್ಣರಾಗಿದ್ದಾರೆ. ಅವರೆಲ್ಲರಿಗೂ ನನ್ನ ಅಭಿನಂದನೆ. ಅವರೆಲ್ಲಾ ನನ್ನೂರಿನ ಸುತ್ತಮುತ್ತಲಿನ ಗ್ರಾಮದವರು. ಯಾವತ್ತೂ ಛಲ ಬಿಡಬಾರದು ಎನ್ನುವುದಕ್ಕೆ ಇವರೇ ಸಾಕ್ಷಿ. ಕೆಲವರು ಕಷ್ಟಪಡುತ್ತಾರೆ ಒಂದೆರಡು ಸಲ ವಿಫಲವಾದರೆ ಕೈಚೆಲ್ಲಿಬಿಡುತ್ತಾರೆ. ಆ ರೀತಿ ಆಗಬಾರದು. ಕೋಲಾರ ಜಿಲ್ಲೆ ಜನರು ಪರಿಶ್ರಮ ಜೀವಿಗಳು. ಜಿಲ್ಲೆಯಲ್ಲಿ ಕೃಷಿ ಬಿಟ್ಟರೆ ಬೇರೆ ಆಯ್ಕೆ ಇಲ್ಲ. ಹೀಗಾಗಿ ಶಿಕ್ಷಣ ಮಾತ್ರ ಅವರ ಬದುಕಲ್ಲಿ ಬದಲಾವಣೆ ತರಬಲ್ಲದು ಶಿಕ್ಷಣ ಮೂಲಕ ಬಡತನದಿಂದ ಹೊರಬರಬಹುದು. ಅವರಿಗಿರುವ ಏಕೈಕ ಸಂಪನ್ಮೂಲ ಶಿಕ್ಷಣ. ರ್ಯಾಂಕ್ ಬಂದವರನ್ನು ನೋಡಿ ಮತ್ತಷ್ಟು ಜನ ಯುಪಿಎಸ್ಸಿ ಪರೀಕ್ಷೆ ಬರೆಯಲು ಮುಂದಾಗಬೇಕು. ಹಳ್ಳಿಯಿಂದ ಬಂದಿದ್ದೇವೆ ಎಂಬ ಭಯ ಬಿಡಬೇಕು. ನಾನು ಮೊದಲ ರ್ಯಾಂಕ್ ಪಡೆದ ಬಳಿಕ ಗ್ರಾಮೀಣ ಭಾಗದಿಂದ ಪರೀಕ್ಷೆ ಬರೆಯುವವರು ಸಂಖ್ಯೆ ಹೆಚ್ಚಾಯಿತು. ನನ್ನಿಂದ ಪ್ರೇರಣೆ ಪಡೆದು ರ್ಯಾಂಕ್ ಬಂದರೆ ಅದು ನನ್ನ ಬದುಕಿನ ದೊಡ್ಡ ಸಾರ್ಥಕತೆ ಕೆ.ಆರ್.ನಂದಿನಿ ಜಿಲ್ಲಾ ಪಂಚಾಯಿತಿ ಸಿಇಒ ಮಂಡ್ಯ

ಜಿಲ್ಲೆಯಲ್ಲಿ ಸಂಭ್ರಮ ಪ್ರೇರಣೆ

ಯುಪಿಎಸ್ಸಿ ಪರೀಕ್ಷೆಯಲ್ಲಿ ಈ ಬಾರಿ ಐವರು ರ್ಯಾಂಕ್ ಪಡೆದಿರುವುದಕ್ಕೆ ಇಡೀ ಕೋಲಾರ ಜಿಲ್ಲೆಯಲ್ಲಿ ಸಂಭ್ರಮ ನೆಲೆಸಿದೆ. ನಾಗರಿಕ ಸೇವಾ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಪ್ರೇರಣೆ ಆಗಿ ಪರಿಣಮಿಸಿದೆ. ಈ ಬಾರಿಯ ಯುಪಿಎಸ್ಸಿ ಸಾಧಕರ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಗಳನ್ನು ಜನರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಭಿನಂದನೆಯ ಸುರಿಮಳೆ ಹರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.