ಕೋಲಾರ: ನಟ ಡಾಲಿ ಧನಂಜಯ್, ಕಿರುತೆರೆ ನಟರು, ಹಾಸ್ಯ ನಟರು ಹಾಗೂ ನೃತ್ಯ ಕಲಾವಿದರು ಭಾನುವಾರ ರಾತ್ರಿ ತಾಲ್ಲೂಕಿನ ವೇಮಗಲ್ ಹೋಬಳಿಯ ಸೀತಿ ಗ್ರಾಮದಲ್ಲಿ ಮನರಂಜನೆಯ ಹೊನಲು ಹರಿಸಿದರು.

ಗ್ರಾಮದಲ್ಲಿನ ಪುರಾಣಪ್ರಸಿದ್ಧ ಶ್ರೀ ಪತೇಶ್ವರ ಸ್ವಾಮಿ ಮತ್ತು ಶ್ರೀ ಭೈರವೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸೀತಿ ಹೊಸೂರು ಮುರುಳಿ ಗೌಡ ನೇತೃತ್ವದಲ್ಲಿ ಈ ರಸಮಂಜರಿ ಆಯೋಜಿಸಲಾಗಿತ್ತು.

‘ಐದು ವರ್ಷಗಳಿಂದ ಸೀತಿ ಜಾತ್ರೆಯಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ನನ್ನ ಕೆಲಸ ಸಹಿಸದ ತಾಲ್ಲೂಕಿನ ಪ್ರಭಾವಿ ಮುಖಂಡರೊಬ್ಬರು ಸೀತಿ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ರಸಮಂಜರಿ ನಡೆಯಬಾರದೆಂದು ಈ ಭಾಗದ ಸ್ಥಳೀಯ ಮುಖಂಡರಿಗೆ ತಿಳಿಸಿರುವುದು ಗೊತ್ತಾಗಿದೆ. ಆದರೆ, ಸ್ಥಳೀಯರ ಸಹಕಾರ ಕಾರಣ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಮುರುಳಿ ಗೌಡ ಹೇಳಿದರು.

ಕ್ಯಾಲನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಯುವಕರು ಕ್ರೀಡೆಯಲ್ಲಿ ಭಾಗವಹಿಸಿ ತಾಲ್ಲೂಕಿಗೆ, ಜಿಲ್ಲೆಗೆ, ರಾಜ್ಯಕ್ಕೆ ಉತ್ತಮ ಹೆಸರು ತಂದುಕೊಡಬೇಕು. ಜನರ ಆಶೀರ್ವಾದ ನನ್ನ ಮೇಲೆ ಇರುವ ತನಕ ಯಾರೂ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದರು.

ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಜಾತ್ರಾ ಮಹೋತ್ಸವ ಉತ್ತಮವಾಗಿ ನಡೆದಿದೆ. ಇಂಥ ಧಾರ್ಮಿಕ ಕಾರ್ಯಕ್ರಮಗಳಿಂದ ಕಾಲಕಾಲಕ್ಕೆ ಮಳೆ ಬೆಳೆಯಾಗಿ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ‘ಮುರುಳಿ ಗೌಡ ಹಲವು ವರ್ಷಗಳಿಂದ ಈ ಭಾಗದಲ್ಲಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಜಿಲ್ಲೆಯ ಯುವ ಜನತೆ ಕ್ರೀಡೆಯಲ್ಲಿ ಮುಂದೆ ಬರುವ ಉದ್ದೇಶದಿಂದ ಈ ಭಾಗದಲ್ಲಿ ಕ್ರಿಕೆಟ್ ಟೂರ್ನಿ ಆಯೋಜನೆ ಮಾಡುತ್ತಿದ್ದಾರೆ. ಇದರ ಸದುಪಯೋಗವನ್ನು ಯುವಕರು ಬಳಸಿಕೊಳ್ಳಬೇಕು’ ಎಂದರು.

ಪೊಲೀಸ್ ತರಬೇತಿ ಡಿಐಜಿಪಿ ಡಿ.ದೇವರಾಜ್ ಮಾತನಾಡಿ, ‘ಮುರುಳಿ ಗೌಡ ಬಡಪಾಯಿ ಕಲಾವಿದರನ್ನು ಕರೆಸಿ ಅವರ ಕಲೆಯನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ನಾನು ಕೋಲಾರದಲ್ಲಿ ಯುಗಾದಿ ಉತ್ಸವ ಮಾಡಿದ್ದೆ. ಅದೇ ರೀತಿ ಸೀತಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಸಿದ್ದಾರೆ’ ಎಂದು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಡಾ.ಡಿ.ಕೆ.ರಮೇಶ್, ಕೋಲಾರ ನಗರಸಭೆ ಮಾಜಿ ಸದಸ್ಯರಾದ ಮುರಳಿ, ಸೋಮಶೇಖರ್, ಕೆ.ಜಯದೇವ, ಓಬಿಸಿ ಮಂಜುನಾಥ, ಅಮ್ಮನಲ್ಲೂರು ಅಂಬರೀಶ್, ಚಿಕ್ಕಂಡಳ್ಳಿ ಮಂಜುನಾಥ್, ರಾಜ್ಯ ಕಾರ್ಮಿಕ ಪರಿಷತ್ ಘಟಕದ ಸದಸ್ಯ ರಾಮಪುರ ನವೀನ್ ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-18-1153484418

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.